Header Ads
Breaking News

ಹೊಳೆನರಸೀಪುರ : ಜಮೀನು ವಿವಾದಕ್ಕೆ ಮೂವರ ಕೊಲೆ

ಹೊಳೆನರಸೀಪುರ ತಾಲೂಕಿನ ಮಾರಗೌಡನಹಳ್ಳಿ ಗ್ರಾಮದಲ್ಲಿ ಜಮೀನು ವಿವಾದಕ್ಕೆ ಮೂರು ಜನರ ಕೊಲೆ ಯಾಗಿರುವ ಹೃದಯವಿದ್ರಾವಕ ಘಟನೆ ನಡೆದಿದೆ.
ಮಲ್ಲೇಶ, ರವಿ, ಮಂಜೇಶ, ಮೃತ ವ್ಯಕ್ತಿಗಳ ಆಗಿದ್ದು ದಾಯಾದಿಗಳಾದ ಸ್ವಾಮಿಗೌಡ ಮತ್ತು ಇವರಿಗೂ ಗ್ರಾಮದಲ್ಲಿರುವ 2.25 ಜಮೀನಿಗೆ ಭೂಮಿ ವಾದವಿದ್ದು, ಈ ಹಿನ್ನೆಲೆಯಲ್ಲಿ ಸ್ವಾಮಿ ಗೌಡ ಮತ್ತಿತರರು ಈ ಮೂವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ ಎಂದು ಹೇಳಲಾಗಿದೆ.
ಜಮೀನಿನಲ್ಲಿ ಟ್ರ್ಯಾಕ್ಟರ್ ಉಳುವಾಗ ವಾದ-ವಿವಾದಗಳು ಎದ್ದು ಇವರಿಬ್ಬರ ಗುಂಪುಗಳ ನಡುವೆ ಜಗಳವಾಗಿ ಕೊಲೆಯಲ್ಲಿ ಅಂತ್ಯವಾಗಿದೆ. ಅತಿವ ರಕ್ತಸ್ರಾವವಾಗಿದ್ದರೆ ಮೂವರನ್ನು ಹೊಳೆನರಸೀಪುರ ಸಾರ್ವಜನಿಕ ಆಸ್ಪತ್ರೆಗೆ ಕರೆತರಲಾಯಿತು. ಚಿಕಿತ್ಸೆ ಫಲಿಸದೆ ಮೂವರು ಮೃತಪಟ್ಟಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

 

Related posts

Leave a Reply

Your email address will not be published. Required fields are marked *