ಭಂಡಾರ ದೇವಸ್ಥಾನಕ್ಕೆ ಹೋದ್ರೆ ಮತ್ತೆ ವಾಪಸು ತೆಗಿಯುವಂತಿಲ್ಲ ಆದೇಶ ಧಾರ್ಮಿಕ ಆಚರಣೆಗೆ ವಿರುದ್ಧವಾಗಿದೆ : ಮಾಜಿ ಸಚಿವ ರಮಾನಾಥ ರೈ

ತುಳುನಾಡು ಉಭಯ ಜಿಲ್ಲೆಗಳ ವಿಶೇಷ ಸಂಸ್ಕೃತಿಗಳ ಜಿಲ್ಲೆಯಾಗಿದೆ. ದೈವಾರದನೆಯ ಒಂದು ವಿಶೇಷ ಸಂಸ್ಕೃತಿಯ ಜಿಲ್ಲೆ. ಧಾರ್ಮಿಕ ಪರಿಷತ್ ಬಿಜೆಪಿ ಆಡಳಿತ ವೇಳೆ ರಚಿಸಲಾಗಿತ್ತು. ಇದ್ರ ಅಡಿಯಲ್ಲಿ ದೈವಾರಾದನೆಯನ್ನು ಸೇರಿಸಲಾಗುತ್ತು. ಭಂಡಾರ ದೇವಸ್ಥಾನಕ್ಕೆ ಹೋದ್ರೆ ಮತ್ತೆ ವಾಪಸು ತೆಗಿಲಿಕ್ಕಿಲ್ಲ. ಇದು ಧಾರ್ಮಿಕ ಆಚರಣೆಗೆ ವಿರುದ್ಧವಾಗಿದೆ ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದರು.

ಅವರು ಸಕ್ರ್ಯೂಟ್ ಹೌಸ್‍ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು. ದೈವದ ಭಂಡಾರ ಪೂರ್ವಜರಿಂದ ಬಂದಂತೆಯೇ ನಡೆಸಿಕೊಂಡು ಹೋಗಬೇಕು. ಆದ್ರೆ ಇದೀಗ ಸರ್ಕಾರದ ಈ ಆದೇಶ ಧಾರ್ಮಿಕ ಆಚರಣೆಗೆ ವಿರುದ್ಧವಾಗಿದೆ. ದೇವಸ್ಥಾನವನ್ನು ಸರ್ಕಾರ ಧಾರ್ಮಿಕ ಪರಿಷತ್‍ನಿಂದ ಹೊರ ತರಬೇಕು ಎಂದು ಹೇಳಿದರು. ಇಲ್ಲಿ ಯಾವುದೇ ರಾಜಕೀಯಗಳಿಲ್ಲ, ಕೇವಲ ಧಾರ್ಮಿಕ ನಂಬಿಕೆ ವಿಚಾರ. ಇಲ್ಲಿನ ಹೆಚ್ಚಿನ ದೇವಸ್ಥಾನಗಳ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ನನ್ನ ಕೊಡುಗೆಯನ್ನು ಸೂರ್ಯನಾರಾಯಣ ದೇವಸ್ಥಾನಕ್ಕೆ ಹೋಗಿ ಕೇಳಲಿ, ಪೆÇಳಲಿ ದೇವಸ್ಥಾನದ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಕೊಡಿಮರದ ವಿಚಾರದಲ್ಲಿ ಅಪಪ್ರಚಾರ ಮಾಡುದ್ರು. ಇವರು ಯಾರು ಸತ್ರೂ ಅಪಪ್ರಚಾರ ಮಾಡ್ತಾರೆ. ದೇವಸ್ಥಾನದ ಬಗ್ಗೆನೂ ಅಪಪ್ರಚಾರ ಮಾಡ್ತಾರೆ. ನಾವು ಎನೇ ಆಗಿದ್ರು ದೈವದ ಅಪ್ಪಣೆ ಮೇಲೆ ಮುಂದುವರಿತ್ತೇವೆ. ಧಾರ್ಮಿಕ ಪರಿಷತ್‍ನ ಸದಸ್ಯರುಗಳ ಈ ನಿರ್ಧಾರ ಮೆಚ್ಚುವಂತದಲ್ಲ. ಧಾರ್ಮಿಕ ನಂಬಿಕೆಗೆ ಈ ಸದಸ್ಯರು ದಕ್ಕೆ ಆಗುವಂತೆ ಮಾಡಿದ್ದಾರೆತಲೆಮಾರಿನಿಂದ ಬಂದ ವಿಧಿಯನ್ನೇ ಬದಲಾಯಿಸಲು ಹೊರಟಿದ್ದಾರೆ. ಇದು ರಾಜಕೀಯ ರಹಿತವಾಗಿದೆ ಎಲ್ಲರೂ ಇದನ್ನು ಖಂಡಿಸಬೇಕು ಎಂದು ಹೇಳಿದರು.

ದೈವಸ್ಥಾನ ಯಾವುದೇ ಪ್ರವಾಸಿ ಕೇಂದ್ರ ಅಲ್ಲ. ಅದು ಆರಾದನಾ ಕೇಂದ್ರ. ಈ ಆದೇಶ ಇದೀಗಾ ಬಂಟ್ವಾಳದ ದೈವಸ್ಥಾನಕ್ಕೆ ಬಂದಿದೆ. ಮುಂದೆ ಎಲ್ಲ ದೈವಸ್ಥನಕ್ಕೂ ಬರುತ್ತೆ.
ಈ ಆದೇಶದಿಂದ ದೈವಗಳ ಭಂಡಾರ ಬರುವುದು ನಿಲ್ಲುತ್ತೆ. ನಿತ್ಯ ದೈವಾರದನೆ ಕಾರ್ಯ ನಿಲ್ಲುತ್ತೆ. ಇದು ತಲತಲಾಂತರದಿಂದ ಬಂದ ವಿದಿವಿಧಾನಗಳು ನಿಲ್ಲುತ್ತೆ. ಇದಕ್ಕೆ ಜನ್ರು ಈಗ ಎಚ್ಚೆತ್ತು ಕೊಳ್ಳಬೇಕು. ಒಂದು ಕುಟುಂಬದ ಮನೆಯಲ್ಲಿ ಭಂಡಾರ ಇಡುವುದರ ಬಗ್ಗೆ ರಾಜಕೀಯ ಮಾಡ್ತಾ ಇದ್ದಾರೆ ಎಂದು ಹೇಳಿದರು.
ಈ ಸಂದರ್ಭ ಕಾಂಗ್ರೆಸ್ ಮುಖಂಡರಾದ ಶಶಿಧರ್ ಹೆಗ್ಡೆ, ಜಯಶೀಲ ಅಡ್ಯಂತ್ಯಾಯ, ಪದ್ಮನಾಭ್, ಆಶೋಕ್, ಹರಿನಾಥ್ ಮತ್ತಿತರರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.