ಬಂಟರ ಸಂಘ ಮುಂಬಯಿ ಮೀರಾ ಭಾಯಂದರ್ ಪ್ರಾದೇಶಿಕ ಸಮಿತಿ: ಮಹಿಳಾ ವಿಭಾಗದ ವತಿಯಿಂದ ಹಳದಿ ಕುಂಕುಮ, ಭಜನೆ, ಸ್ಥಳೀಯ ಬಂಟ ಮಹಿಳಾ ಸಾಧಕಿಯರಿಗೆ ಸನ್ಮಾನ
ಮೀರಾರೋಡ್ : ಬಂಟರ ಸಂಘ ಮುಂಬಯಿ ಇದರ ಮೀರಾ ಭಾಯಂದರ್ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ವತಿಯಿಂದ ಸೆ. 14ರಂದು ಮೀರಾ ರೋಡ್ ಪೂರ್ವದ ಸಿನೆಮೆಕ್ಸ್ ಥಿಯೇಟರ್ ಎದುರಗಡೆ ಹೋಟೆಲ್ ಕೃಷ್ಣಾ ಪ್ಯಾಲೇಸನ ಸಭಾಂಗಣದಲ್ಲಿ ಹಳದಿ – ಕುಂಕುಮ , ಭಜನೆ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸ್ಥಳೀಯ ಬಂಟ ಮಹಿಳೆಯರಿಗೆ ಸನ್ಮಾನ ಕಾರ್ಯಕ್ರಮ ಬಂಟರ ಸಂಘದ ಅಧ್ಯಕ್ಷರಾದ ಚಂದ್ರಹಾಸ್ ಕೆ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಜರುಗಿತ್ತು.
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಬಂಟ ಮಹಿಳಾ ಸಾಧಕಿಯರನ್ನು ಸನ್ಮಾನಿಸಿ ಮಾತನಾಡಿದ ಬಂಟರ ಸಂಘದ ಅಧ್ಯಕ್ಷರಾದ ಚಂದ್ರಹಾಸ ಕೆ. ಶೆಟ್ಟಿ ಅವರು
ಅರಸಿನ ಕುಂಕುಮ ಲಕ್ಷಿ ನಾರಾಯಣರ ಕಾರ್ಯಕ್ರಮ, ಪುರುಷರ ಒಳಿತಿಗಾಗಿ ಮಹಿಳೆಯರು ಮಾಡುತ್ತಿರುವ ಕಾರ್ಯಕ್ರಮ. ಆದರೆ ಇಂದು ಪುರುಷರು ಮಾತ್ರ ಕಡಿಮೆ ಇದ್ದಾರೆ ಮನೆಯವರ ಒಳಿತಿಗಾಗಿ ಮಹಿಳೆಯರು ಮಾಡುವ ಕಾರ್ಯಕ್ರಮದಲ್ಲಿ ಪುರುಷರು ಸಹ ಭಾಗಿಗಳಾಗಬೇಕು ,ಇಂದು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕಿಯರನ್ನು ಗುರುತಿಸಿ ಸನ್ಮಾನಿಸಿದ್ದೇವೆ. ಇದು ಮುಂದಿನ ಜನಾಂಗಕ್ಕೆ ಪ್ರೇರಣೆಯಾಗಲಿ. ಸನ್ಮಾನ ಸ್ವೀಕರಿಸಿದ ಸಾಧಕಿಯರಿಗೆ ನಮ್ಮ ಸಮಾಜದ ಮೇಲೆ ಗೌರವ ಹೆಚ್ಚಿಸುತ್ತದೆ,ಕೊವಿಡ್ ಸಮಯದಲ್ಲಿ ನಾವೆಲ್ಲರೂ ಜಾಗ್ರತೆಯನ್ನು ವಹಿಸಬೇಕಾಗಿದ್ದು ಕೋರೋನ ರೋಗಕ್ಕೆ ಔಷಧಿ ಎಂದರೆ ಮಾಸ್ಕನ್ನು ಮಾತ್ರ ಇದನ್ನು ತಪ್ಪದೇ ಉಪಯೋಗಿಸುದರೊಂದಿಗೆ ಸುರಕ್ಷರಾಗಿರಬೇಕು ಈ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ತಂಡ ಉತ್ತಮ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸಾಧಕರನ್ನು ಗುರುತಿಸಿದ್ದಾರೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸಂಘದ ಉಪಾಧ್ಯಕ್ಷ ಉಳ್ತೂರು ಮೋಹನ್ ದಾಸ್ ಶೆಟ್ಟಿ ಮಾತನಾಡುತ್ತಾ ಮಹಿಳಾ ಪ್ರಧಾನವಾಗಿರುವ ಈ ದೇಶದಲ್ಲಿ ಮಹಿಳೆಯರಿಗೆ ವಿಶೇಷವಾದ ಸ್ಥಾನಮಾನ ಗೌರವಗಳಿಗೆ ಸರಕಾರ ಕೂಡ ವಿಶೇಷ ಸೌಲಭ್ಯಗಳನ್ನು ನೀಡುತ್ತದೆ .ಬಂಟರ ಸಂಘ ಮಹಿಳೆಯರಿಗೆ ಪ್ರಾರಂಭದಿಂದಲೂ ಮಾನ್ಯತೆಯನ್ನು ನೀಡುತ್ತ ಬಂದಿದೆ ಮಹಿಳೆಯರು ಮನೆಯಲ್ಲಿ ಸಂತೋಷವಾಗಿದ್ದರೆ ಅವರ ಪರಿವಾರಗಳು ಸಂತೋಷದಲ್ಲಿ ಇರಲು ಸಾಧ್ಯ ಮಕ್ಕಳು ಸಂಸ್ಕಾರವಂತರಾಗಿ ಆಗುತ್ತಾರೆ ಸಂಘದಲ್ಲಿ ಒಂಬತ್ತು ಪ್ರಾದೇಶಿಕ ಸಮಿತಿಗಳಿವೆ, ಅದೇ ರೀತಿಯಲ್ಲಿ ಇಂದು 9 ಸಾಧಕರಿಗೆ ಸನ್ಮಾನಿಸಿ ಗೌರವಿಸಿದೀರಿ ಇದು ಇನ್ನೂ ಹೆಚ್ಚಿನ ಸಾಧನೆ ಮಾಡುವವರಿಗೆ ಪ್ರೇರಣೆಯಾಗಿದೆ, ಈ ಪ್ರಾದೇಶಿಕ ಸಮಿತಿಯ ಗಿರೀಶ್ ಶೆಟ್ಟಿ ತೆಳ್ಳಾರ್ ರವರ ಕಾರ್ಯಾಧ್ಯಕ್ಷತ್ತೆಯ ಸಮಯದಲ್ಲಿ ಈ 5000 ಕ್ಕಿಂತ ಹೆಚ್ಚು ಬಂಟ ಬಂಧುಗಳನ್ನು ಸೇರಿಸಿ ದಶಮಾನೋತ್ಸವವನ್ನು ಬಹಳ ವಿಜೃಂಭಣೆಯಿಂದ ಜರುಗಿದು ಆ ಬಳಿಕ ಪದ ಗ್ರಹಣವನ್ನು 50 ಜನರನ್ನು ಸೇರಿಸಿ ಕಾರ್ಯಕ್ರಮವನ್ನು ಸರಳವಾಗಿ ನಡೆಸಿ ಓರ್ವ ಸಮರ್ಥ ಸಂಘಟಕ ಎನಿಸಿ ಕೊಂಡಿದ್ದಾರೆ. ಹಾಗಾಗಿ ಮೀರಾ ಭಾಯಂದರ್ ಪ್ರಾದೇಶಿಕ ಸಮಿತಿ ಇತರ ಸಮಿತಿಗೆ ಮಾದರಿಯಾಗಿದೆ ಇಂದು ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಶಿವಪ್ರಸಾದ್ ಶೆಟ್ಟಿ ಮತ್ತು ಮಹಿಳಾ ವಿಭಾಗದ ನೇತೃತ್ವದಲ್ಲಿ ಅತ್ಯುತ್ತಮ ಕಾರ್ಯಕ್ರಮ ನಡೆದಿದೆ ಎಲ್ಲರೂ ಆರೋಗ್ಯವನ್ನು ಕಾಪಾಡಿ ಎಂದು ನುಡಿದರು.
