ಚೇತನ್ ಫೌಂಡೇಶನ್ನಿಂದ ಆಹಾರ ಕಿಟ್ ವಿತರಣೆ
ಹಾಸನದ ಚೇತನ ಫೌಂಡೇಶನ್ ಸದಸ್ಯರು ಹಾಸನ ಬಳಿ ವಾಸವಾಗಿರುವ ಸಿಳ್ಳೆಕ್ಯಾತ ಜನಾಂಗದವರಿಗೆ ಆಹಾರ ಕಿಟ್ ಅನ್ನು ನೀಡಿ ಮಾನವೀಯತೆಯನ್ನು ಮೆರೆದಿದ್ದಾರೆ ಈಗಾಗಲೇ ಚಲನಚಿತ್ರ ನಟ ಚೇತನ್ ಅವರು ಇಂಥ ಕೆಲಸಗಳನ್ನು ಕಳೆದ ಹಲವಾರು ವರ್ಷಗಳಿಂದ ಮಾಡುತ್ತಾ ಬಂದಿದ್ದು ಕೊಡಗಿನಲ್ಲೂ ಭೂಕುಸಿತ ಆದ ಸಂದರ್ಭದಲ್ಲಿಯೂ ಕೂಡ ಅಲ್ಲಿನ ಜನರಿಗೆ ಸಹಾಯಕ್ಕೆ ನಿಂತಿದ್ದರು ಹಾಗೆಯೇ ಇಂದು ಚಲನಚಿತ್ರ ನಟರು ಸಾಕಷ್ಟು ಜನ ಸಂಕಷ್ಟದಲ್ಲಿದ್ದವರ ಬೆನ್ನೆಲುಬಾಗಿ ನಿಂತು ಅವರಿಗೆ ಸಹಾಯವನ್ನು ಮಾಡುತ್ತಿದ್ದಾರೆ.
ಈ ಆಹಾರ ಕಿಟ್ ವಿತರಣೆಯಲ್ಲಿ ಹಾಸನ ಜಿಲ್ಲಾ ಸದಸ್ಯರಾದ ಶರತ್, ದೀಪಕ್, ಶಶಿಕುಮಾರ್ ವಾಸು, ಭಾನುಪ್ರಕಾಶ್ ಮುಂತಾದವರು ಹಾಜರಿದ್ದರು