Header Ads
Breaking News

2ನೇ ದಿನವೂ ವಾರಾಂತ್ಯದ ಕರ್ಫ್ಯೂಗೆ ಮಂಗಳೂರು ಸ್ತಬ್ಧ

ಕೊರೋನ ಸೋಂಕು ನಿಯಂತ್ರಣಕ್ಕೆ ರಾಜ್ಯ ಸರಕಾರ ಹೊರಡಿಸಿದ ಆದೇಶದಂತೆ ವಾರಾಂತ್ಯದ ಕರ್ಫ್ಯೂಗೆ ಮಂಗಳೂರಿನಲ್ಲಿ ಭಾನುವಾರವೂ ಉತ್ತಮ ಸ್ಪಂದನೆ ಸಿಕ್ಕಿದೆ.

ಸಾರ್ವಜನಿಕರಿಗೆ ಅಗತ್ಯ ಸೇವೆ ನೀಡುವ ಸಲುವಾಗಿ ಅಂಗಡಿ ಮುಂಗಟ್ಟುಗಳ ಮಾಲಕರು, ಕೆಲಸಗಾರರು ಭಾನುವಾರ ಬೆಳಗ್ಗೆ 6 ಗಂಟೆಗೆ ಸಜ್ಜಾಗಿದ್ದುದು ಕಂಡುಬಂತು. ಒಂದೆಡೆ ಪೊಲೀಸರ ಭಯ, ಇನ್ನೊಂದೆಡೆ ಕೋವಿಡ್ 19ರ ತೀವ್ರತೆಯ ಬಗ್ಗೆ ಮನಗಂಡಿರುವ ನಾಗರಿಕರು ಅನಗತ್ಯ ತಿರುಗಾಟಕ್ಕೆ ಕಡಿವಾಣ ಹಾಕಿರುವುದು ವ್ಯಕ್ತವಾಗುತ್ತಿತ್ತು. ಅಂಗಡಿಗಳ ಮುಂದೆ ನೂಕುನುಗ್ಗಲು ಕಾಣಿಸಲಿಲ್ಲ. ಅಗತ್ಯ ಸಾಮಗ್ರಿಗಳನ್ನು ಖರೀದಿಸಿ ಮನೆಯತ್ತ ಮರಳುತ್ತಿದ್ದಾರೆ. ಅಗತ್ಯ ವಾಹನಗಳಷ್ಟೇ ಸಂಚರಿಸುತ್ತಿತ್ತು.

 ಇನ್ನು ನಗರದಲ್ಲಿ ಖಾಸಗಿ ಬಸ್ ಸಂಚಾರವು ಶನಿವಾರದಂತೆ ಭಾನುವಾರವೂ ಸ್ಥಗಿತಗೊಂಡಿದೆ. ಹಾಗಾಗಿ ನಗರದ ಆಯಕಟ್ಟಿನ ಪ್ರದೇಶ, ಮಾರುಕಟ್ಟೆ, ಜನನಿಬಿಡ ಸ್ಥಳಗಳು ಬಿಕೋ ಎನ್ನುತ್ತಿತ್ತು. ಬೆಳಗ್ಗಿನ ಹೊತ್ತು ದಿನಸಿ, ತರಕಾರಿ, ಹಣ್ಣುಹಂಪಲು, ಹಾಲು, ಮೀನು ಮಾಂಸ ಸೇರಿದಂತೆ ಅಗತ್ಯ ವಸ್ತುಗಳ ಅಂಗಡಿಗಳು, ಮಾರುಕಟ್ಟೆಗಳು ಮಾತ್ರ ತೆರೆದಿವೆ. ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಿಗೆ ಮಾತ್ರ ಬೆರಳೆಣಿಕೆಯ ಸರಕಾರಿ ಬಸ್ಸುಗಳು ಸಂಚರಿಸುತ್ತಿದೆ. ಕೆಲವೇ ಕೆಲವು ಹೋಟೆಲ್‌ಗಳು ತೆರೆದಿದ್ದು, ಅಲ್ಲಿ ಆಹಾರ- ತಿಂಡಿಗಳ ಪಾರ್ಸೆಲ್‌ಗಳ ಸರಬರಾಜಿಗೆ ವ್ಯವಸ್ಥೆ ಕಲ್ಪಿಸಲಾಗಿದೆ.

Related posts

Leave a Reply

Your email address will not be published. Required fields are marked *