ಸಂಘದ ಪ್ರಾದೇಶಿಕ ಸಮಿತಿಯ ಪಕ್ಷಿಮ ವಲಯದ ಸಮನ್ವಯಕ್ಕೆ ಶಶಿಧರ ಶೆಟ್ಟಿ ಇನ್ನಂಜೆ ಮಾತನಾಡುತ್ತಾ ಬಂಟರ ಸಂಘದ ಇತಿಹಾಸದಲ್ಲಿ ಸದಾ ನೆನಪಿಸುವ ಕಾರ್ಯಕ್ರಮ ಈ ಪ್ರಾದೇಶಿಕ ಸಮಿತಿಯ ದಶಮಾನೋತ್ಸವ ಕಾರ್ಯಕ್ರಮವಾಗಿದೆ, ಪ್ರತಿಯೊಂದು ಸಂಘ ಸಂಸ್ಥೆಯ ಗಟ್ಟಿಯಾಗಿ ಬೆಳೆಯಬೇಕಾದರೆ ಅಲ್ಲಿ ಮಹಿಳಾ ವಿಭಾಗ ಮತ್ತು ಯುವ ವಿಭಾಗ ಸಮರ್ಥವಾಗಿರಬೇಕು. ಇಲ್ಲಿಯ ಪ್ರಾದೇಶಿಕ ಸಮಿತಿಯ ಎರಡು ವಿಭಾಗವು ಸಮರ್ಥ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ ಇಂದು ಸಾಧಕರನ್ನು ಸನ್ಮಾನಿಸಿ ರುವುದರಿಂದ ಇನ್ನಷ್ಟು ಸಾಧಕರು ಬೆಳೆಯುವುದಕ್ಕೆ ಸಹಕಾರಿಯಾಗುತ್ತದೆ ಎಂದು ನುಡಿದರು.
ಕಾರ್ಯಕ್ರಮಕ್ಕೆ ವಿಶೇಷ ಸಹಕಾರವನ್ನು ನೀಡಿ ದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಉಮಾ ಕೃಷ್ಣ ಶೆಟ್ಟಿ ಮಾತನಾಡುತ್ತಾ ಅರಸಿನ ಕುಂಕುಮಕ್ಕೆ ಭಾರತೀಯ ಸಂಸ್ಕೃತಿ ಸಂಸ್ಕಾರದಲ್ಲಿ ಶ್ರೇಷ್ಠ ಸ್ಥಾನ ಮಾನವಿದೆ. ಅರಸಿನ ಕುಂಕುಮ ಶುಭದ ಸಂಕೇತ. ಇಂದು ಭಜನೆಯನ್ನು ಏರ್ಪಡಿಸಲಾಗಿದ್ದು ಇದು ದೇವರ ನಾಮ ಸ್ಮರಣೆ. ಕಲಿಯುಗದಲ್ಲಿ ದೇವರು ಒಲಿಯುವುದು ಭಜನೆಗೆ ಮಾತ್ರ. ಭಜನೆಯಿಂದ ವಿಭಜನೆಯಿಲ್ಲ. ಪತಿಗೆ ತಕ್ಕ ಪತ್ನಿಯಾಗಿ, ಮಕ್ಕಳಿಗೆ ಮಹಾ ತಾಯಿಯಾಗಿ ಸಮಾಜಕ್ಕೆ ಬೇಕಾದ ಸಮಾಜ ಚಿಂತನೆ ಮಾಡುತ್ತಾ ಉತ್ತಮ ಕೆಲಸ ಮಾಡುವ ಯೋಗ ಭಾಗ್ಯ ನಮಗೆ ದೊರಕಲಿ. ಇಂದಿನ ಕಾರ್ಯಕ್ರಮವನ್ನು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಸರ್ವರಿಗೂ ಅಬಿನಂದನೆಗಳು ಎಂದು ಹೇಳಿದರು.
ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಶಿವಪ್ರಸಾದ್ ಶೆಟ್ಟಿ ಮಾತನಾಡುತ್ತಾ ಇಂದಿನ ಕಾರ್ಯಕ್ರಮ ಮಹಿಳೆಯರಿಗಾಗಿ ಆಯೋಜಿಸಿರುವ ಕಾರ್ಯಕ್ರಮ ಮಹಿಳೆಯರನ್ನು ಹೆಚ್ಚಿನ ಸಂಖ್ಯೆಯಲ್ಲಿ ಒಗ್ಗಟ್ಟಿ ಸುವ ಬೇಕೆನ್ನುವ ನಮ್ಮ ಪ್ರಾದೇಶಿಕ ಸಮಿತಿಯ ಉದ್ದೇಶವಾಗಿದೆ ನಮ್ಮ ಸಮಿತಿಯಲ್ಲಿ ಯಾವುದೇ ತಪ್ಪು-ಒಪ್ಪು ಗಳಿದ್ದರೆ ಬಂಟರ ಸಂಘ ಕ್ಷಮೆ ಇರಲಿ ಎಂದು ನುಡಿದರು ಆಗಮಿಸಿದ ಅತಿಥಿ ಗಣ್ಯರನ್ನು ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ಶಾಲಿನಿ ಸತೀಶ್ ಶೆಟ್ಟಿ ಸ್ವಾಗತಿಸಿದರು.
ವೇದಿಕೆಯಲ್ಲಿ ಸಂಘದ ಜೊತೆ ಕೋಶಧಿಕಾರಿ ಮುಂಡಪ್ಪ ಪಯ್ಯಾಡೆ, ಪ್ರಾದೇಶಿಕ ಸಮಿತಿಯ ಸಂಚಾಲಕರಾದ ಗಿರೀಶ್ ಶೆಟ್ಟಿ ತೆಳ್ಳಾರು, , ಕಾರ್ಯದರ್ಶಿ ರವೀಂದ್ರ ಶೆಟ್ಟಿ ಕೊಟ್ರಪಾಡಿ ಗುತ್ತು, ಜೊತೆ ಕೋಶಧಿಕಾರಿ ರಮೇಶ್ ಶೆಟ್ಟಿ ಸಿದ್ದಕಟ್ಟೆ. ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಶಾಲಿನಿ ಎಸ್. ಶೆಟ್ಟಿ , ಉಪ ಕಾರ್ಯಾಧ್ಯಕ್ಷೆ ಶ್ರೀಮತಿ ವಸಂತಿ ಶೆಟ್ಟಿ , ಮಹಿಳಾ ವಿಭಾಗದ ಸಲಹಾ ಸಮಿತಿ ಕಾರ್ಯಾಧ್ಯಕ್ಷೆ ಶ್ರೀಮತಿ ಅಮಿತ ಕೆ. ಶೆಟ್ಟಿ, ಕಾರ್ಯದರ್ಶಿ ಶ್ರೀಮತಿ ಸುಜಾತ ಪಿ. ಶೆಟ್ಟಿ, ಕೋಶಾಧಿಕಾರಿ ಶ್ರೀಮತಿ ಶಿಲ್ಪಾ ಶೆಟ್ಟಿ ,ಜೊತೆ ಕಾರ್ಯದರ್ಶಿ ಶ್ರೀಮತಿ ಶರ್ಮಿಳ ಶೆಟ್ಟಿ ,ಜೊತೆ ಕೋಶಾಧಿಕಾರಿ ಶ್ರೀಮತಿ ಶೀಲಾ ಶೆಟ್ಟಿ ಯುವ ವಿಭಾಗ ಕಾರ್ಯಾಧ್ಯಕ್ಷ ಸಂದರ್ಶ್ ಶೆಟ್ಟಿ ಉಪಸ್ಥರಿದ್ದರು,
