ಪುತ್ತೂರು ನಗರಸಭೆ ಅಧ್ಯಕ್ಷರಿಗೆ ಪೌರ ಕಾರ್ಮಿಕರಿಂದ ಹುಟ್ಟುಹಬ್ಬದ ಶುಭ ಹಾರೈಕೆ
ಪುತ್ತೂರು: ಸ್ವಚ್ಚ ಪುತ್ತೂರು, ಸುಂದರ ಪುತ್ತೂರಿಗೆ ಆದತ್ಯೆಯ ಗುರಿ ಹೊಂದಿರುವ ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್ ಅವರ 57 ನೇ ಹುಟ್ಟು ಹಬ್ಬದ ಅಂಗವಾಗಿ ನಗರಸಭೆ ಪೌರ ಕಾರ್ಮಿಕರು ತಮ್ಮ ಕಾಯಕಕ್ಕೆ ಹೊರಡುವ ಮುಂದೆ ನಗರಸಭೆ ಅಧ್ಯಕ್ಷರಿಗೆ ಹೂ ಗುಚ್ಚಗಳನ್ನು ನೀಡುವ ಮೂಲಕ ಹುಟ್ಟುಹಬ್ಬದ ಶುಭಾಶಯಗಳನ್ನು ನೀಡಿದರು. ಇದೇ ಸಂದರ್ಭದಲ್ಲಿ ಪೌರ ಕಾರ್ಮಿಕರೊಂದಿಗೆ ಚಹಾ ಸವಿದು, ಉಪಹಾರ ಮಾಡಿದರು.
ನಗರಸಭೆ ಅಧ್ಯಕ್ಷರು ಪ್ರತಿ ದಿನ ಬೆಳಿಗ್ಗೆ ದ್ವಿಚಕ್ರ ವಾಹನದಲ್ಲಿ ಒಂದು ಸುತ್ತು ಪೇಟೆ ಸುತ್ತಿ ಸಮಸ್ಯೆಗಳನ್ನು ತಾನೆ ಕುದ್ದಾಗಿ ವೀಕ್ಷಣೆ ಮಾಡುತ್ತಿದ್ದು, ಈ ಸಂದರ್ಭದಲ್ಲಿ ಪೌರಕಾರ್ಮಿಕರನ್ನು ಭೇಟಿ ಮಾಡಿ ಅವರ ನೋವುಗಳಿಗೆ ಸ್ಪಂದಿಸುತ್ತಿದ್ದರು. ಆ.31 ರಂದು ತನ್ನ ಹುಟ್ಟುಹಬ್ಬದ ಸಲುವಾಗಿ ದೇವಸ್ಥಾನಕ್ಕೆ ಹೊರಟಾಗ ಪೌರಕಾರ್ಮಿಕರನ್ನು ಭೇಟಿ ಮಾಡಿದ್ದರು. ಇದೇ ವೇಳೆ ಪೌರ ಕಾರ್ಮಿಕರು ಅಧ್ಯಕ್ಷರ ಹುಟ್ಟುಹಬ್ಬದ ಮಾಹಿತಿ ಅರಿತು ಹುಟ್ಟುಹಬ್ಬದ ಶುಭಾಶಯ ನೀಡಿದರು. ಈ ನಡುವೆ ಅವರು ಕಾರ್ಮಿಕರೊಂದಿಗೆ ಚಹಾ ತಿಂಡಿ ಮಾಡಿದರು. ಪೌರ ಕಾರ್ಮಿಕರ ಸಂಘದ ಗೌರವಾಧ್ಯಕ್ಷ ಅಣ್ಣಪ್ಪ ಕಾರೆಕ್ಕಾಡು, ನಗರಸಭೆ ಹಿರಿಯ ಆರೋಗ್ಯ ನಿರೀಕ್ಷಕರಾದ ರಾಮಚಂದ್ರ, ಶ್ವೇತಾ ಕಿರಣ್, ಸ್ಯಾನಿಟರಿ ಮೇಲ್ವಿಚಾರಕ ಐತ್ತಪ್ಪ, ಅಮಿತ್ ಮತ್ತಿರರು ಉಪಸ್ಥಿತರಿದ್ದರು.