Header Ads
Breaking News

ವಿಜಯಪುರ ಜಿಲ್ಲೆಯಲ್ಲಿ ಬೀದಿ ಹಸುಗಳಿಗೆ ಮೇವು: ದನಕರುಗಳ ಹಸಿವು ನೀಗಿಸುತ್ತಿರುವ ಶಕ್ತಿ ಕುಮಾರ್

ಕೋವಿಡ್ ಸೋಂಕಿನ ಹಿನ್ನೆಲೆಯಲ್ಲಿ ಸಾಕಷ್ಟು ಜನರಿಗೆ ಹಸಿವಿನ ಚೀಲ ತುಂಬಿಸಿಕೊಳ್ಳಲು ಒಂದು ಹೊತ್ತಿನ ಊಟಕ್ಕೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಇಂತಹ ಸಂದರ್ಭದಲ್ಲಿ ವಿಜಯಪುರ ನಗರದ ನಿವಾಸಿ ಶಕ್ತಿ ಕುಮಾರ್ ಉಕುಮನಾಳ ಎಂಬ ಯುವಕ ಈ ಲಾಕ್ಡೌನ್ ಸಮಯದಲ್ಲಿ ಹಸುಗಳು ಮೇವು ಇಲ್ಲದೆ ಅಸುನೀಗುತ್ತಿದ್ದನ್ನು ಕಂಡ ಈ ಮೂಕಪ್ರಾಣಿಗಳ ಪ್ರೇಮಿ ಹಾಗೂ ಸ್ನೇಹಿತ ಶಿವು ಕಂಕನವಾಡಿ ಅವರು ಸುಮಾರು ಒಂದು ತಿಂಗಳಿಂದ ತನ್ನ ಸ್ವಂತ ಖರ್ಚಿನಲ್ಲಿ ಮೇವು ಖರೀದಿಸಿ ಬೀದಿಯಲ್ಲಿರುವ ದನಕರುಗಳಿಗೆ ಹಾಕುತ್ತಿದ್ದಾರೆ.

ಇಂತಹ ಮಾನವೀಯತೆ ಕಾರ್ಯ ಮಾಡುತ್ತಿರುವ ಶಕ್ತಿ ಕುಮಾರ್ ಉಕುಮನಾಳ ಅವರು. ನಾವು ಮಾನವರು ಮಾನವೀಯತೆ ನಮ್ಮ ಧರ್ಮ ಆದ ಕಾರಣ ಮೂಕಪ್ರಾಣಿಗಳ ಉಳಿವಿಗಾಗಿ ನಿಮ್ಮ ಕೈಲಾದಮಟ್ಟಿಗೆ ಹುಲ್ಲುಗಳನ್ನು ಖರೀದಿಸಿ ದನಗಳಿಗೆ ಹಾಕುವ ಮುಖಾಂತರ ಮೂಕಪ್ರಾಣಿಗಳ ಜೀವ ಉಳಿಸಿ ಎಂದು ಜನರಲ್ಲಿ ಕೈಮುಗಿದು ಕೇಳಿಕೊಳ್ಳುತ್ತಿದ್ದಾರೆ.

 

Related posts

Leave a Reply

Your email address will not be published. Required fields are marked *