Header Ads
Breaking News

ಹೋಂ ಐಸೋಲೇಶನ್‍ನಲ್ಲಿರುವವರಿಗೆ ಕಿಟ್ ವಿತರಣೆ

ಪುತ್ತೂರು: ನಗರಸಭೆಯ ವ್ಯಾಪ್ತಿಯಲ್ಲಿ ಹೋಂ ಐಶೋಲೇಶನ್ನಲ್ಲಿರುವ ಕೋವಿಡ್ ಸೋಂಕಿತರಿಗೆ ಶಾಸಕರ ವಾರ್ ರೂಂ ಮೂಲಕ ಐಶೋಲೇಷನ್ ಕಿಟ್ ವಿತರಣೆಯು ಪುರಭವನದಲ್ಲಿ ನಡೆಯಿತು. 

ಕಿಟ್ ವಿತರಿಸಿದ ಶಾಸಕ ಸಂಜೀವ ಮಠಂದೂರು ಮಾತನಾಡಿ, ಪುತ್ತೂರಿನ ತಜ್ಞ ವೈದ್ಯರ ತಂಡ ಸಲಹೆಯಂತೆ ಸುಮಾರು 500 ಮಂದಿಗೆ ರೂ.250 ಬೆಲೆಯ ಔಷಧೀಯ ಕಿಟ್ ನ್ನು ಸುಮಾರು ರೂ.1ಲಕ್ಷ ವೆಚ್ಚದಲ್ಲಿ ವಿತರಿಸಲಾಗುತ್ತಿದೆ. ಇದರ ವೆಚ್ಚವನ್ನು ರಾಜೇಶ್ ಪವರ್ ಪ್ರೆಸ್ ನಮ್ಹಾಲಕ ರಘುನಾಥ ರಾವ್ ರವರು ಭರಿಸಿರುತ್ತಾರೆ. ಪ ಕಿಟ್ ಗಳನ್ನು ಗ್ರಾಮಾಂತರ ಪ್ರದೇಶಗಳಿಗೂ ವಿಸ್ತರಿಸಲಾಗುತ್ತಿದ್ದು ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳ ಮೂಲಕ ವಿತರಿಸಲಾಗುತ್ತಿದ್ದು ಇದು ಪುತ್ತೂರಿನಲ್ಲಿಯೇ ಪ್ರಥಮವಾಗಿದೆ ಎಂದರು. ಪ್ರಂಟ್ ಲೈನ್ ವಾರಿಯರ್ಸ್ ಗಳಾಗಿರುವ ಆರೋಗ್ಯ ಇಲಾಖೆ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ಪ್ರತಿಯೊಬ್ಬರ ಸಮಾಜದ ಜನರ ಆರೋಗ್ಯದ ಕಾಳಜಿಯ ಸೇವೆಯಿಂದಾಗಿ ಇಂದು ನಿಯಂತ್ರಣಕ್ಕೆ ಬರುವಲ್ಲಿ ಕಾರಣವಾಗಿದೆ. ನಿಮ್ಮ ಸೇವೆ ಇದೇ ರೀತಿ ಮುಂದುವರಿದು ಕೊರೋನಾ ಮುಕ್ತ ಪುತ್ತೂರು ನಿರ್ಮಾಣವಾಗಬೇಕು ಎಂದರು.ಕಿಟ್ ಸಂಪೂರ್ಣ ಪ್ರಾಯೋಜಕರಾದ ರಾಜೇಶ್ ಪವರ್ ಪ್ರೆಸ್ ನ ಮ್ಹಾಲಕ ರಘುನಾಥ ರಾವ್ ರವರನ್ನು ಈ ಸಂದರ್ಭದಲ್ಲಿ ಶಾಸಕರು ಶಾಲು ಹೊದಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ನಗರ ಸಭಾ ಅಧ್ಯಕ್ಷ ಜೀವಂಧರ್ ಜೈನ್ ಉಪಾಧ್ಯಕ್ಷೆ ವಿದ್ಯಾ ಗೌರಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಗೌರಿ ಬನ್ನೂರು, ಪೂಡಾದ ಅಧ್ಯಕ್ಷ ಬಾಮಿ ಅಶೋಕ್ ಶೆಣೈ, ಕಚೇರಿ ಸಹಾಯಕ ರವೀಂದ್ರ, ಪ್ರಭಾರ ಪೌರಾಯುಕ್ತ ಶಬರೀನಾಥ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *