Header Ads
Breaking News

ಮುಖ್ಯಮಂತ್ರಿ ಬಾಲ ಸೇವಾ ಯೋಜನೆ ಘೋಷಣೆ

ಕೋವಿಡ್‌ನಿಂದ ತಂದೆ-ತಾಯಿಯನ್ನು ಕಳೆದುಕೊಂಡು ಅನಾಥರಾದ ಮಕ್ಕಳಿಗೆ ಮುಖ್ಯಮಂತ್ರಿ ಬಾಲ ಸೇವಾ ಯೋಜನೆಯನ್ನು ಸಿಎಂ ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ. ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಸಿಎಂ ಬಿಎಸ್‌ವೈ,  ಮಕ್ಕಳ ಪಾಲನೆ, ಪೋಷಣೆ ಮಾಡುವ ನಿಟ್ಟಿನಲ್ಲಿ ಸರ್ಕಾರದಿಂದ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ತಿಂಗಳಿಗೆ 3500 ರೂ. ಸಹಾಯಧನ ನೀಡಲಾಗುವುದು. ಪೋಷಕರಿಲ್ಲದ ಮಕ್ಕಳಿಗೆ ನೋಂದಾಯಿತ ಪಾಲನ ಸಮಿತಿಯಲ್ಲಿ ಆಶ್ರಯ ನೀಡಲಾಗುವುದು. ಗುಣಮಟ್ಟದ ಶಿಕ್ಷಣಕ್ಕೆ ವಸತಿ ಶಾಲೆಗಳಿಗೆ ಸೇರ್ಪಡೆಗೊಳಿಸಲಾಗುವುದು. 10 ನೇ ತರಗತಿ ಪೂರೈಸಿದವರಿಗೆ ಲ್ಯಾಪ್ ಟಾಪ್, ಟ್ಯಾಬ್  ನೀಡಲಾಗುವುದು. 21 ವರ್ಷವಾದ ಹೆಣ್ಣುಮಕ್ಕಳಿಗೆ 1 ಲಕ್ಷ ರೂ. ಸಹಾಯಧನ, ಉನ್ನತ ಶಿಕ್ಷಣ, ಮದುವೆಗೆ ನೆರವು ನೀಡಲಾಗುವುದು. ಕೋವಿಡ್ ನಿಂದ ಪೋಷಕರನ್ನು ಕಳೆದುಕೊಂಡವರ ಮಕ್ಕಳಿಗೆ ಹಿತೈಷಿ ನೇಮಿಸಿ ಸಬಲೀಕರಣಕ್ಕೆ ಕ್ರಮ ವಹಿಸಲಾಗುವುದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ.

 

Related posts

Leave a Reply

Your email address will not be published. Required fields are marked *