ಕೇಂದ್ರದ ನೀತಿ ವಿರುದ್ಧ ಸಿಐಟಿಯು ಪ್ರತಿಭಟನೆ
ಮಂಜೇಶ್ವರ: ಕೇಂದ್ರ ಸರ್ಕಾರ 15 ವರ್ಷಗಳ ಹಿಂದಿನ ವಾಹನಗಳನ್ನು ಗುಜುರಿಗೆ ಹಾಕಬೇಕೆಂಬ ಸರಕಾರದ ತೀರ್ಮಾನ ವನ್ನು ಪ್ರತಿಭಟಿಸಿ ರಿಕ್ಷಾ ಚಾಲಕರ ಯೂನಿಯನ್ citu ಬಂದ್ಯೋಡ್ ಅಂಚೆ ಕಛೇರಿ ಮುಂಭಾಗದಲ್ಲಿ ಪ್ರತಿಭಟನಾ ಧರಣಿ ನಡೆಸಿತು. Aiks ರಾಜ್ಯ ಸಮಿತಿ ಸದಸ್ಯರಾದ ಕಾಂ ಕೆ .ಆರ್ ಜಯಾನಂದ ಧರಣಿಗೆ ಚಾಲನೆ ನೀಡಿ ಮಾತನಾಡಿದರು.
ಜನವಿರೋಧಿಯಾಗಿರುವ ಕೇಂದ್ರ ಸರಕಾರದ ನಿಲುವಿನ ವಿರುದ್ಧ ವ್ಯಾಪಕ ಜನಾಕ್ರೋಶ ವ್ಯಕ್ತವಾಗುತ್ತಿದೆ. ದುಡಿದು ಜೀವಿಸುತ್ತಿರುವ ಜೀವಗಳ ಬಾಳಿಗೆ ಮುಳ್ಳಾಗುತ್ತಿರುವ ರೀತಿಯ ಆದೇಶಗಳನ್ನು ಸರಕಾರ ಹಿಂಪಡೆಯಬೇಕಾಗಿದೆ ಎಂದು ಅವರು ಹೇಳಿದರು. ಪ್ರಶಾಂತ್ ಕನಿಲ ಅಧ್ಯಕ್ಷತೆ ವಹಿಸಿದರು. ಅರಿಫ್ ಅಡ್ಕ, ಕಾಂ ಪಿ ಎಂ ಆರಿಫ್ ಮೊದಲಾದವರು ನೇತೃತ್ವ ನೀಡಿದರು.