ತಿರಸ್ಕೃತದ ಪುಸ್ತಕಕ್ಕೆ ಮತ್ತೊಮ್ಮೆ ಮಣೆ : ಮಂಗಳೂರು ವಿ.ವಿ. ಪುಸ್ತಕ ವಿವಾದ !!

ಮಂಗಳೂರು ವಿಶ್ವವಿದ್ಯಾನಿಯಲದ ಪ್ರಸಾರಾಂಗದ ಸಂಶೋಧನಾ ಮಾಲಕೆಯ ಕೃತಿ ಪ್ರಕಟನೆಯಲ್ಲಿ ಈ ಹಿಂದೆ ತಿರಸ್ಕೃತವಾಗಿದ್ದ ಪುಸ್ತಕಕ್ಕೆ ಇದೀಗ ವಿಶ್ವವಿದ್ಯಾನಿಲಯದ ಅಧಿಕೃತ ಮುದ್ರೆ ಲಭಿಸುವ ಸಾಧ್ಯತೆ ಕಂಡು ಬಂದಿದೆ.

ಮಂಗಳೂರು ನಗರದ ಕಾಲೇಜೊಂದರ ನಿವೃತ್ತ ಉಪನ್ಯಾಸಕ ಡಾ.ಪಿ. ಅನಂತಕೃಷ್ಣ ಭಟ್ ಅವರು ಬರೆದಿರುವ “ಭಾರತ ಸಂವಿಧಾನ ” ಎಂಬ ಕನ್ನಡ ಕೃತಿ ಹಾಗೂ ಆಂಗ್ಲ ಭಾಷೆಯ ” ಇಂಡಿಯನ್ ಕ್ವಾನ್ಸಿಟಿಟ್ಯೂಶನ್ ” ಎಂಬ ಪುಸ್ತಕಕ್ಕೆ ವಿಶ್ವವಿದ್ಯಾನಿಲಯವು ವಿ.ವಿ. ಲಾಂಛನದ ಮುದ್ರೆ ಒತ್ತಲು ಮುಂದಾಗಿದೆ.

ಈ ಪುಸ್ತಕವನ್ನು ಭಾರತದ ಸ್ವಾತಂತ್ರ್ಯೋತ್ಸವದ 75 ನೇ ವರ್ಷದ ಅಮೃತ ಮಹೋತ್ಸವ ಪ್ರಯುಕ್ತ ವಿಶ್ವವಿದ್ಯಾನಿಯಲಯದ ಘಟಕ ಕಾಲೇಜು, ಸ್ನಾತಕೋತ್ತರ ಕೇಂದ್ರ ಹಾಗೂ ವಿ.ವಿ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕ- ಶಿಕ್ಷಕೇತರ ಸಿಬ್ಬಂದಿಗಳಿಗೆ ಸ್ಮರಣಿಕೆ ರೂಪದಲ್ಲಿ ವಿಶ್ವವಿದ್ಯಾನಿಲಯದ ಲಾಂಛನದೊಮದಿಗೆ ನೀಡುವ ಉದ್ದೇಶವಿದೆ ಎಂದು ಜುಲೈ 23 ರಂದು ನಡೆದ ವಿ.ವಿ.ಸಿಂಡಿಕೇಟ್ ಸಭೆಯ ಅಜೆಂಡದಲ್ಲಿ ಪ್ರಸ್ತಾಪಿಸಲಾಗಿತ್ತು.

ಈ ವಿಚಾರಕ್ಕೆ ಕೆಲವೊಂದು ಸದಸ್ಯರು ಆಕ್ಷೇಪ ಸೂಚಿಸಿದ ಹಿನ್ನೆಲೆಯಲ್ಲಿ ಉಲ್ಲೇಖಿತ ಈ ಪುಸ್ತಕದ ಬಗ್ಗೆ ಪರಿಶೀಲನೆ ಮಾಡಲು ಸಮಿತಿಯೊಂದನ್ನು ರಚಿಸಲಾಗಿತ್ತು. ಸಮಿತಿಯ ಅಧ್ಯಕ್ಷರಾಗಿ ವಿ.ವಿ. ಕುಲಸಚಿವ ಪ್ರೊ.ಪಿ.ಎಲ್.ಧರ್ಮ ಹಾಗೂ ಸದಸ್ಯರಾಗಿ ವಿ.ವಿ. ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಜಯರಾಜ್ ಅಮೀನ್ , ಆಂಗ್ಲ ವಿಭಾಗದ ಪ್ರಾಧ್ಯಾಪಕರಾದ ಡಾ.ಪರಿಣಿತ , ಹಾಗೂ ಕನ್ನಡ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ.ಸೋಮಣ್ಣ ಅವರು ಸಮಿತಿಯಲ್ಲಿದ್ದಾರೆ. ಪುಸ್ತಕದ ಬಗ್ಗೆ ಆಕ್ಷೇಪಗಳಿದ್ದರೆ ಲಿಖಿತವಾಗಿ ತಿಳಿಸುವಂತೆ ಸಿಂಡಿಕೇಟ್ ಸದಸ್ಯರುಗಳಿಗೆ ಕೂಡ ತಿಳಿಸಲಾಗಿದೆ.

