ಬಂಟ್ವಾಳ : ಸಂಚಾರಿ ಆರೋಗ್ಯ ಬಸ್ ಆರಂಭ
ಬಂಟ್ವಾಳದ ತಾಲೂಕಿನ ಜನತೆಗೆ ಉತ್ಕೃಷ್ಟ ವಾದ ಉಚಿತ ಆರೋಗ್ಯ ಸೇವೆ ಕಲ್ಪಿಸುವ ನಿಟ್ಟಿನಲ್ಲಿ ಸಂಚಾರಿ ಆರೋಗ್ಯ ಬಸ್ ಆರಂಭಿಸಲಾಗಿದೆ. ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಅವರ ಮುತುವರ್ಜಿಯಿಂದ ಸಂಚಾರಿ ಆರೋಗ್ಯ ಬಸ್ ವ್ಯವಸ್ಥೆ ಮಾಡಲಾಗಿದೆ. ಜನರ ಆರೋಗ್ಯದ ಸುರಕ್ಷತೆಯ ಜಾಗೃತಿಯ ಸಲುವಾಗಿ ನಿಟ್ಟಿನಲ್ಲಿ ಈ ವ್ಯವಸ್ಥೆಯನ್ನ ಮಾಡಲಾಗಿದೆ. ಇನ್ನು ಕಾವಳಮೂಡುರು ಗ್ರಾಮ ಪಂಚಾಯತ್ ನ ಕೆದ್ದಳಿಕೆ ಶಾಲಾ ವಠಾರಕ್ಕೆ ಸಂಚಾರಿ ಆರೋಗ್ಯ ಬಸ್ ಆಗಮಿಸಿತು. ಇದರ ಸದುಪಯೋಗವನ್ನು ಗ್ರಾಮಸ್ಥರು ಪಡೆದುಕೊಂಡರು.ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅದ್ಯಕ್ಷರಾದ ಜಯಲಕ್ಷ್ಮಿ ದೇವಾಡಿಗ, ಉಪಾಧ್ಯಕ್ಷರಾದ ಅಜಿತ್ ಶೆಟ್ಟಿ ಕಾರಿಂಜ, ಸದಸ್ಯರಾದ ಶೇಷಗಿರಿ ಪೂಜಾರಿ, ಪ್ರಶಾಂತ್ ಶೆಟ್ಟಿ, ರಾಜ್ ಗೋಪಾಲ್ ನಾಯಕ್ , ಗಣೇಶ್ ದೇವಾಡಿಗ, ವೀಣಾ , ರೇವತಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾದ ಸುಧಾಮಣಿ . ಕೆದ್ದಳಿಕೆ ಶಾಲಾ ಅಧ್ಯಕ್ಷರಾದ ದಿನೇಶ್ ಶೆಟ್ಟಿ ಕಾವಳಕಟ್ಟೆ, ಆಶಾಕಾರ್ಯಕರ್ತೆಯರು, ಹಾಗೂ ಬಿ.ಜೆ.ಪಿ ಕಾರ್ಯಕರ್ತರು ಉಪಸ್ಥಿತಿರಿದ್ದರು..