Header Ads
Breaking News

ಹಾಲು ಮಾರಾಟಗಾರರಿಗೆ ಕೆಎಂಎಫ್ ಸಹಾಯ ಹಸ್ತ: ಅಧ್ಯಕ್ಷ ರವಿರಾಜ್ ಹೆಗ್ಡೆ ಅವರಿಂದ ಪ್ರಕಟಣೆ

ಕೋವಿಡ್-19ರ ಸಂಕಷ್ಠ ಸಂದರ್ಭದಲ್ಲಿ ಹಾಲು ಮಾರಾಟಗಾರರು ಗ್ರಾಹಕರಿಗೆ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಸಕಾಲದಲ್ಲಿ ಮಾರಾಟ ಮಾಡುತ್ತಿದ್ದು, ಕೋವಿಡ್ ಪರಿಸ್ಥಿತಿಯಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ಡೀಲರುಗಳನ್ನು ಪ್ರೋತ್ಸಾಹಿಸಲು ಹಾಗೂ ಮುಂಜಾಗ್ರತಾ ಕ್ರಮಗಳಿಗೆ ತಗಲುತ್ತಿರುವ ವೆಚ್ಚಕ್ಕಾಗಿ ಸಹಾಯ ಹಸ್ತ ನೀಡಲು ಉದ್ದೇಶಿಸಲಾಗಿರುತ್ತದೆ.

ಈ ಹಿನ್ನೆಲೆಯಲ್ಲಿ ದಿನಾಂಕ 10.06.2021 ರಿಂದ 10.07.2021ರ ಅವಧಿಗೆ ಎಲ್ಲಾ ಮಾದರಿಯ ನಂದಿನಿ ಹಾಲಿನ ಮಾರಾಟದ ಮೇಲೆ ಪ್ರತಿ ಕ್ರೇಟಿಗೆ ರೂ.2.40 (ಪ್ರತೀ ಲೀಟರಿಗೆ ರೂ.೦.2೦ರಂತೆ)ನ್ನು ಡೀಲರುಗಳ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾವಣೆ ಮಾಡಲು ಆಡಳಿತ ಮಂಡಲಿಯಲ್ಲಿ ತೀರ್ಮಾನಿಸಲಾಗಿದೆ ಎಂದು ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷರಾದ ರವಿರಾಜ ಹೆಗ್ಡೆಯವರು ತಮ್ಮ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

 

Related posts

Leave a Reply

Your email address will not be published. Required fields are marked *