2017 ರಲ್ಲಿ ತಿರಸ್ಕೃತವಾಗಿದ್ದ ಪುಸ್ತಕ :
ಡಾ.ಪಿ.ಅನಂತಕೃಷ್ಣ ಭಟ್ ಅವರು ಬರೆದಿರುವ ” ಭಾರತ ಸಂವಿಧಾನ ” ಎಂಬ ಹಸ್ತಪ್ರತಿಯನ್ನು ಈ ಹಿಂದೆಯೊಮ್ಮೆ 2017 ರಲ್ಲಿ ವಿಶ್ವವಿದ್ಯಾನಿಲಯಕ್ಕೆ ಪುಸ್ತಕವಾಗಿ ಪ್ರಕಟಿಸಲು ಅರ್ಜಿ ಸಲ್ಲಿಸಲಾಗಿತ್ತು. ಆದರೆ ಆ ಸಂದರ್ಭದಲ್ಲಿ ಗುಣಮಟ್ಟ ಚೆನ್ನಾಗಿಲ್ಲ ಹಾಗೂ ಪ್ರಕಟಣೆಗೆ ಯೋಗ್ಯವಾಗಿಲ್ಲ ಎಂಬ ಕಾರಣದಿಂದ ಈ ಪ್ರಸ್ತಾವನೆಯನ್ನು ತಿರಸ್ಕøರ ಮಾಡಲಾಗಿತ್ತು.

2017 ರಲ್ಲಿ ಡಾ. ಅನಂತ ಕೃಷ್ಣ ಭಟ್ ಅವರ ” ಭಾರತ ಸಂವಿಧಾನ ” ಕೃತಿಯ ಹಸ್ತಪ್ರತಿಯು ವಿಶ್ವವಿದ್ಯಾನಿಲಯದ ಪ್ರಸಾರಂಗದ ಮುಂದೆ ಬಂದಿತ್ತು. ಈ ಸಂದರ್ಭದಲ್ಲಿ ಪ್ರಸಾರಂಗವು 2017 ರ ಮೇ 10 ರಂದು ಆದೇಶ ನೀಡಿ (ಆದೇಶ ಸಂಖ್ಯೆ. ಮಂವಿ/ಪ್ರಸಾ/ 22-17-18 ) ಈ ಹಸ್ತಪ್ರತಿಯ ಪ್ರಕಟಣಾ ಯೋಗ್ಯತೆ ಬಗ್ಗೆ ಅಭಿಪ್ರಾಯ ಸೂಚಿಸುವಂತೆ ಅಂದಿನ ವಿ.ವಿ ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಪ್ರೊ.ರಾಜಾರಾಂ ತೋಳ್ಪಾಡಿ ಅವರನ್ನು ಕೇಳಿತ್ತು.

ಈ ಆದೇಶದಂತೆ ಹಸ್ತಪ್ರತಿಯ ಬಗ್ಗೆ ಪರಿಶೀಲಿಸಿ ವರದಿ ನೀಡಿದ ಪ್ರೋ. ರಾಜಾರಾಂ ತೋಳ್ಪಾಡಿ ಅವರು ಕೃತಿಯು ಒಂದು ಅಧ್ಯಯನಶೀಲ ಪುಸ್ತಕವಾಗಿಲ್ಲ ಎಂದು ವರದಿ ಕೊಟ್ಟಿದ್ದರು.

