Header Ads
Breaking News

50 ಲಕ್ಷ ಅಭಿವೃದ್ಧಿ ಕಾಮಗಾರಿ ಶಾಸಕ ಡಾ.ಭರತ್ ಶೆಟ್ಟಿಯವರಿಂದ ಪರಿಶೀಲನೆ

ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಪಾಲಿಕೆ ವ್ಯಾಪ್ತಿಯ ಕುಂಜತ್ತಬೈಲು ದಕ್ಷಿಣ 15 ನೇ ವಾರ್ಡಿನ ಗಾಂಧಿನಗರ 2 ನೇ ಅಡ್ಡರಸ್ತೆ ಅಗಲಿಕರಣ ಮತ್ತು ಚರಂಡಿ ರಚನೆಯ ಕಾಮಗಾರಿಯ ಪ್ರಗತಿ ಪರಿಶೀಲನೆಯನ್ನು ಶಾಸಕರಾದ ಡಾ.ವೈ ಭರತ್ ಶೆಟ್ಟಿಯವರು  ನಡೆಸಿದರು.

ಶಾಸಕ ಡಾ.ಭರತ್ ಶೆಟ್ಟಿಯವರ ವಿಶೇಷ ಶಿಫಾರಸ್ಸಿನ ಮೇರೆಗೆ ರಾಜ್ಯ ಸರಕಾರದ ಲೋಕೋಪಯೋಗಿ ಇಲಾಖೆಯಿಂದ 50 ಲಕ್ಷ ರೂಪಾಯಿ ಅನುದಾನ ಬಿಡುಗಡೆಯಾಗಿದ್ದು ಕಾಮಗಾರಿ ಬಿರುಸಿನಿಂದ ಸಾಗಿದೆ.

ಶಾಸಕರೊಂದಿಗೆ ಉಪಮೇಯರ್ ಸುಮಂಗಲಾ, ರಣದೀಪ್ ಕಾಂಚನ್ ಜಿಲ್ಲಾ ಮಾಧ್ಯಮ ಪ್ರಮುಖ್,ಶಿತೇಶ್ ಕೊಂಡೆ ಮಹಾಶಕ್ತಿ ಕೇಂದ್ರ ಕಾರ್ಯದರ್ಶಿ,ಶಾನ್ವಾಜ್ ಅಲ್ಪಸಂಖ್ಯಾತ ಮೋರ್ಚಾ ಪ್ರಮುಖರು, ಪಕ್ಷದ ಪ್ರಮುಖರಾದ ಅನಿಲ್ ಶೆಟ್ಟಿ, ಜಗದೀಶ್ ಶೆಟ್ಟಿ, ಅಜಿತ್ ಶೆಟ್ಟಿ,ದಿಲೀಪ್, ಹಾಗೂ ಪಕ್ಷದ ಇನ್ನಿತರರು ಉಪಸ್ಥಿತರಿದ್ದರು

Related posts

Leave a Reply

Your email address will not be published. Required fields are marked *