Header Ads
Breaking News

ಹಾಸನದಲ್ಲಿ ಲಾಕ್ ಡೌನ್ ಘೋಷಿಸಿ ಎರಡೇ ಗಂಟೆಯಲ್ಲಿ ಕ್ಯಾನ್ಸಲ್

Minister Gopalya

ಹಾಸನ ಜಿಲ್ಲೆಯಲ್ಲಿ ವಾರದ 4ದಿನ ಸಂಪೂರ್ಣ ಲಾಕ್ ಡೌನ್ ಎಂದು ಘೋಷಿಸಿದ ಜಿಲ್ಲಾ ಉಸ್ತುವಾರಿ ಸಚಿವರೇ ಲಾಕ್‍ಡೌನ್ ಕ್ಯಾನ್ಸಲ್ ಆಗಿದೆ ಎಂದು ಹೇಳಿಕೆ ನೀಡಿದ್ದಾರೆ.
ಹಾಸನದ ಜಿಲ್ಲಾ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯನವರು ನಾಳಿನಿಂದ ವಾರದ 4ದಿವಸ ಹಾಸನ ಜಿಲ್ಲೆ ತೀರ್ಮಾನಿಸಲಾಗಿದೆ. ಉಳಿದ 3 ದಿವಸ ಬೆಳಿಗ್ಗೆ 6 ರಿಂದ 10 ಗಂಟೆಯವರೆಗೆ ವ್ಯವಹಾರ ವಹಿವಾಟುಗಳನ್ನು ನಡೆಸಲು ಅವಕಾಶ ಕಲ್ಪಿಸಲಾಗಿದೆ ಎಂದು ಘೋಷಿಸಿದ್ದರು. ಆದರೆ ಘೋಷಿಸಿದ ಕೇವಲ ಎರಡೇ ಗಂಟೆ ಒಳಗಾಗಿ ಮಾಡಿದ ಆದೇಶವನ್ನು ಹಿಂದಕ್ಕೆ ಪಡೆಯಲಾಗಿದೆ ಹಾಗೂ ರಾಜ್ಯ ಸರ್ಕಾರದ ಹಾಗೂ ಕೇಂದ್ರ ಸರ್ಕಾರದ ಆದೇಶ ಬರುವವರೆಗೂ ಈ ಹಿಂದೆ ಇದ್ದಂತಹ ಜನತಾ ಕರ್ಫ್ಯೂ ಮುಂದುವರಿಯಲಿದೆ ಎಂದು ಕೂಡ ಸುದ್ದಿಗಾರರೊಂದಿಗೆ ತಿಳಿಸಿದ್ದಾರೆ.

 


Related posts

Leave a Reply

Your email address will not be published. Required fields are marked *