Header Ads
Breaking News

2 ದಿನಗಳ ಲಾಕ್‍ಡೌನ್ ಬಳಿಕ ಮೂಡುಬಿದ್ರೆಯಲ್ಲಿ ವಾಹನಗಳ ದಟ್ಟಣೆ

ಎರಡು ದಿನಗಳ ಲಾಕ್ ಡೌನ್ ನ್ನಿಂದಾಗಿ ನೀರಾಳವಾಗಿದ್ದ ಮೂಡುಬಿದಿರೆಯಲ್ಲಿ ಇಂದು ವಾಹನಗಳ ದಟ್ಟಣೆ, ಅಧಿಕ ಜನ ಸಂದಣಿಯಿಂದ ಕೂಡಿತ್ತು. ಅಗತ್ಯ ವಸ್ತುಗಳ ಖರೀದಿಗಿಂತಲೂ ಇತರ ಜನರ ಓಡಾಟವೇ ಹೆಚ್ಚಾಗಿತ್ತು. ಅಲ್ಲದೆ ಜ್ಯುವೆಲ್ಲರಿ ಶಾಪ್ ಗಳು, ಬಟ್ಟೆಯ ಅಂಗಡಿಗಳು, ಮೊಬೈಲ್ ಶಾಫ್ ಗಳು ಸಹಿತ ಇತರ ಅಂಗಡಿಗಳು ತೆರೆದುಕೊಂಡಿದ್ದು ವಸ್ತುಗಳ ಖರೀದಿಗಾಗಿ ಜನರು ದುಂಬಾಲು ಬಿದ್ದಿದ್ದು ಕೊರೋನಾ ವೈರಸ್ ಹರಡುವಿಕೆಗೆ ಸುಲಭವಾಗಿತ್ತು. ಸುಮಾರು 11.00 ಗಂಟೆಯ ವೇಳೆಗೆ ಮೂಡುಬಿದಿರೆ ಪೊಲೀಸ್ ನಿರೀಕ್ಷಕ ಬಿ.ಎಸ್. ದಿನೇಶ್ ಕುಮಾರ್ ಅವರು ರೌಂಡ್ಸ್ ಬಂದು ಧ್ವನಿವರ್ಧಕದ ಮೂಲಕ ಮಾತನಾಡಿ ಅಗತ್ಯ ವಸ್ತುಗಳ ಮಾರಾಟಕ್ಕೆ ಮಾತ್ರ ಅವಕಾಶ ಇರುವುದರಿಂದ ಎಲ್ಲರೂ ಸಹಕರಿಸಬೇಕೆಂದು ಕೇಳಿಕೊಂಡದ್ದಲ್ಲದೆ, ಎಚ್ಚರಿಕೆಯನ್ನು ನೀಡಿದರಿಂದ ಬಟ್ಟೆ ಅಂಗಡಿ, ಚಿನ್ನದ ಅಂಗಡಿಗಳು ಹಾಗೂ ಇತರ ಅಗತ್ಯ ಸೇವೆಗಳ ಹೊರತಾದ ಅಂಗಡಿಗಳ ಮಾಲಕರುಗಳು ತಕ್ಷಣ ಬಂದ್ ಮಾಡಿದರು. ಅಲ್ಲದೆ ಜನ ಸಂದಣಿಯು ಕಡಿಮೆಯಾಯಿತು.
ಅಲ್ಲದೆ ಹೊಟೇಲ್ ಗಳಿಗೆ ಪಾರ್ಸಲ್‍ಗಳಿಗೆ ಅವಕಾಶವಿದ್ದರೂ ಕೆಲವು ಹೊಟೇಲ್ ಮಾಲಕರು ಜನರ ಸಂಖ್ಯೆ ಕಡಿಮೆಯಾದ ಹಿನ್ನಲೆಯಲ್ಲಿ ಬಂದ್ ಮಾಡಿದರು.

Related posts

Leave a Reply

Your email address will not be published. Required fields are marked *