ಮುಕ್ಕದ ಶ್ರೀನಿವಾಸ ವಿಶ್ವವಿದ್ಯಾಲಯದ ಡಾ. ಸಂಧ್ಯಾ ಶೆಣೈರವರಿಗೆ ವಿಶ್ವ ಶ್ರೇಷ್ಠ ವಿಜ್ಞಾನಿ ಸ್ಥಾನ

ಸುರತ್ಕಲ್ ಮುಕ್ಕದ ಶ್ರೀನಿವಾಸ ವಿಶ್ವವಿದ್ಯಾಲಯ ಅಭಿಯಾಂತ್ರಿಕ ಮತ್ತು ತಾಂತ್ರಿಕ ಮಹಾವಿದ್ಯಾಲಯದ ರಸಾಯನ ಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕಿ ಡಾ. ಸಂಧ್ಯಾ ಶೆಣೈ ವಿಶ್ವದ ಶ್ರೇಷ್ಠ ವಿಜ್ಞಾನಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ವೈಜ್ಞಾನಿಕ ಪ್ರಬಂಧಗಳಿಗೆ ಇತರ ಸಂಶೋಧಕರಿಂದ ಸಿಗುವ ಉಲ್ಲೇಖಗಳನ್ನಾಧರಿಸಿ ರಾಯಲ್ ಸೊಸೈಟಿ ಆಫ್ ಕೆಮಿಸ್ಟ್ರಿ, ಲಂಡನ್ ಅವರು ತಯಾರಿಸಿದ ಪಟ್ಟಿಯಲ್ಲಿ ಡಾ. ಸಂಧ್ಯಾ ಶೆಣೈ ಸ್ಥಾನ ಪಡೆದುಕೊಂಡಿದ್ದಾರೆ. ವಸ್ತು ವಿಜ್ಞಾನ ಮತ್ತು ರಸಾಯನ ಶಾಸ್ತ್ರ ಕ್ಷೇತ್ರಗಳಲ್ಲಿಮಾಡಿದ ಉನ್ನತ ಮಟ್ಟದ ಸಂಶೋಧನಾ ಕಾರ್ಯಗಳಿಗಾಗಿ ಇವರಿಗೆ ಈ ಗೌರವ ಸಂದಿದೆ.
ಅವರ ಸಂಶೊಧನಾ ಲೇಖನವೂ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಉನ್ನತ 100 ಲೇಖನಗಳಲ್ಲಿ ಒಂದಾಗಿದೆ ಎಂದು ರೋಯಲ್ ಸೊಸೈಟಿ ಕೆಮಿಸ್ಟ್ರಿಯವರು ಪ್ರಕಟಿಸಿದ್ದಾರೆ. ಅವರ ಸಂಶೋಧನೆಗಳು ವ್ಯರ್ಥ ಶಾಖದಿಂದ ಪರಿಸರ ಸ್ನೇಹಿ ವಿದ್ಯುತ್ ಉತ್ಪಾದನೆ ಮಾಡುವ ತಂತ್ರಜ್ಞಾನವನ್ನು ಒಳಗೊಂಡಿದೆ. ಇವರ ಥರ್ಮೋಇಲೆಕ್ಟ್ರಿಕ್ ಮತ್ತು ಫೋಟೊ ಕ್ಯಾಟಲಿಟಿಕ್ ವಸ್ತುಗಳ ಮೇಲಿನ ಸಂಶೋಧನಾ ಲೇಖನಗಳಿಗೆ ಅತ್ಯಂತ ಜನಪ್ರಿಯ ಹಾಗೂ ಅತ್ಯಾಧುನಿಕ (ಹಾಟ್) ಸಂಶೋಧನೆಗಳೆಂದು ಪರಿಗಣಿಸಿದ್ದಾರೆ.
ಈ ಸಾಧನೆಯನ್ನು ಶ್ರೀನಿವಾಸ್ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ. ಶ್ರೀ ಸಿಎ. ಎ ರಾಘವೇಂದ್ರ ರಾವ್ ರವರು ಹಾಗೂ ಸಹಕುಲಾಧಿಪತಿ ಡಾ. ಎ ಶ್ರಿನಿವಾಸ್ ರಾವ್ ರವರು ಶ್ಲಾಘಿಸಿದ್ದಾರೆ.

Related Posts

Leave a Reply

Your email address will not be published.