ವಿಟ್ಲದಲ್ಲಿ ಮೊಂತಿ ಫೆಸ್ಟ್ ಸಂಭ್ರಮ
ಸೂರಿಕುಮೇರು ಸೈಂಟ್ ಜೋಸೆಪ್ ಚರ್ಚ್ ನಲ್ಲಿ ಕೋವಿಡ್ ನಿಯಮ ಪಾಲಿಸಿಕೊಂಡು ಬಹಳ ಸರಳ ರೀತಿಯಲ್ಲಿ ತೆನೆ ಹಬ್ಬ ಆಚರಿಸಲಾಯಿತು.
ಫಾದರ್ ಗ್ರೆ ಗರಿ ಪಿರೇರಾ ದಿವ್ಯ ಬಲಿ ಪೂಜೆಯ ನೇತೃತ್ವ ವಹಿಸಿದ್ದರು. ಕಥೊಲಿಕ್ ಸಭಾ ಸೂರಿಕುಮೇರು ಬೊರಿಮಾರ್ ಘಟಕದ ಅಧ್ಯಕ್ಷರಾದ ಸ್ಟೀವನ್ ಮಾರ್ಟಿಸ್ ರವರ ಮಾರ್ಗದರ್ಶನದಲ್ಲಿ ಭಕ್ತಾದಿಗಳಿಗೆ ಕಬ್ಬು ಹಂಚಲಾಯಿತು. ಇನ್ನು ಫಾತಿಮಾ ಮಾತೆಯ ದೇವಾಲಯ ಪೆರುವಾಯಿಯಲ್ಲೂ ಕೂಡ ಕೋವಿಡ್ ಮುನ್ನಚ್ಚರಿಕೆಗಳೊಂದಿಗೆ ಸರಳಾವಾಗಿ ಮೋಂತಿ ಹಬ್ಬ ಆಚರಿಸಲಾಯಿತು. ಫಾ. ವಿಶಾಲ್ ಮೋನಿಸ್ ನೇತೃತ್ವದಲ್ಲಿ ಬಲಿಪೂಜೆ ಹಾಗೂ ಧಾರ್ಮಿಕ ವಿಧಿಗಳು ಜರಗಿದವು. ಬಳಿಕ ಮಕ್ಕಳು ಮಾತೆ ಮೇರಿಗೆ ಹೂಗಳನ್ನು ಅರ್ಪಿಸಿದರು.