ಪ್ರೋ.ರಾಜಾರಾಂ ತೋಳ್ಪಾಡಿ ಅವರು ತನ್ನ ವರದಿಯಲ್ಲಿ , ಈ ಹಸ್ತಪ್ರತಿಯ ಬಗ್ಗೆ ಉಲ್ಲೇಖಿಸುತ್ತಾ , “ಭಾರತ ಸಂವಿಧಾನ ಹೇಗೆÉ 19 ನೇ ಶತಮಾನದ ಸಮಾಜ ಸುಧಾರಣ ಪ್ರಯತ್ನಗಳಲ್ಲಿ ಹಾಗೂ 20 ನೇ ಶತಮಾನದ ಸ್ವಾತಂತ್ರ್ಯ ಹೋರಾಟದ ಪ್ರಕ್ರಿಯೆಯಲ್ಲಿ ಮಥನಗೊಂಡ ಮಾಲ್ಯಗಳನ್ನು ಪ್ರತಿನಿಧಿಸುತ್ತದೆ ಎನ್ನುವ ಕುರಿತು ನಡೆದಿರುವ ಅಧ್ಯಯನಗಳನ್ನು ಈ ಕೃತಿ ಗಮನಿಸುವುದಿಲ್ಲ ” ಸಂವಿಧಾನ ಸಭೆಯ ಅತ್ಯಂತ ನಿಬಿಡವಾದ ಚರ್ಚೆಗಳಲ್ಲಿ ಹೇಗೆ ಈ ಮಾಲ್ಯಗಳು ಪ್ರತಿಫಲನಗೊಂಡು ಸಂವಿಧಾನದ ರೂಪವನ್ನು ಪಡೆದುಕೊಳ್ಳುತ್ತದೆ ಅನ್ನುವ ವಿಷಯದ ಬಗ್ಗೆ ವಿಶೇಷವಾದದ್ದೇನನ್ನು ಈ ಕೃತಿ ಹೇಳುವುದಿಲ್ಲ, ಹಾಗಾಗಿ , ಭಾರತದ ಸಂವಿಧಾನದ ಕುರಿತಾದ ಒಂದು ಅಧ್ಯಯನ ಶೀಲ ಪುಸ್ತಕವಾಗಿಲ್ಲ, ಈ ಕೃತಿಯು ಸ್ನಾತಕ ಅಥವಾ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಸೂಕ್ತವಾದ ಮಾರ್ಗದರ್ಶಿ ಪುಸ್ತಕವಾಗಿಲ್ಲ , ವಿಮಾರ್ಶಾ ಮನೋಭಾವದ ಸಾಮಾನ್ಯ ಓದುಗನಿಗೂ ಸೂಕ್ತವಾದ ಪುಸ್ತÀಕವೆಂದು ನನಗೆ ಅನಿಸುವುದಿಲ್ಲ ಎಂದು ತೋಳ್ಪಾಡಿ ಅವರು ತನ್ನ ವರದಿಯಲ್ಲಿ ತಿಳಿಸಿದ್ದರು.

ಪ್ರೋ.ರಾಜಾರಾಂ ತೋಳ್ಪಾಡಿಯವರು ಈ ಹಸ್ತಪ್ರತಿಯು ಪ್ರಕಟಣೆಗೆ ಯೋಗ್ಯವಾಗಿಲ್ಲ ಎಂದು ವರದಿಕೊಟ್ಟ ಬಳಿಕ 2018ರ ಜನವರಿ 2 ರಂದು ವಿ.ವಿ. ಪ್ರಸಾರಂಗವು ಡಾ.ಅನಂತಕೃಷ್ಣ ಭಟ್ ಅವರಿಗೆ ಪತ್ರ ಬರೆದು ಹಸ್ತಪ್ರತಿಯ ಬಗ್ಗೆ ಸಲ್ಲಿಕೆಯಾದ ಪರಿಶೀಲನಾ ವರದಿಯನ್ನು ಉಲ್ಲೇಖಿಸಿ, ಹಸ್ತಪ್ರತಿಯನ್ನು ಪರಿಷ್ಕರಣೆ ಮಾಡುವಂತೆ ಸೂಚಿಸಿತ್ತು.
ಪ್ರಸಾರಂಗವು ಪರಿಕ್ಷರಣೆ ಮಾಡಲೂ ಸೂಚಿಸಿದ್ದರೂ ಪ್ರಸ್ತುತ ಲೇಖಕರು ಯಾವುದೇ ಪರಿಷ್ಕರಣೆ ಮಾಡಿ ಕೊಟ್ಟಿಲ್ಲ ಎನ್ನಲಾಗಿದೆ. ಆದರೆ ಇದೀಗ ಎರಡೂವರೆ ವರ್ಷದ ಬಳಿಕ ಇದೇ ಹಸ್ತಪ್ರತಿಯ ಪುಸ್ತಕಕ್ಕೆ , ( ಬೇರೆ ಕಡೆ ಪ್ರಕಟವಾಗಿರಬಹುದಾದ ) ವಿಶ್ವವಿದ್ಯಾನಿಲಯದ ಲಾಂಛನ ಮುದ್ರಿಸಿ , ಪುಸ್ತಕವನ್ನು ವಿತರಿಸುವ ಬಗ್ಗೆ ವಿ.ವಿ. ಸಿಂಡಿಕೇಟ್ ನಲ್ಲಿ ಪ್ರಸ್ತಾವನೆ ಸಲ್ಲಿಸಲಾಗಿದೆ.

