Header Ads
Breaking News

‘ನಾವೂ ಬದುಕಬೇಕು’ ಎಂಬ ಘೋಷಣೆಯೊಂದಿಗೆ ಖಾಲಿ ತಟ್ಟೆ ಮತ್ತು ಚೀಲ ಹಿಡಿದು ಪ್ರತಿಭಟನೆ

‘ನಾವೂ ಬದುಕಬೇಕು’ ಎಂಬ ಘೋಷಣೆಯೊಂದಿಗೆ ಖಾಲಿ ತಟ್ಟೆ ಮತ್ತು ಚೀಲ ಹಿಡಿದು ರಾಜ್ಯದ ಹೆಚ್ಚಿನ ಜಿಲ್ಲೆ, ತಾಲೂಕು ಮತ್ತು ಗ್ರಾಮಗಳಲ್ಲಿ ಜನ ಮನೆಯ ಅಂಗಳ ಮತ್ತು ಬೀದಿಗೆ ಬಂದು ಸರಕಾರದ ವಿರುದ್ಧ ಪ್ರತಿಭಟನೆ ನಡೆಸಿದರು. ಜನಾಗ್ರಹ ಆಂದೋಲನದ ಕರೆಯ ಮೇರೆಗೆ ನಡೆದ ಸಾಂಕೇತಿಕ ಪ್ರತಿಭಟನೆಯಲ್ಲಿ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದ ಎಲ್ಲ ಜನರಿಗೂ ಕೊರೊನ ಚಿಕಿತ್ಸೆ ಮತ್ತು ವ್ಯಾಕ್ಸಿನ ಉಚಿತವಾಗಿ ನೀಡಬೇಕು. ಎಲ್ಲ ಬಿ.ಪಿ.ಎಲ್. ಕಾರ್ಡ್’ದಾರರಿಗೆ ಅಕ್ಕಿ, ಎಣ್ಣೆ, ಬೇಳೆ ಒಳಗೊಂಡಂತೆ ಸಮಗ್ರ ದಿನಸಿ ಉಚಿತವಾಗಿ ನೀಡಬೇಕು. ಮಾಸಿಕ 5000/-ರೂ. ನೆರವು ಧನ ನೀಡಬೇಕು. ಕೊರೊನದಿಂದ ಮಡಿದ ಕುಟುಂಬಗಳಿಗೆ 5ಲಕ್ಷ ರೂಪಾಯಿ ಪರಿಹಾರ ನೀಡಬೇಕು.

ಚಾಮರಾಜನಗರದಲ್ಲಿ ಆಕ್ಸಿಜನ್ ಕೊರತೆಯಿಂದ ಮೃತರಾದ 37 ಕುಟುಂಬಗಳಿಗೆ ತಲಾ 10 ಲಕ್ಷ ರೂ. ಪರಿಹಾರ ನೀಡಬೇಕು, ಕೊರೊನಾ ಟೆಸ್ಟ್ ಗಳನ್ನ ಜಾಸ್ತಿ ಮಾಡಿ 24ಗಂಟೆಯೊಳಗೆ ವರದಿ ಕೊಡಬೇಕು, ಗ್ರಾಮೀಣ ಭಾಗದಲ್ಲೂ ಕೋವಿಡ್ ಸೆಂಟರ್ ಗಳನ್ನು ಪ್ರಾರಂಭ ಮಾಡಿ ಗ್ರಾಮ ಮಟ್ಟದಲ್ಲಿ ಹೆಚ್ಚಾಗುತ್ತಿರುವ ರೋಗವನ್ನ ತಡೆಗಟ್ಟಬೇಕು ಹಾಗೂ ರೈತರಿಗೆ ವಿಶೇಷ ಸಬ್ಸಿಡಿ ಪ್ಯಾಕೇಜ್ ಘೋಷಿಸಬೇಕು ಎಂಬ ಹಕ್ಕೊತ್ತಾಯವನ್ನು ಪ್ರತಿಭಟನಾಕಾರರು ಸರಕಾರದ ಮುಂದಿಟ್ಟರು.

 

Related posts

Leave a Reply

Your email address will not be published. Required fields are marked *