ಮಂಗಳೂರು: ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು: ಆರೋಪಿಯ ಬಂಧನ

ಮಂಗಳೂರು: ನಗರದ ಮಹಿಳೆಯೋರ್ವರ ಚಿನ್ನಾಭರಣವಿದ್ದ ಬ್ಯಾಗ್ ಕಳವುಗೈದ ಆರೋಪಿಯನ್ನು ಬಂಧಿಸಿರುವ ಕದ್ರಿ ಠಾಣೆ ಪೊಲೀಸರು 2.50 ಲಕ್ಷ ರೂ. ಮೌಲ್ಯದ 53 ಗ್ರಾಂ ತೂಕದ ಚಿನ್ನಾಭರಣ ವಶಪಡಿಸಿದ್ದಾರೆ.

ಭದ್ರಾವತಿ ಮೂಲದ ಪ್ರಸ್ತುತ ಉತ್ತರಕನ್ನಡ ಜಿಲ್ಲೆಯ ದಾಂಡೇಲಿ ನಿವಾಸಿ ಪಿ.ಜ್ಞಾನರತ್ನಂ ಕೃಪಾ ರಾವ್ ಬಂಧಿತ. ನಗರದ ನವಭಾರತ ಸರ್ಕಲ್ ಬಳಿಯಿರುವ ಮೌರಿಷ್ಕ್ ಪಾರ್ಕ್ ಅಪಾರ್ಟ್‌ಮೆಂಟ್ ನಲ್ಲಿ ವಾಸವಾಗಿರುವ ವಸಂತಾ ಎಂಬವರು 2021  ಮಾರ್ಚ್ 10ರಂದು ಭದ್ರಾವತಿಯಿಂದ ಮಂಗಳೂರಿಗೆ ವಾಹನದಲ್ಲಿ ಪ್ರಯಾಣಿಸಿದ್ದರು. ಈ ಸಂದರ್ಭ ಆರೋಪಿಯು ವಸಂತಾ ಅವರ ಚಿನ್ನಾಭರಣವಿದ್ದ ಬ್ಯಾಗ್ ಕಳವುಗೈದಿದ್ದಾನೆ. ಈ ಬಗ್ಗೆ ಕದ್ರಿ ಠಾಣೆಯಲ್ಲಿ ದೂರು ದಾಖಲಾಗಿತ್ತು. ದಾಂಡೇಲಿಯಲ್ಲಿ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿರುವ ಪೊಲೀಸರು ಫೈನಾನ್ಸ್ ನಲ್ಲಿ ಅಡವಿರಿಸಿದ್ದ ಚಿನ್ನಾಭರಣ ವಶಪಡಿಸಿದ್ದಾರೆ.

 

Related Posts

Leave a Reply

Your email address will not be published.