Header Ads
Breaking News

ಹಾವು ಕಳ್ಳ ಸಾಗಾಟಕ್ಕೆ ಯತ್ನಿಸಿದ ಐವರು ಆರೋಪಿಗಳ ಬಂಧನ

Snake thief

ಕೇರಳದಿಂದ ಸುಳ್ಯ ಕಡೆಗೆ ಪ್ರಯಾಣಿಸುತ್ತಿದ್ದ ಕಾರಿನಲ್ಲಿ ಇಡ್ತಲೆ ಹಾವು ಮಾರಾಟ ಮಾಡಲು ಸಾಗಾಟ ಮಾಡುತ್ತಿದ್ದ ಐವರು ಕೇರಳ ಮೂಲದವರನ್ನು ಮಂಡೆಕೋಲು ಗ್ರಾಮದ ಮುರೂರು ರಾಜ್ಯ ಹೆದ್ದಾರಿಯಲ್ಲಿ ವಶಪಡಿಸಿಕೊಂಡ ಘಟನೆ ನಡೆದಿದೆ.

Snake thief

ಕೇರಳದ ಕಾಸರಗೋಡಿನಿಂದ ಸುಳ್ಯಕ್ಕೆ ಸ್ವಿಫ್ಟ್ ಕಾರಿನಲ್ಲಿ ಸುಮಾರು 8 ಕೆ.ಜಿ.ತೂಕದ ಇಡ್ತಲೆ ಹಾವನ್ನು ಸಾಗಿಸುತ್ತಿದ್ದಾಗ ಮುರೂರು ಚೆಕ್ ಪೊಸ್ಟ್ ಬಳಿ ವಾಹನ ತಪಾಸಣೆ ನಡೆಸುತ್ತಿರುವುದನ್ನು ಗಮನಿಸಿದ ಆರೋಪಿಗಳು ತಕ್ಷಣ ತಮ್ಮ ಕಾರನ್ನು ಅರಣ್ಯ ಪ್ರದೇಶದೊಳಗೆ ಚಲಾಯಿಸಿದನ್ನು ಗಮನಿಸಿದ ಪೊಲೀಸರ ತಂಡ ಅವರನ್ನು ಚೇಸ್ ಮಾಡಿ ನಿಲ್ಲಿಸಿ ಪರಿಶೀಲಿಸಿದ ಸಂದರ್ಭ ಹಾವನ್ನು ಮಾರಾಟ ಮಾಡುವ ಉದ್ದೇಶದಿಂದ ಕೊಂಡೊಯ್ಯುತ್ತಿರುವ ವಿಷಯ ಬೆಳಕಿಗೆ ಬಂದಿತು. ಕಾರಿನಲ್ಲಿದ್ದ ಐವರನ್ನು ಪೊಲೀಸರು ವಶಕ್ಕೆ ಪಡೆದು ಕಾರಿನಲ್ಲಿದ್ದ ನೋಟ್ ಕೌಂಟಿಂಗ್ ಮೆಷಿನ್ ಹಾಗೂ 2 ಸ್ವಿಫ್ಟ್ ಕಾರನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆಗಾಗಿ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವುದಾಗಿ ತಿಳಿದು ಬಂದಿದೆ.

Related posts

Leave a Reply

Your email address will not be published. Required fields are marked *