Header Ads
Breaking News

ಹಾಸನದಲ್ಲಿ ಅಮೂಲಾಗ್ರ ಬದಲಾವಣೆ ಆಗಲಿದೆ: ಶಾಸಕ ಪ್ರೀತಂ ಗೌಡ

ಹಾಸನದ ಹಿಮ್ಸ್ ಆಸ್ಪತ್ರೆಯಲ್ಲಿ 400 ಇರುವ ಬೆಡ್‌ಗಳನ್ನು 600ಕ್ಕೆ ಹೆಚ್ಚಿಸಲು ತೀರ್ಮಾನ ಮಾಡಲಾಗಿದ್ದು, ಕರೋನಾ ಸೋಂಕಿತರಿಗೆ ಸರಿಯಾದ ಸೌಲಭ್ಯವನ್ನು ಕಲ್ಪಿಸಿಕೊಡುವ ತೀರ್ಮಾನ ಮಾಡಲಾಗಿದೆ ಎಂದು ಶಾಸಕ ಪ್ರೀತಂ ಗೌಡ ಹೇಳಿದರು.

ಅವರು ಹಾಸನದ ಜಿಲ್ಲಾ ಕಚೇರಿಯ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಇನ್ನೂ 24 ಗಂಟೆಗಳಲ್ಲಿ ಹಾಸನದಲ್ಲಿ ಅಮೂಲಾಗ್ರ ಬದಲಾವಣೆಗಳನ್ನು ಜನತೆ ನೋಡುವುದಾಗಿ ಹಾಗೂ ಹಾಸನದ ಹಿಮ್ಸ್ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರಿಗಾಗಿ ಮೀಸಲಿಟ್ಟಿರುವ ಆಕ್ಸಿಜನ್ ಸೌಲಭ್ಯ ಇರುವ 400 ಬೆಡ್‌ಗಳನ್ನು600 ಕ್ಕೆ ಹೆಚ್ಚಿಸಲಾಗುವುದು ಎಂದು ತಿಳಿಸಿದರು. ಆಕ್ಸಿಜನ್ ಸೌಲಭ್ಯವನ್ನು ಉಪಯೋಗಿಸಿಕೊಳ್ಳದೆ ಇರುವಂತಹ ಸೋಂಕಿತ ರೋಗಿಗಳನ್ನು ಹಳೆಯ ಕೋರ್ಟ್ ಕಟ್ಟಡಕ್ಕೆ ವರ್ಗಾಯಿಸುವುದು ಮತ್ತು ತುರ್ತು ಅಗತ್ಯ ಇರುವಂಥ ರೋಗಿಗಳಿಗೆ ಆಶ್ರಯ ವ್ಯವಸ್ಥೆವುಳ್ಳ ಬೆಡ್‌ಗಳನ್ನು ಕಲ್ಪಿಸುವ ಕುರಿತಾಗಿ ತಿಳಿಸಿದರು. ಹಾಗೂ ಜನತೆ ಮಾಸ್ಕ್ ಧರಿಸಿ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕು ಇವೆಲ್ಲವನ್ನೂ ಮೀರಿ ಕೊರೋನಾ ಸೋಂಕು ತಗುಲಿದರೆ ಸಾರ್ವಜನಿಕರು ಧೃತಿಗೆಡುವ ಅವಶ್ಯಕತೆಯಿಲ್ಲ. ಅವರೊಂದಿಗೆ ಸರ್ಕಾರ ಮತ್ತು ಜಿಲ್ಲಾಡಳಿತ ಎಂದೆಂದಿಗೂ ಇರುತ್ತದೆ ಎಂಬ ಆಶಾದಾಯಕ ಮಾತುಗಳನ್ನು ತಿಳಿಸಿದರು.

Related posts

Leave a Reply

Your email address will not be published. Required fields are marked *