CPIM ಹಿರಿಯ ಸದಸ್ಯ ಮೋನಪ್ಪ ಬಂಗೇರ ನಿಧನ

CPIM ಪಕ್ಷದ ಹಿರಿಯ ಸದಸ್ಯರೂ, ಬಜಾಲ್ ಜಲ್ಲಿಗುಡ್ಡ ಪ್ರದೇಶದ ನಿವಾಸಿಗಳಾದ ಮೋನಪ್ಪ ಬಂಗೇರರವರು(78 ವರ್ಷ) ದೀರ್ಘಕಾಲದ ಅಸೌಖ್ಯದಿಂದಾಗಿ ಬಜಾಲ್ ಜಲ್ಲಿಗುಡ್ಡೆಯಲ್ಲಿರುವ ತಮ್ಮ ಸ್ವಗ್ರಹದಲ್ಲಿ ನಿಧನ ಹೊಂದಿದರು.

ಎಳೆಯ ಪ್ರಾಯದಲ್ಲೇ ಎಡಪಂಥೀಯ ವಿಚಾರಧಾರೆಗೆ ಆಕರ್ಷಿತರಾದ ಮೋನಪ್ಪ ಬಂಗೇರರವರು ತಮ್ಮ ಯೌವನದಲ್ಲಿ ಹಂಚು ಕಾರ್ಮಿಕರಾಗಿ ಹಂಚು ಕಾರ್ಮಿಕರ ಅನೇಕ ಹೋರಾಟಗಳಲ್ಲಿ ಸಕ್ರೀಯ ಪಾತ್ರ ವಹಿಸಿದ್ದರು. ಸ್ಥಳೀಯ ಸಂಘ ಸಂಸ್ಥೆಗಳಾದ ಪಕ್ಕಲಡ್ಕ ಯುವಕ ಮಂಡಲ ಹಾಗೂ ಜನತಾ ವ್ಯಾಯಾಮ ಶಾಲೆಗಳಲ್ಲೂ ಕ್ರಿಯಾಶೀಲ ಪಾತ್ರವಹಿಸಿದ ಮೋನಪ್ಪರವರು, ಬಜಾಲ್ ಪ್ರದೇಶದ ದುಡಿಯುವ ವರ್ಗದ ಚಳುವಳಿಯ ಬೆಳವಣಿಗೆಗೆ ತಮ್ಮದೇ ಕೊಡುಗೆಯನ್ನು ನೀಡಿದ್ದಾರೆ. ಮ್ರದು ಸ್ವಬಾವದ ಸರಳ ಸಜ್ಜನಿಕೆಯ ಮೋನಪ್ಪ ಬಂಗೇರರವರು ಪಕ್ಷದ ಬಗ್ಗೆ ಅಪಾರ ಗೌರವವನ್ನು ಹೊಂದಿದ್ದು,ತನ್ನ ಕೊನೆಯ ಉಸಿರಿನರೆಗೂ ಪಕ್ಷದ ಸದಸ್ಯರಾಗಿದ್ದು,ಅವರ ಅಗಲುವಿಕೆ ಬಜಾಲ್ ಗ್ರಾಮದ ಕಾರ್ಮಿಕ ವರ್ಗದ ಚಳುವಳಿಗೆ ತುಂಬಲಾರದ ನಷ್ಟವಾಗಿದೆ ಎಂದು CPIM ತನ್ನ ಭಾವಪೂರ್ಣ ಶ್ರದ್ಧಾಂಜಲಿ ಯಲ್ಲಿ ತಿಳಿಸಿದೆ.

ಅಂತ್ಯಕ್ರಿಯೆಯಲ್ಲಿ CPIM ದ.ಕ.ಜಿಲ್ಲಾ ನಾಯಕರಾದ ಸುನಿಲ್ ಕುಮಾರ್ ಬಜಾಲ್, ಸಂತೋಷ್ ಬಜಾಲ್,CPIM ಮಂಗಳೂರು ನಗರ ಮುಖಂಡರಾದ ಸುರೇಶ್ ಬಜಾಲ್,ಸ್ಥಳೀಯ CPIM ನಾಯಕರಾದ ಅಶೋಕ್ ಸಾಲ್ಯಾನ್, ದೀಪಕ್ ಬಜಾಲ್, ವರಪ್ರಸಾದ್,ಜಯಪ್ರಕಾಶ್,ಮೋಹನ್ ಜಲ್ಲಿಗುಡ್ಡ ಮುಂತಾದವರು ಹಾಜರಿದ್ದರು.

ಮೋನಪ್ಪ ಬಂಗೇರರವರು ಪತ್ನಿ,ಇಬ್ಬರು ಹೆಣ್ಣು,ಮೂವರು ಗಂಡು ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Related Posts

Leave a Reply

Your email address will not be published.