Header Ads
Breaking News

ಹೆಜಮಾಡಿಯಲ್ಲಿ ಅಕ್ರಮ ಮರಳು ಸಾಗಾಟದ ವಾಹನ ವಶ

ಮಂಗಳೂರು ಕಡೆಯಿಂದ ಅಕ್ರಮವಾಗಿ ಮರಳು ತುಂಬಿಸಿಕೊಂಡು ಬರುತ್ತಿದ್ದ ಟಿಪ್ಪರನ್ನು ಹೆಜಮಾಡಿ ಚೆಕ್ ಪೋಸ್ಟ್ ಬಳಿ ತಡೆದು ನಿಲ್ಲಿಸಿದ ಕಾಪು ಕಂದಾಯ ನಿರೀಕ್ಷಕರ ತಂಡ ಮರಳು ಸಹಿತ ಟಿಪ್ಪರ್ ಹಾಗೂ ಚಾಲಕನನ್ನು ವಶಕ್ಕೆ ಪಡೆದು ಕೊಂಡಿದ್ದಾರೆ.ಪುತ್ತೂರು ನೋಂದಾಣಿ ಸಂಖ್ಯೆಯ ಕೆ.ಎ.21-ಎ. 6244 ಟಿಪ್ಪರ್ ಕೂಳೂರಿನಿಂದ ಮರಳು ತುಂಬಿಸಿಕೊಂಡು ಬಂದು ಹೆಜಮಾಡಿ ಚೆಕ್ ಪೋಸ್ಟ್ ನಲ್ಲಿ ನುಸುಳಲು ಯತ್ನಿಸುತ್ತಿದ್ದಂತೆ ಕಂದಾಯ ಇಲಾಖಾ ಅಧಿಕಾರಿಗಳು ವಾಹನವನ್ನು ಅಡ್ಡ ಹಾಕಿ ಮರಳು ಸಾಗಾಟದ ದಾಖಲೆ ನೀಡುವಂತೆ ಕೇಳಿದಾಗ ದಾಖಲೆ ನೀಡಲು ವಿಫಲವಾದ ಹಿನ್ನಲೆಯಲ್ಲಿ ವಾಹನವನ್ನು ವಶಕ್ಕೆ ಪಡೆದಿದ್ದಾರೆ. ವಾಹನ ವಶ ಪಡಿಸಿಕೊಳ್ಳುತ್ತಿದ್ದಂತೆ ಕಂದಾಯ ಅಧಿಕಾರಿಗಳಿಗೆ ಟಿಪ್ಪರ್ ಬಿಟ್ಟುಬಿಡುವಂತೆ ಬಹಳಷ್ಟು ಪ್ರಭಾವಿಗಳ ಕರೆ ಬಂದಿದ್ದರೂ, ಕ್ಯಾರೇ ಅನ್ನದ ಕಂದಾಯ ಅಧಿಕಾರಿಗಳು ಟಿಪ್ಪರನ್ನು ಕಾಪು ತಹಶಿಲ್ದಾರರ ವಶಕ್ಕೆ ನೀಡಿದ್ದಾರೆ.ಸ್ಥಳಕ್ಕೆ ಆಗಮಿಸಿದ ಭೂ ವಿಜ್ಜಾನಿ ಮಹೇಶ್ ರವರು 50,800 ರೂಪಾಯಿ ಟಿಪ್ಪರ್ ಮಾಲಿಕರಿಂದ ದಂಡ ವಸೂಲಿ ಮಾಡಿದ್ದಾರೆ.

Related posts

Leave a Reply

Your email address will not be published. Required fields are marked *