ಸಂದರ್ಭದಲ್ಲಿ ವೈದ್ಯಕೀಯ, ಶಿಕ್ಷಣ, ಸಮಾಜಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಸೇವೆಗೈದ ಬಂಟ ಸಾಧಕಿಯರಾದ ಡಾ. ಪ್ರಾರ್ಥಸ್ವನಿ ಗೌರೀಶ್ ಶೆಟ್ಟಿ ,(ವೈದ್ಯಕೀಯ) , ಡಾ. ಸ್ವರೂಪ ಸಿ.ಶೆಟ್ಟಿ ,(ವೈದ್ಯಕೀಯ) , ಶ್ರೀಮತಿ ಕವಿತಾ ಗಣೇಶ್ ಹೆಗ್ಡೆ, (ಶಿಕ್ಷಣ ಕ್ಷೇತ್ರ) , ಶ್ರೀಮತಿ ಅಪರ್ಣ ಉದಯ ಹೆಗ್ಡೆ, (ಶಿಕ್ಷಣ ಕ್ಷೇತ್ರ), ಶ್ರೀಮತಿ ಉಷಾ ದಾಮೋದರ್ ಶೆಟ್ಟಿ, (ಶಿಕ್ಷಣ ಕ್ಷೇತ್ರ), ಶ್ರೀಮತಿ ರೇಷ್ಮ ಜಗದೀಶ್ ಶೆಟ್ಟಿ, (ಸಾಮಾಜಿಕ ಸೇವೆ), ಶ್ರೀಮತಿ ತೃಪ್ತಿ ರಮೇಶ್ ಶೆಟ್ಟಿ,(ಶಿಕ್ಷಣ ಕ್ಷೇತ್ರ), ಶ್ರೀಮತಿ ಹಿತ ಸುರೇಶ್ ಶೆಟ್ಟಿ (ಕ್ರೀಡಾ ಕ್ಷೇತ್ರ), ಕು| ಶೃತಿ ದಿವಾಕರ್ ಶೆಟ್ಟಿ, (ಸಾಂಸ್ಕೃತಿಕ) ಇವರನ್ನು ಗಣ್ಯರ ಸಮುಖದಲ್ಲಿ ಸನ್ಮಾನಿಸಲಾಯಿತು.
ಕ್ರಮವನ್ನು ನಿರೂಪಿಸಿ ಸನ್ಮಾನಿತರ ಪರಿಚಯವನ್ನು ಸಂಘಟಕ ಬಾಬಾ ಪ್ರಸಾದ ಅರಸ ಕುತ್ಯರ್ ಪರಿಚಯಿಸಿದರು ವಸಂತಿ ಶೆಟ್ಟಿ ಪ್ರಾರ್ಥನೆ ಮಾಡಿದರು ,ಮಹಿಳಾ ವಿಭಾಗದ ಕೋಶಧಿಕಾರಿ ಶಿಲ್ಪ ಶೆಟ್ಟಿ ಅವರ ಧನ್ಯವಾದ ನೀಡಿದರು.ಕಾರ್ಯಕ್ರಮದ ಯಶಸ್ಸಿಗೆ ಬಂಟರ ಸಂಘದ ಉನ್ನತ ಶಿಕ್ಷಣ ಸಮಿತಿಯ ಉಪ ಕಾರ್ಯಧ್ಯಕ್ಷ ಕಿಶೋರ್ ಶೆಟ್ಟಿ ಕುತ್ಯಾರ್ ಸಹಕರಿಸಿದರು. ಕಾರ್ಯಕ್ರಮದಲ್ಲಿ ದೀಪಕ್ ಹಾಸ್ಪಿಟಲ್ ಆಡಳಿತ ನಿರ್ದೇಶಕ ಡಾಕ್ಟರ್ ಭಾಸ್ಕರ್ ಶೆಟ್ಟಿ. ಪ್ರಾದೇಶಿಕ ಸಮಿತಿಯ ಮಾಜಿ ಕಾರ್ಯಧ್ಯಕ್ಷರುಗಳಾದ ಹರೀಶ್ ಕುಮಾರ್ ಶೆಟ್ಟಿ, ಡಾ.ಅರುಣೋದಯ ಎಸ್. ರೈ , ಸಚ್ಚಿದಾನಂದ ಶೆಟ್ಟಿ ಮುನ್ನಲಾಯ ಗುತ್ತು. ಭಾಸ್ಕರ್ ಶೆಟ್ಟಿ ಶಾರದಾ ಕ್ಲಾಸಸ್, ರಾಜೇಶ್ ಶೆಟ್ಟಿ , ಸಂಘದ ಮಹಿಳಾ ವಿಭಾಗದ ಪದಾಧಿಕಾರಿಗಳು ,ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಪದಾಧಿಕಾರಿಗಳು. ಹಾಗೂ ಅಪಾರ ಸಂಖ್ಯೆಯಲ್ಲಿ ಮಹಿಳೆಯರು ಪಾಲ್ಗೊಂಡಿದ್ದರು.
ದಿನೇಶ್ ಕುಲಾಲ್ ಬೊಕ್ಕಪಟ್ಣ ಮುಂಬೈ