ರಮೇಶ್ ಜಾರಕಿಹೊಳಿ ಸಿಡಿ ಕೇಸ್ ಇತ್ಯರ್ಥವಾಗಲಿದೆ, ಅವರು ಸಚಿವರಾಗುತ್ತಾರೆ : ಅಥಣಿ ಶಾಸಕ ಮಹೇಶ ಕುಮಟಳ್ಳಿ ಹೇಳಿಕೆ
ಶಾಸಕ ರಮೇಶ ಜಾರಕಿಹೋಳಿ ಸಿಡಿ ಕೇಸ ಬೇಗ ಇತ್ಯರ್ಥವಾಗಲಿದೆ ಮತ್ತೆ ಅವರು ಸಚಿವರಾಗುತ್ತಾರೆ ಎಂದು ಕರ್ನಾಟಕ ಕೋಳಗೇರಿ ಮಂಡಳಿ ಅದ್ಯಕ್ಷರು ಮತ್ತು ಅಥಣಿ ಮತಕ್ಷೇತ್ರದ ಶಾಸಕ ಮಹೇಶ ಕುಮಟಳ್ಳಿ ಹೇಳಿದರು.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಭರಮಖೋಡಿ ಗ್ರಾಮದಲ್ಲಿ ಸುಮಾರು ಐವತ್ತು ಲಕ್ಷ ರಸ್ತೆ ಸುಧಾರಣೆ ಕಾಮಗಾರಿ ಮತ್ತು ಅಥಣಿ ಸೀಡ್ ಪಾರ್ಮ ಸುಮಾರು ಹನ್ನೊಂದು ಲಕ್ಷ ರೂಪಾಯಿ ಒಂದು ಪ್ರಾಥಮಿಕ ಶಾಲಾ ಕೊಠಡಿ ಗುದ್ದಲಿ ಪೂಜೆ ನೆರವೇರಿಸಿ ಮಾದ್ಯಮದರೊಂದಿಗೆ ಮಾತನಾಡಿದರು.
ಈ ಸಂದರ್ಭದಲ್ಲಿ ಗುತ್ತಿಗೆದಾರರಾದ ಮಲ್ಲಿಕಾರ್ಜುನ ಅಂದಾನಿ, ಮುತ್ತಪ್ಪ ಜಮಖಂಡಿ ಹಣಮಂತ ಆರ್ದಾವೂರ ಶಿವರುದ್ರಪ್ಪ ಗೂಳಪ್ಪ, ಸಂದೀಪ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.