Header Ads
Breaking News

ರಾಜ್ಯದಲ್ಲಿ ಸದ್ಯಕ್ಕೆ ಲಾಕ್‌ಡೌನ್ ಇಲ್ಲ: ಸಿಎಂ ಬಿಎಸ್‌ವೈ

ಬೆಂಗಳೂರು:ರಾಜ್ಯದಲ್ಲಿ ಮೇ 12 ರ ವರೆಗೆ ಮಾತ್ರ ಜನತಾ ಕರ್ಫ್ಯೂ ಇರಲಿದ್ದು, ಲಾಕ್ ಡೌನ್ ಮುಂದುವರೆಸುವ ಯೋಚನೆ ಸರ್ಕಾರದ ಮುಂದಿಲ್ಲ ಎಂದು ಸಿಎಂ ಬಿ. ಎಸ್. ಯಡಿಯೂರಪ್ಪ ಹೇಳಿದ್ದಾರೆ. ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಸಭೆಯ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ, ರಾಜ್ಯದಲ್ಲಿ ಸದ್ಯಕ್ಕೆ ಲಾಕ್ ಡೌನ್ ಇಲ್ಲ ಎಂದಿದ್ದಾರೆ. ಇನ್ನು ಆಕ್ಸಿಜನ್ ಸರಬರಾಜು ನಿರ್ವಹಣೆಗೆ ಸಚಿವರನ್ನು ನೇಮಕ ಮಾಡಲಾಗಿದೆ. ಜಗದೀಶ್ ಶೆಟ್ಟರ್ ಅವರಿಗೆ ಆಕ್ಸಿಜನ್ ನಿರ್ವಹಣೆಯ ಹೊಣೆಯನ್ನು ನೀಡಲಾಗಿದ್ದು, ಡಿಸಿಎಮ್ ಡಾ. ಅಶ್ವತ್ಥ್ ನಾರಾಯಣ್‌ಗೆ ರೆಮ್ಡಿಸಿವರ್ ನಿರ್ವಹಣೆ ವಹಿಸಲಾಗಿದೆ. ಬೆಡ್ ಸಮಸ್ಯೆ ಬಗೆಹರಿಸಲು ಇಬ್ಬರು ಸಚಿವರನ್ನು ನೇಮಕ ಮಾಡಲಾಗಿದೆ. ಸಚಿವ ಬಸವರಾಜ್ ಬೊಮ್ಮಾಯಿ ಮತ್ತು ಆರ್ ಅಶೋಕ್‌ಗೆ ಅವರಿಗೆ ಬೆಡ್ ಸಮಸ್ಯೆ ಬಗೆಹರಿಸಲು ಜವಾಬ್ದಾರಿ ನೀಡಲಾಗಿದೆ ಎಂದರು.
ಇನ್ನು ಜಿಲ್ಲೆಯ ಸಮಸ್ಯೆಗಳ ಬಗ್ಗೆ ಪರಿಹರಿಸಲು ಉಸ್ತುವಾರು ಸಚಿವರು ಜಿಲ್ಲೆಗಳಿಗೆ ಹೋಗಬೇಕು. ಹೆಚ್ಚುವರಿ ಆಕ್ಸಿಜನ್ ಉತ್ಪಾದನೆಗೂ ಮನವಿ ನೀಡಲಾಗಿದೆ. ಮಹಾರಾಷ್ಟ್ರ ಪಾಲಿನ ಆಕ್ಸಿಜನ್ ತರಲು ಕ್ರಮ ಕೈಗೊಳ್ಳಲಾಗಿದೆ. ಜನತಾ ಕರ್ಫ್ಯೂ ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಇನ್ನು ಪತ್ರಕರ್ತರು ಫ್ರಂಟ್‌ಲೈನ್ ವಾರಿಯರ್ಸ್‌ಗಳಾಗಿದ್ದು, ಪತ್ರಕರ್ತರಿಗೂ ವ್ಯಾಕ್ಸಿನ್ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.

 

Related posts

Leave a Reply

Your email address will not be published. Required fields are marked *