Header Ads
Breaking News

ಹಾಸನ : ಆದಿಜಾಂಬವ ಜಾಗೃತಿ ಮತ್ತು ಕಾವಲು ಸಮಿತಿ ಉದ್ಘಾಟನೆ

ಹಾಸನ ಜಿಲ್ಲೆ ಅರಸೀಕೆರೆ ತಾಲೂಕು ನಾಗವೇದಿ ಗ್ರಾಮದಲ್ಲಿ ಆದಿಜಾಂಬವ ಮತ್ತು ಜಾಗೃತಿ ಸಮಿತಿ ಹಾಗೂ ಜಾಮಿತ್ರ ಸಮರ್ಪಣಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಮುನ್ನ ಕೆಲವು ಪ್ರಮುಖ ಬೀದಿಗಳಲ್ಲಿ ಕಾಲ್ನಡಿಗೆಯ ಮೂಲಕ ಪಾದಯಾತ್ರೆ ಮಾಡಿದ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎನ್‌ಆರ್ ಸಂತೋಷ್ ರವರು ಗ್ರಾಮದ ಜನರ ಕುಂದು ಕೊರತೆಗಳನ್ನು ಆಲಿಸಿದರು. ನಂತರ ಆದಿಜಾಂಬವ ಜಾಗೃತಿ ಮತ್ತು ಸಮಿತಿಯನ್ನು ಉದ್ಘಾಟಿಸಿದರು. ಸಮಿತಿಯ ಅಧ್ಯಕ್ಷ ನಾಗವೇದಿ ರಂಗಪ್ಪ ಮಾತನಾಡಿ ಹಿಂದುಳಿದ ದಲಿತ ಶೋಷಿತ ಸಮಾಜಗಳನ್ನು ಜಾಗೃತಿ ಮೂಡಿಸಿ ಮತ್ತು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವುದು ಜನರನ್ನು ಶಿಕ್ಷಿತರನ್ನಾಗಿ ಮಾಡುವ ಮೂಲ ಉದ್ದೇಶ ಎಂದರು. ಈ ಕಾರ್ಯಕ್ರಮದಲ್ಲಿ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎನ್‌ಡಿ ಪ್ರಸಾದ್, ಸಮಾಜದ ಮುಖಂಡರಾದ ಕರಗುಂದ ರಮೇಶ್, ಸಮಿತಿಯ ಕಾರ್ಯದರ್ಶಿಯಾದ ಅರಕೆರೆ ಕಿರಣ್, ಜಾವಗಲ್ ಇಂದ್ರೇಶ್, ಶ್ರೀನಿವಾಸ್, ಮಲ್ಲೇಶಪ್ಪ, ಸ್ವಾಮಣ್ಣ ಚೆಲುವಯ್ಯ, ಉಮೇಶ್, ಶಾಂತರಾಜು,ಎಲ್ಲಾ ಪದಾಧಿಕಾರಿಗಳು ಮತ್ತು ಗ್ರಾಮಸ್ಥರು ಹಾಜರಿದ್ದರು.

Related posts

Leave a Reply

Your email address will not be published. Required fields are marked *