ಇದೇ ಲೇಖಕರ” ಭಾರತ ಸಂವಿಧಾನ” ಎಂಬ ಪುಸ್ತಕವು ಇಷ್ಟರಲ್ಲೇ ಬೇರೆ ಪ್ರಕಾಶನಲಾಯದ ಮೂಲಕ ಪ್ರಕಟವಾಗಿ ಮಾರುಕಟ್ಟೆಗೆ ಬಂದಿದ್ದು, ಸದರಿ ಪುಸ್ತಕಕ್ಕೆ ವಿಶ್ವವಿದ್ಯಾನಿಲಯದ ಅಧಿಕೃತ ಲಾಂಛನ ಒತ್ತುವ ಕೆಲಸಕ್ಕೆ ಸಿದ್ದತೆ ನಡೆದಿದದೆ ಎನ್ನಲಾಗಿದೆ. ಪ್ರಕಾಶಕರಿಗೆ ಹಣ ಪಾವತಿ ಮಾಡಿ ಮುದ್ರಿತ ಪುಸ್ತಕವನ್ನು ಖರೀದಿಸಿ ವಿತರಿಸುವ ಬಗ್ಗೆ ಈಗಾಗಲೇ ಮಾತುಕತೆ ನಡೆದಿದೆ ಎನ್ನಲಾಗಿದೆ. ನಾಮ ನಿರ್ದೇಶಿತ ಸದಸ್ಯರೊಬ್ಬರು ಈ ಪುಸ್ತಕವನ್ನೇ ಖರೀದಿಸುವ ಹಾಗೂ ವಿ.ವಿ. ಲಾಂಚನ ಒತ್ತಿ ಪುಸ್ತಕ ವಿತರಿಸುವÀ ಬಗ್ಗೆ ಉಮೇದಿನಿಂದ ಓಡಾಡುತ್ತಿರುವುದು ಮತ್ತಷ್ಟು ಅನುಮಾನಕ್ಕೆ ಕಾರಣವಾಗಿದೆ.

ಗುಣಮಟ್ಟದ ಶಿಕ್ಷಣ , ವಿಮಾರ್ಶಾ ಮನೋಭಾವಕ್ಕೆ ಒತ್ತು ನೀಡುವ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸಲು ವಿಶೇಷ ಆದ್ಯತೆ ವಹಿಸಿರುವ ಮಂಗಳೂರು ವಿಶ್ವವಿದ್ಯಾನಿಲಯವು ಶಿಕ್ಷಣ ನೀತಿಯ ಆಶಯಕ್ಕೆ ತದ್ವಿರುದ್ಧವಾಗಿ ಒಮ್ಮೆ ತಿರಸ್ಕøತಗೊಂಡ ಪುಸ್ತಕವನ್ನು ವಿತರಿಸುವ ಮೂಲಕ ಗುಣಮಟ್ಟದ ಶಿಕ್ಷಣದ ವಿಚಾರವಾಗಿ ಯಾವ ಸಂದೇಶ ನೀಡಲು ಬಯಸಿದೆ ಎಂಬುದು ಪ್ರಶ್ನೆಯಾಗಿದೆ.

 

 

Related Posts

Leave a Reply

Your email address will not be published.