Header Ads
Breaking News

ಹಾಸನ : ಸಂತ ದೇವರ ದಾಸಿಮಯ್ಯನವರ ಜನ್ಮದಿನೋತ್ಸವ ಆಚರಣೆ

ಹಾಸನ ಜಿಲ್ಲೆ ಆಲೂರು ತಾಲ್ಲೂಕು ಆಡಳಿತ ಕಚೇರಿಯ ಆವರಣದಲ್ಲಿ ಕೊರೊನಾದ ಇರುವ ಕಾರಣ ಸರಳವಾಗಿ ಸಂತ ದೇವರ ದಾಸಿಮಯ್ಯನವರ ಜನ್ಮದಿನೋತ್ಸವವನ್ನು ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲ್ಲೂಕು ದಂಡಾಧಿಕಾರಿಗಳಾದ ಶರೀನ್ ತಾಜ್ ರವರು ವಹಿಸಿದ್ದರು. ದೀಪ ಬೆಳಗಿಸಿ ಮಾತನಾಡಿದ ಅವರು ಸಂತ ದೇವರ ದಾಸಿಮಯ್ಯನವರು ವಚನಕಾರರಲ್ಲೇ ಹಿರಿಯ ಪುರುಷನಾಗಿದ್ದು ನೇಕಾರರು ದೇವರ ದಾಸಿಮಯ್ಯನವರನ್ನು ತಮ್ಮ ಮೂಲ ಪುರುಷ ಎಂದು ಭಾವಿಸಿದ್ದಾರೆ ಶಿವಭಕ್ತನಾಗಿದ್ದು ಧಾರ್ಮಿಕತೆಯಲ್ಲಿ ತಮ್ಮ ಬದುಕನ್ನು ತೊಡಗಿಸಿಕೊಂಡವರು ಎಂದು ತಿಳಿಸಿದರು.

ಮುಖ್ಯ ಭಾಷಣಕಾರರಾಗಿ

ಮಾತನಾಡಿದ ಮಾಜಿ ಶಿಕ್ಷಕ ವಿಜಯಕಾಂತ್ ದೇವರದಾಸಿಮಯ್ಯ ಬೇರೆಯಲ್ಲ ಜೇಡರದಾಸಿಮಯ್ಯ ಬೇರೆಲ್ಲಾ ಇಬ್ಬರೂ ಒಂದೇ ಎಂಬ ಅಭಿಪ್ರಾಯವನ್ನು ಕೆಲವು ವಿದ್ವಾಂಸರು ಈಗಾಗಲೇ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು. ಈ ಕುರಿತಾಗಿ ವಿದ್ವಾಂಸರಲ್ಲಿ ಭಿನ್ನಾಭಿಪ್ರಾಯಗಳಿದ್ದು ಚರ್ಚೆಗಳು ಇಂದಿಗೂ ನಡೆಯುತ್ತಿವೆ ಎಂಬ ವಿಚಾರವನ್ನು ಕೂಡ ಮುಂದಿಟ್ಟರು ಅಲ್ಲದೆ ದೇವರ ದಾಸಿಮಯ್ಯ ಶಿವನನ್ನು ನಂಬಿಸಿ ಶಿವಭಕ್ತನಾದ ಈತ ಒಬ್ಬ ಮಹಾನ್ ಸಂತ ಹಾಗೂ ನೇಕಾರರ ಕೆಲಸವನ್ನು ಮಾಡುತ್ತಿದ್ದವನು ಜತೆಗೆ ಶಿವನಿಂದ ವರವನ್ನು ಪಡೆದ ಒಬ್ಬ ಮಹಾನ್ ಭಕ್ತ ಕೂಡ ಆಗಿದ್ಧರು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾ ಯಿತಿ ಮುಖ್ಯ ಕಾರ್ಯನಿರ್ವಾಹಕರಾದ ಸತೀಶ್. ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು, ಪಟ್ಟಣ ಪಂಚಾಯ್ತಿಯ ಮಾಜಿ ಉಪಾಧ್ಯಕ್ಷರಾದ ಮಂಜುನಾಥ್, ದೇವರ ದಾಸಿಮಯ್ಯ ಸಂಘದ ಗೌರವಾಧ್ಯಕ್ಷರಾದ ವೆಂಕಟೇಶ್, ಸಮಾಜದ ಸದಸ್ಯರು ಹಾಗೂ ತಾಲ್ಲೂಕು ಕಚೇರಿಯ ಸಿಬ್ಬಂದಿಗಳು ಅಧಿಕಾರಿಗಳು ಭಾಗವಹಿಸಿದ್ದರು

Related posts

Leave a Reply

Your email address will not be published. Required fields are marked *