Header Ads
Breaking News

94 ಸಿ ಯೋಜನೆಯಡಿ ಅವ್ಯವಹಾರ : ಕಾನೂನು ಕ್ರಮಕ್ಕೆ ಆಗ್ರಹ

ಬೆಳ್ತಂಗಡಿ ತಾಲೂಕಿನ ನ್ಯಾಯತರ್ಪು ಗ್ರಾಮದಲ್ಲಿ 94 ಸಿ ಯೋಜನೆಯಡಿ ಒಂದೇ ಏರಿಯಾದಲ್ಲಿ ಸುಮಾರು 34 ಮಂದಿಗೆ ಹಕ್ಕುಪತ್ರ ನೀಡಿ ಅವ್ಯಹಾರ ನಡೆಸಿದ್ದಲ್ಲದೆ ಈ ಅಕ್ರಮ ಮಂಜೂರಾತಿಗಾಗಿ 25 ಸಾವಿರ ರೂ ಪಡೆದು ಅವ್ಯವಹಾರ ನಡೆಸಿದ್ದು, ಈ ಕುರಿತು ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಬೆಳ್ತಂಗಡಿ ತಾಲೂಕು ಕಳಿಯ ಗ್ರಾಮದ ಬಿ.ಹೆಚ್.ಆದಂ ಶಾಫಿ ಆಗ್ರಹಿಸಿದ್ದಾರೆ.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಈ ಆರೋಪ ಮಾಡಿದ್ದು, ಕಳಿಯ ಗ್ರಾಮದ ಬಟ್ಟೆಮಾರು ನಿವಾಸಿ ಕೆ.ಎಮ್.ಅಬ್ದುಲ್ ಕರೀಂ ಎಂಬವರು 94 ಸಿ ಹಕ್ಕುಪತ್ರ ಪಡೆಯುವ ಉದ್ದೇಶಕ್ಕಾಗಿ ದೃಢಪತ್ರ ನೀಡಿದ್ದು, ಈ ಆಧಾರದಿಂದ ಅಗತ್ಯ ದಾಖಲೆಗಳನ್ನು ಇತರ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಶಾಮೀಲಾಗಿ ತನ್ನ ಹೆಸರಿನಲ್ಲಿ 94ಸಿ ಯೋಜನೆಯಡಿ ಮನೆ ಮಂಜೂರು ಮಾಡಿದ್ದಲ್ಲದೆ ತನ್ನ ಬಾವನ ಪತ್ನಿ ಸಿಯಾಬ್ ಡಿ. ಎಂಬವರ ಹೆಸರಿನಲ್ಲೂ ಮನೆ ಮಂಜೂರು ಮಾಡಿ ದೊಡ್ಡಮಟ್ಟದಲ್ಲಿ ಅವ್ಯವಹಾರ ನಡೆಸಿರುವುದು ಕಂಡು ಬಂದಿದೆ. ಅಲ್ಲದೆ ಕಳೆದ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಲು ಚುನಾವಣಾಧಿಕಾರಿಗೆ ಸುಳ್ಳು ದಾಖಲೆಗಳನ್ನು ನೀಡಿ ಸ್ಪರ್ಧಿಸಿ ಆಯ್ಕೆಯಾಗಿದ್ದಾರೆ. ಇವೆಲ್ಲದರ ಕುರಿತು ಎಸಿಬಿ ಅಧಿಕಾರಿಗಳಿಗೆ ದೂರು ನೀಡಿದ್ದೆ. ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ತನಿಖೆ ನಡೆಸಿದ್ದು, ಇದೀಗ 34 ಹಕ್ಕುಪತ್ರಗಳ ಪೈಕಿ ಎಂಟು ಹಕ್ಕುಪತ್ರಗಳನ್ನು ರದ್ದುಪಡಿಸಿದ್ದಾರೆ. ಆದರೂ ಆರೋಪಿ ಕರೀಂ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ತಕ್ಷಣ ಈ ಅಕ್ರಮ ಅವ್ಯವಹಾರದಲ್ಲಿ ಪಾಲ್ಗೊಂಡವರು ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಅಲ್ಲದೆ ಪಂಚಾಯಿತಿ ಸದಸ್ಯತನವನ್ನು ರದ್ದುಗೊಳಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

Related posts

Leave a Reply

Your email address will not be published. Required fields are marked *