ಕೊಟ್ಟಾರ ಶ್ರೀ ವಿದ್ಯಾ ಸರಸ್ವತಿ ಕ್ಷೇತ್ರ : ಬೆಣ್ಣೆ ರಂಗಪೂಜೆ
ಕೊಟ್ಟಾರ ಶ್ರೀ ವಿದ್ಯಾ ಸರಸ್ವತಿ ಕ್ಷೇತ್ರದಲ್ಲಿ ದಿನಾಂಕ 30-08-2021ರ ಶ್ರೀಕೃಷ್ಣ ಜನ್ಮಾಷ್ಟಮಿಯಂದು ಬೆಳಿಗ್ಗೆ ಪಂಚಾಮೃತ ಅಭಿಷೇಕ, ಶ್ರೀಕೃಷ್ಣ ಅಷ್ಟೋತ್ತರ ಶತನಾಮಾವಳಿ, ನೆರವೇರಿ ಮಧ್ಯಾಹ್ನ 12-30 ಕ್ಕೆ ಅಲಂಕಾರ ಪೂಜೆ ರಾತ್ರಿ 07-30 ಕ್ಕೆ ಮಹಾಪೂಜೆ ನೆರವೇರಿ ಮಧ್ಯರಾತ್ರಿ 12: 30ರ ಚಂದ್ರೋದಯದ ಶ್ರೀಕೃಷ್ಣ ಜನ್ಮ ಸಮಯದಲ್ಲಿ 21 ಬಗೆಯ ಮಿಠಾಯಿ 21 ಬಗೆಯ ಹಣ್ಣು ಹಂಪಲು ಶ್ರೀಕೃಷ್ಣ ದೇವರಿಗೆ ಸಮರ್ಪಣೆ ಮಾಡಲಾಯಿತು. ಮಾರನೇ ದಿವಸ ಮೊಸರುಕುಡಿಕೆ ಯಂದು ಸಾಯಂಕಾಲ ಪ್ರತಿವರ್ಷದಂತೆ ಈ ವರ್ಷವೂ ಧರ್ಮರಕ್ಷಣಾ ಮೊಗವೀರ ವೇದಿಕೆಯ ಪರವಾಗಿ ಬೆಣ್ಣೆ ರಂಗಪೂಜೆ ಮಹಾಪೂಜೆ ನೆರವೇರಿ ಬಂದ ಭಕ್ತಾದಿಗಳಿಗೆ ಬೆಣ್ಣೆ ರಂಗ ಪೂಜೆಯ ಪ್ರಸಾದ ವಿತರಿಸಲಾಯಿತು ಮತ್ತು ಅನ್ನದಾನ ನೆರವೇರಿತು. ಈ ಪೂಜಾ ವಿಧಿ ವಿಧಾನವನ್ನು ಪ್ರಧಾನ ಅರ್ಚಕ ನವೀನ್ ಚಂದ್ರ ಶ್ರೀಯಾನ್ ಸಹ ಅರ್ಚಕ ನಿಕಿತ್ ಎನ್ ಶ್ರೀಯಾನ್ ನೆರವೇರಿಸಿದರು. ಶ್ರೀ ಕ್ಷೇತ್ರದ ಮುಖ್ಯಸ್ಥರಾದ ತುಳಸಿ ಎನ್ ಶ್ರೀಯಾನ್, ನಿವೇದಿತಾ ಎನ್ ಶ್ರೀಯಾನ್, ಸುಲೋಚನ ಚಿಲಿಂಬಿ, ಶಿಕ್ಷಕಿ ಆಶಾಲತಾ, ಪಾಯಲ್ ಮೆಂಡನ್, ಅಶ್ವಿನಿ ಸಾಲಿಯಾನ್, ಕವಿತಾ ರಮೇಶ್, ಮಂಜುಳ ಕೊಟ್ಟಾರ, ರಮನಾಥ ಪೈ, ರವಿರಾಜ್ ಅಮೀನ್, ಮತ್ತು ಮೊದಲಾದವರು ಉಪಸ್ಥಿತರಿದ್ದರು.