Header Ads
Breaking News

2 ದಿನ ಸ್ತಬ್ಧವಾಗಿದ್ದ ನಗರದಲ್ಲಿ ಮತ್ತೆ ಕಾರ್ಯ ಚಟುವಟಿಕೆ ಆರಂಭ

ಕಳೆದ ಎರಡು ದಿನಗಳ ಕಾಲ ವೀಕೆಂಡ್ ಕರ್ಪ್ಯೂನಿಂದ ಸ್ತಬ್ಧವಾಗಿದ್ದ ನಗರದಲ್ಲಿ ಇಂದು ಮತ್ತೆ ಅಗತ್ಯ ಸೇವೆಗಳೊಂದಿಗೆ ಕಾರ್ಯ ಚಟುವಟಿಕೆ ಆರಂಭಗೊಂಡಿದೆ. ರಸ್ತೆಗಳಲ್ಲಿ ಖಾಸಗಿ ಬಸ್ ಸಂಚಾರ ಸೇರಿದಂತೆ ವಾಹನ ಸಂಚಾರ ಆರಂಭಗೊಂಡಿದೆ. ರಾತ್ರಿ ಕರ್ಪ್ಯೂ ಆರಂಭಗೊಳ್ಳುವವರೆಗೆ ವಾಹನ ಸಂಚಾರಕ್ಕೆ ಅವಕಾಶ ಇರಲಿದೆ. ಸರಕಾರದ ಆದೇಶದಂತೆ ಮೇ 4ರವರೆ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದ ಅಂಗಡಿ, ಮಾಲ್, ಮಳಿಗೆಗಳು ತೆರೆಯಲು ಅವಕಾಶ ಇರುವುದಿಲ್ಲ. ಉಳಿದಂತೆ ದಿನಸಿ, ತರಕಾರಿ, ಹಾಲು, ಔಷಧ, ಕಟ್ಟಡ ನಿರ್ಮಾಣ ಸಾಮಗ್ರಿಗಳ ಅಂಗಡಿಗಳಿಗೆ ಅವಕಾಶವಿದೆ.
ವೀಕೆಂಡ್ ಕರ್ಪ್ಯೂ ಹಿನ್ನೆಲೆಯಲ್ಲಿ ಬೆಳಗ್ಗೆ ಅಗತ್ಯ ವಸ್ತುಗಳ ಖರೀದಿಗೆ ವಿನಾಯಿತಿ ಅವಧಿಯಲ್ಲೂ ಎರಡು ದಿನ ಬಹುತೇಕ ಸ್ತಬ್ಧವಾಗಿದ್ದ ನಗರದಲ್ಲಿ ವಾಹನ ಸಂಚಾರ ಚುರುಕುಗೊಂಡಿವೆ.

Related posts

Leave a Reply

Your email address will not be published. Required fields are marked *