Header Ads
Breaking News

ಸಕಲೇಶಪುರದಲ್ಲಿಯೂ ಕರ್ಫ್ಯೂಗೆ ಉತ್ತಮ ಸ್ಪಂದನೆ

ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನಲ್ಲಿ ಕೋವಿಡ್ ಎರಡನೆಯ ದಿನದ ಕರ್ಫ್ಯೂಗೆ ಉತ್ತಮವಾದ ಬೆಂಬಲ ವ್ಯಕ್ತವಾಗಿದೆ. ಮೆಡಿಕಲ್ ಆಸ್ಪತ್ರೆಗಳನ್ನು ಹೊರತುಪಡಿಸಿ ಉಳಿದೆಲ್ಲ ಅಂಗಡಿ ಮುಂಗಟ್ಟುಗಳನ್ನು ವರ್ತಕರು ಸ್ವಯಂ ಪ್ರೇರಿತವಾಗಿ ಮುಚ್ಚಿ ಕರ್ಫ್ಯೂಗೆ ಬೆಂಬಲ ನೀಡಿದರು.

ರಸ್ತೆಯಲ್ಲಿ ಅಲ್ಲೊಂದು ಇಲ್ಲೊಂದು ಆಟೋಗಳನ್ನು ಬಿಟ್ಟರೆ ಬೇರೆ ಯಾವುದೇ ವಾಹನಗಳು ಕಣ್ಣಿಗೆ ಕಾಣಿಸುತ್ತಿರಲಿಲ್ಲ. ಆದರೆ ಕೆಲವೊಂದು ಯುವಕರು ಅನಾವಶ್ಯಕವಾಗಿ ಬೈಕ್ ಓಡಿಸುತ್ತಿದ್ದ ದೃಶ್ಯಗಳು ಕಂಡುಬಂದವು. ಹೋಟೆಲ್‌ಗಳಲ್ಲಿ ಪಾರ್ಸೆಲ್‌ಗೆ ಮಾತ್ರ ಅವಕಾಶವಿತ್ತು. ಸಕಲೇಶಪುರ ಡಿವೆಎಸ್ಪಿ ಗೋಪಿಯವರೇ ನೇರವಾಗಿ ಫೀಲ್ಡಿಗಿಳಿದು ಅನಾವಶ್ಯಕವಾಗಿ ರಸ್ತೆಯಲ್ಲಿ ಓಡಾಡುತ್ತಿದ್ದ ಹುಡುಗರಿಗೆ ಬಿಸಿಬಿಸಿ ಕಜ್ಜಾಯ ನೀಡುವ ಮೂಲಕ ಕೋವಿಡ್ ಭಯಾನಕತೆಯ ಕುರಿತಾದ ಜಾಗೃತಿ ಮೂಡಿಸಿದರು.

Related posts

Leave a Reply

Your email address will not be published. Required fields are marked *