Header Ads
Breaking News

ಭೂವಿವಾದದ ಹಿನ್ನೆಲೆ ದಾಯಾದಿಗಳ ನಡುವೆ ಕಲಹ : ನಾಲ್ವರ ಕೊಲೆ

HOLE NARASIPURA
HOLE NARASIPURA

ಹೊಳೆನರಸೀಪುರ: ಭೂವಿವಾದದ ಹಿನ್ನೆಲೆಯಲ್ಲಿ ದಾಯಾದಿಗಳ ನಡುವೆ ನಡೆದ ಹೊಡೆದಾಟದಲ್ಲಿ ನಾಲ್ವರು ಕೊಲೆಯಾಗಿರುವ ಸ್ಥಳಕ್ಕೆ ದಕ್ಷಿಣ ವಲಯದ ಐಜಿಪಿ ಪ್ರವೀಣ್ ಪವಾರ್ ಅವರು ಇಂದು ಭೇಟಿ ನೀಡಿ ಪರಿಶೀಲಿಸಿದರು.

ತಾಲೂಕಿನ ಕಸಬಾ ಹೋಬಳಿ ಮಾರಗೌಡನಹಳ್ಳಿ ಗ್ರಾಮದಲ್ಲಿ ಸೋಮವಾರ ನಡೆದ ಘಟನೆಗೆ ಸಂಬಂಧಿಸಿದಂತೆ ಪರಿಶೀಲಿಸಿದ ಅವರು ಈ ಘಟನೆಗೆ ಕಾರಣಕರ್ತರಾದ ವರನ್ನು ಕೂಡಲೇ ಬಂಧಿಸುವುದಾಗಿ ತಿಳಿಸಿದರು. ಈ ವಿವಾದದ ಬಗ್ಗೆ ಹೊಳೆನರಸೀಪುರ ಪೆÇಲೀಸ್ ಠಾಣೆಯ ಅಧಿಕಾರಿಗಳಿಂದ ಸಂಪೂರ್ಣ ಮಾಹಿತಿ ಪಡೆದಿದ್ದು ಕೂಡಲೇ ಶಿಸ್ತುಕ್ರಮ ಜರುಗಿಸುವುದಾಗಿ ಹೇಳಿದರು. ಈಗಾಗಲೇ ಮಾಧ್ಯಮಗಳಲ್ಲಿ ಈ ವಿಷಯಕ್ಕೆ ಸಂಬಂಧಿಸಿದಂತೆ ಪ್ರಕಟವಾಗಿದ್ದು ತನಿಖೆ ನಡೆಸಲು ಜಿಲ್ಲಾ ವರಿಷ್ಠಾಧಿಕಾರಿ ಶ್ರೀನಿವಾಸಗೌಡ ಹಾಗೂ ಅಪಾರ ಜಿಲ್ಲಾ ವರಿಷ್ಠಾಧಿಕಾರಿ ನಂದಿನಿ ಅವರಿಗೆ ತನಿಖೆ ನಡೆಸಲು ತಿಳಿಸಿದ್ದೇನೆ ಎಂದರು.HOLENARASIPURA
ಜಿಲ್ಲಾ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ ಅವರು ಮಾತನಾಡಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗಲಾಟೆ ಮಾಡಿಕೊಂಡವರು ಒಂದೇ ಕುಟುಂಬದವರಾಗಿದ್ದು ದಾಯಾದಿಗಳು ಜಮೀನು ವಿವಾದಕ್ಕೆ ಸಂಬಂಧಪಟ್ಟಂತೆ ಕೋರ್ಟ್ ಮೆಟ್ಟಲೇರಿದ್ದು ಅದರಲ್ಲಿ ಮಲ್ಲೇಶ್ ಎಂಬುವರ ಕುಟುಂಬಕ್ಕೆ ತೀರ್ಪು ಆಗಿದ್ದು ಇವರಿಬ್ಬರ ನಡುವೆ ಜಗಳ ನಡೆದು ನಾಲ್ವರು ಕೊಲೆಯಾಗಿದ್ದು ಈ ಕೊಲೆಗೆ ಸಂಬಂಧಪಟ್ಟವರನ್ನು ಹುಡುಕುತ್ತಿದ್ದು ಅತಿಶೀಘ್ರದಲ್ಲೇ ಬಂದಿಸಿ ಜೈಲಿಗಟ್ಟುವುದಾಗಿ ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ಡಿವೈಎಸ್ಪಿ ಲಕ್ಷ್ಮೇಗೌಡ. ಸಿಪಿಐ ಆರ್ ಅಶೋಕ್. ಪಿಎಸ್‍ಐ ಗಳಾದ ವಿನಯ್ ಕುಮಾರ್.. ಸಿಬ್ಬಂದಿಗಳು ಹಾಜರಿದ್ದರು.

Related posts

Leave a Reply

Your email address will not be published. Required fields are marked *