Header Ads
Breaking News

8 ಊಟ ಪಾರ್ಸಲ್ ಬಗ್ಗೆ ತನಿಖೆ : ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಗರಂ

shakunthala shetty

ಪುತ್ತೂರು : ಪುತ್ತೂರಿನ ಇಂದಿರಾ ಕ್ಯಾಂಟಿನ್ ನಿಗೆ ಮಂಗಳವಾರ ಭೇಟಿ ನೀಡಿದ ಶಾಸಕ ಸಂಜೀವ ಮಠಂದೂರು ಅಲ್ಲಿ ಒಬ್ಬನೇ ವ್ಯಕ್ತಿ ಎಂಟು ಪಾರ್ಸಲ್ ಊಟ ತೆಗೆದುಕೊಂಡು ಹೋದ ಬಗ್ಗೆ ತನಿಖೆ ನಡೆಸುವಂತೆ ಪುತ್ತೂರು ನಗರ ಸಭೆ, ಜಿಲ್ಲಾಧಿಕಾರಿ ಹಾಗೂ ಯೋಜನಾಧಿಕಾರಿಗೆ ಸೂಚಿಸಿರುವುದರ ಬಗ್ಗೆ ಮಾಜಿ ಶಾಸಕಿ ಶಕುಂತಲ ಶೆಟ್ಟಿಯವರು ಕಟು ಟೀಕಾಪ್ರಹಾರ ಮಾಡಿದ್ದಾರೆ.

ಇಂದು ಪುತ್ತೂರಿನ ಕಾಂಗ್ರೇಸ್ ಕಛೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಬಡ ಜನರಿಗೆ ಊಟ, ಮನೆ ವಸತಿ ಒದಗಿಸಬೇಕಾದ ಶಾಸಕರು ಇಂದಿರಾ ಕ್ಯಾಂಟೀನ್‍ನಿಂದ ಕೇವಲ 8 ಊಟ ತಗೊಂಡು ಹೋದ ವಿಚಾರವನ್ನು ಪತ್ತೆ ಮಾಡಲು ಹೊರಟಿರುವುದು ನಾಚಿಕೇಗೆಡು. ಇವರೊಬ್ಬ ನಾಲಯಕ್ ಶಾಸಕ ಎಂದು ಟೀಕಿಸಿದ್ದಾರೆ.ಶಾಸಕರ ಜತೆಯಲ್ಲಿದ್ದುಕೊಂಡು ಅವರದೇ ಕಛೇರಿಯಲ್ಲಿ ಕುಳಿತುಕೊಂಡು 94 ಸಿ ಯೋಜನೆಯಲ್ಲಿ ಬಡವರಿಂದ ಹಣ ತಗೊಂಡವರನ್ನು ಪತ್ತೆ ಮಾಡಲಾಗದ ಶಾಸಕರು ಕೇವಲ ಒಂದಷ್ಡು ಊಟ ತಗೊಂಡು ಹೋದವರನ್ನು ಪತ್ತೆ ಮಾಡುಲು ಮುಂದಾಗಿರುವುದು ದುರಾದೃಷ್ಟಕರ ಎಂದು ಕಿಡಿಕಾರಿದರು. ಇಂದಿರಾ ಕ್ಯಾಂಟೀನ್‍ನಿಂದ 8 ಊಟ ತಗೊಂಡು ಹೋದವರನ್ನು ಕೋಟಿ, ಕೋಟಿ ನುಂಗಿದವರಂತೆ ಬಿಂಬಿಸಿ ದೊಡ್ಡ ರಾದ್ದಾಂತ ಮಾಡುತ್ತಿರುವ ಶಾಸಕರಿಗೆ ಬಡವರ ಹಸಿವಿನ ಅರಿವಿಲ್ಲ ಇವರ ಈ ಮಹತ್ಕಾರ್ಯಕ್ಕೆ ಇವರಿಗೆ ಮತ ನೀಡಿ ಗೆಲ್ಲಿಸಿದ ಮತದಾರರರು ದೊಡ್ಡ ಪ್ರಶಸ್ತಿ ನೀಡಬೇಕು ಎಂದು ಅವರು ವ್ಯಂಗ್ಯವಾಡಿದರು.shakunthala shetty

ವೇದಿಕೆಯಲ್ಲಿ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಬಡಗನ್ನೂರು, ಪ್ರಧಾನ ಕಾರ್ಯದರ್ಶಿ ಕೃಷ್ಣ ಪ್ರಸಾದ್ ಆಳ್ವ, ಕಾರ್ಯದರ್ಶಿ ರೋಷಣ್ ರೈ ಬನ್ನೂರು, ನಗರ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಆಲಿ, ಕೆಪಿಸಿಸಿ ಸದಸ್ಯ ಎಂ.ಬಿ ವಿಶ್ವನಾಥ ರೈ, ದ.ಕ ಜಿಲ್ಲಾ ಸಹಕಾರಿ ಯೂನಿಯನ್‍ನ ಅಧ್ಯಕ್ಷ ಬೆಳ್ಳಿಪ್ಪಾಡಿ ಮೊದಲಾದವರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *