ನಿಟ್ಟೆ (ಪರಿಗಣಿತ) ವಿಶ್ವವಿದ್ಯಾಲಯದ ಕೆ. ಎಸ್. ಹೆಗ್ಡೆ ಆಸ್ಪತ್ರೆ : ಅಣ್ಣ ತಂಗಿಯರಿಗೆ ಯಶಸ್ವಿ ಕೀಹೋಲ್ ಶಸ್ತ್ರಚಿಕಿತ್ಸೆ

ಸುಮಾರು 6 ತಿಂಗಳ ಹಿಂದೆ, ಉತ್ತರ ಕನ್ನಡ ಜಿಲ್ಲೆಯ ಇಬ್ಬರು ಮಕ್ಕಳ ತಾಯಿಯು, ತನ್ನ 16ವರ್ಷದ ಮಗಳ ಅಧಿಕ ತೂಕದ ಬಗ್ಗೆ ಚಿಂತೆಗೊಂಡು ವೈದ್ಯಕೀಯ ನೆರವಿಗಾಗಿ ಕೆ. ಎಸ್. ಹೆಗ್ಡೆ ಆಸ್ಪತ್ರೆಯ ಮುಖ್ಯ ಅಂತಃಸ್ರಾವಶಾಸ್ತ್ರಜ್ಞ ಡಾ| ಶ್ರೀಕೃಷ್ಣ ಆಚಾರ್ಯರನ್ನು ಸಂಪರ್ಕಿಸಿದರು. ಆಕೆಯನ್ನು ಕೂಲಂಕುಷವಾಗಿ ಪರೀಕ್ಷಿಸಿದಾಗ ಆಕೆಗೆ ಕುಶಿಂಗ್ಸ್ ಸಿಂಡ್ರೋಮ್ ಇರುವುದು ಪತ್ತೆಯಾಗಿದ್ದು, ಈ ಸ್ಥಿತಿಯು ಟ್ರಂಕಲ್ ಬೊಜ್ಜಿನ ಲಕ್ಷಣವಾಗಿದ್ದು, ದೇಹದಲ್ಲಿ ಅಧಿಕ ಸ್ಟಿರೋಯ್ಡ್ ನಿಂದಾಗಿ ಟ್ರಂಕಲ್ ಸ್ಥೂಲಕಾಯ, ಚಂದ್ರಾಕಾರದಂತೆ ಉಬ್ಬಿರುವ ಮುಖ, ಕಿಬ್ಬೊಟ್ಟೆಯ ಸ್ಟ್ರೈ ಮತ್ತು ಅಧಿಕ ರಕ್ತದೊತ್ತಡದ ಗುಣಲಕ್ಷಣವನ್ನು ಹೊಂದಿರುತ್ತದೆ.

ಸಾಮಾನ್ಯವಾಗಿ ಈ ಸ್ಥಿತಿಗೆ ಕಾರಣವೇನೆಂದರೆ ಮೆದುಳಿನಲ್ಲಿರುವ ಪಿಟ್ಯುಟರಿ ಗೆಡ್ಡೆಗಳು, ಮೂತ್ರಜನಕಾಂಗದ ಗಡ್ಡೆಗಳು ಅಥವಾ ಅತಿಯಾದ ಸ್ಟೀರಾಯ್ಡ್ ಬಳಕೆಯಾಗಿರಬಹುದು. ತಪಾಸಣೆಗಳಿಂದ ಯಾವುದೇ ನಿಖರವಾದ ಕಾರಣಗಳನ್ನು ಕಂಡು ಹಿಡಿಯಲು ವಿಫಲವಾಗಿರುವುದರಿಂದ ಅಂತಃಸ್ರಾವಶಾಸ್ತ್ರಜ್ಞರು ಕಾರ್ಟಿಕೊಸ್ಟೆರಾಯ್ಡ್ ಹಾರ್ಮೋನ್ ಅಧಿಕವಾಗಿರುವುದು ಎಂಬ ಕಾರಣವನ್ನು ಶಂಕಿಸಿದ್ದಾರೆ. ಮುಂದಿನ ವೈದ್ಯಕೀಯ ಪರೀಕ್ಷೆಗಳಲ್ಲಿ ಆಕೆಯು ಪ್ರಾಥಮಿಕ ವರ್ಣದ್ರವ್ಯದ ನೋಡುಲರ್ ಅಡ್ರಿನೊಕಾರ್ಟಿಕಲ್ ಡಿಸೀಸ್  ಅನ್ನು ಹೊಂದಿರುವುದು ಮತ್ತು ಇದು ಒಂದು ಅತ್ಯಂತ ಅಪರೂಪದ ಕಾಯಿಲೆಯಾಗಿದ್ದು, ಹತ್ತು ಲಕ್ಷಗಳಲ್ಲಿ ಒಂದಕ್ಕಿಂತಲೂ ಕಡಿಮೆ ಜನರಲ್ಲಿ ಇರುವುದೆಂದು ಕಂಡುಬಂದಿದೆ.

ಇದು ಸಣ್ಣದರಿಂದ ಸಾಮಾನ್ಯ ಗಾತ್ರದವರೆಗಿನ ಮೂತ್ರಜನಕಾಂಗದ ಗ್ರಂಥಿಗಳುಳ್ಳ ಅನೇಕ ಸಣ್ಣ ಕಾರ್ಟಿಕಲ್ ವರ್ಣದ್ರವ್ಯದ ಗಂಟುಗಳನ್ನು ಹೊಂದಿದ್ದು, ಈ ಗ್ರಂಥಿಗಳನ್ನು ಶಸ್ತ್ರಚಿಕಿತ್ಸೆಯಿಂದ ತೆಗೆಯುವುದರಿಂದ ಕುಶಿಂಗ್ ಸಿಂಡ್ರೋಮ್ ಅನ್ನು ಗುಣಪಡಿಸಬಹುದು ಎಂಬ ಭರವಸೆಯೊಂದಿಗೆ ಮೂತ್ರಜನಕಾಂಗದ ಗ್ರಂಥಿಗಳನ್ನು ತೆಗೆಯುವ ನಿರ್ಧಾರವನ್ನು ಕೈಗೊಂಡು ಆ ಹುಡುಗಿಯನ್ನು ಆಸ್ಪತ್ರೆಯ ಮುಖ್ಯ ಮೂತ್ರಶಾಸ್ತ್ರಜ್ಞರಾಗಿರುವ ಡಾ| ರಾಜೀವ್ ಟಿ.ಪಿ. ಇವರಿಗೆ ಶಿಫಾರಸು ಮಾಡಲಾಯಿತು.

ಇದು ಒಂದು ಪ್ರಾಥಮಿಕ ವರ್ಣದ್ರವ್ಯದ ನೋಡುಲರ್ ಅಡ್ರಿನೊಕಾರ್ಟಿಕಲ್ ಖಾಯಿಲೆ ಆಗಿದ್ದು, ಕೀಹೋಲ್ ಶಸ್ತ್ರಚಿಕಿತ್ಸೆ ಅಂದರೆ ಬೈಲಾಟರಲ್ ಲ್ಯಾಪರೊಸ್ಕೋಪಿಕ್ ಅಡ್ರಿನಾಲೆಕ್ಟಮಿ ಮೂಲಕ ಎರಡೂ ಮೂತ್ರಜನಕಾಂಗಗಳ ಗ್ರಂಥಿಗಳನ್ನು ತೆಗೆಯಲಾಗುತ್ತದೆ. ಈ ಗ್ರಂಥಿಗಳು ಎರಡು ಸಣ್ಣ ಹಳದಿ ಕೊಬ್ಬಿನ ರಚನೆಗಳಾಗಿದ್ದು, ಎರಡೂ ಬದಿಯು ಹೊಟ್ಟೆಯ ಆಳದಲ್ಲಿರುತ್ತವೆ. ಮೂತ್ರಪಿಂಡಗಳು, ಮೇದೋಜ್ಜೀರಕ ಗ್ರಂಥಿ ಮತ್ತು ಹೊಟ್ಟೆಯ ದೊಡ್ಡ ನಾಳಗಳ ಸುತ್ತ ಇರುವ ಮೂತ್ರಜನಕಾಂಗವನ್ನು ಶಸ್ತ್ರಚಿಕಿತ್ಸೆಯಿಂದ ತೆಗೆಯುವುದು ಒಂದು ಸವಾಲಾಗಿತ್ತು. ಏಕ-ಹಂತದ ಲ್ಯಾಪರೊಸ್ಕೋಪಿಕ್ ಟ್ರಾನ್ಸ್ಪೆರಿಟೋನಿಯಲ್ ಬೈಲಾಟರಲ್ ಅಡ್ರಿನಾಲೆಕ್ಟಮಿ ಅನ್ನು ಡಾ| ಸೂರಜ್ ಮತ್ತು ಡಾ? ನರೇಂದ್ರ ಇವರುಗಳನ್ನೊಳಗೊಂಡ ಶಸ್ತ್ರಚಿಕಿತ್ಸಾ ತಂಡವು ಪ್ರೊ.ಡಾ ರಾಜೀವ್ ಟಿ.ಪಿ ಇವರ ನೇತೃತ್ವದಲ್ಲಿ ಈ ಶಸ್ತ್ರಚಿಕಿತ್ಸೆಯನ್ನು ಅರಿವಳಿಕೆ ತಂಡದ ಮುಖ್ಯಸ್ಥರಾದ ಡಾ| ಶ್ರೀಪಾದ ಮೆಹಂದಾಲೆ, ಡಾ| ನಿಖಿಲ್ ಎಂ.ಪಿ. ಮತ್ತು ಡಾ| ಗಾಂಡೀವ ಇವರಗಳ ಸಹಭಾಗಿತ್ವದಲ್ಲಿ ಸುಮಾರು 6ಗಂಟೆಗಳ ಕಾಲ ಯಶಸ್ವಿಯಾಗಿ ನಡೆಸಲಾಯಿತು. ಶಸ್ತ್ರಚಿಕಿತ್ಸೆ ಬಳಿಕ ರೋಗಿಯು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು, ಮತ್ತು ಕೆಲವು ವಾರಗಳ ಅವಧಿಯಲ್ಲಿ, ಆಕೆಯು ತನ್ನ ಅಧಿಕ ತೂಕವನ್ನು ಕಳೆದು ಕೊಂಡಿರುತ್ತಾಳೆ. ಜೀನ್ ರೂಪಾಂತರ ಜೆನೆಟಿಕ್ ಪರೀಕ್ಷೆಯಿಂದ ಕ್ರೋಮೋಸೋಮಲ್ ಅಸಹಜತೆಯನ್ನು ಪತ್ತೆ ಹಚ್ಚಬಹುದು.

ಈ ಚಿಕಿತ್ಸೆಯ ತರುವಾಯ, ಆ ತಾಯಿಯು ತನ್ನ 19 ವರ್ಷದ ಮಗನಿಗೂ ಇದೇ ರೀತಿಯ ಸಮಸ್ಯೆಗಳಿರುವುದನ್ನು ಅರಿತು ತಪಾಸಣೆಗಾಗಿ ಕೆ. ಎಸ್. ಹೆಗ್ಡೆ ಆಸ್ಪತ್ರೆಗೆ ಕರೆತಂದಿದ್ದು, ಅವನ ಆನುವಂಶಿಕ ತಪಾಸಣೆ ಮತ್ತು ಇತರ ಪರೀಕ್ಷೆಗಳನ್ನು ನಡೆಸಿದಾಗ ಅವನಲ್ಲಿಯೂ PPಓಂಆಯು ಇರುವುದು ದೃಢ ಪಟ್ಟಿರುತ್ತದೆ. ತರುವಾಯ ಅವರು ಡಾ| ರಾಜೀವ್ ಮತ್ತು ಅವರ ತಂಡದಿಂದ ಬೈಲಾಟರಲ್ ಲ್ಯಾಪರೊಸ್ಕೋಪಿಕ್ ಅಡ್ರಿನಾಲೆಕ್ಟಮಿಗೆ ಒಳಪಡಿಸಿದ್ದು, ಈಗ ಸಂಪೂರ್ಣ ಗುಣಮುಖ ರಾಗಿರುತ್ತಾರೆ.
ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾಗಿರುವ ಡಾ| ಶಿವಕುಮಾರ್ ಹಿರೇಮಠ ಮತ್ತು ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿಯ ಡೀನ್ ಆಗಿರುವ ಡಾ? ಪಿ.ಎಸ್.ಪ್ರಕಾಶ್ ಇವರುಗಳ ದಕ್ಷ ಮೇಲ್ವಿಚಾರಣೆ ಹಾಗೂ ಸಕಾಲಿಕ ಸಹಕಾರವು ಈ ಚಿಕಿತ್ಸೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸುವಲ್ಲಿ ತುಂಬಾ ಸಹಕಾರಿಯಾಯಿತು.

Related Posts

Leave a Reply

Your email address will not be published.