ಶ್ರೀನಿವಾಸ್ ಆಸ್ಪತ್ರೆ || ಉಚಿತ ಮಧುಮೇಹ ತಪಾಸಣೆ ಶಿಬಿರ
ವಿಶ್ವ ಮಧುಮೇಹ ದಿನದ ಅಂಗವಾಗಿ ಶ್ರೀನಿವಾಸ್ ಆಸ್ಪತ್ರೆ ವೈದ್ಯಕೀಯ ವಿಭಾಗದಿಂದ ಉಚಿತ ಮಧುಮೇಹ ತಪಾಸಣೆ ಶಿಬಿರ ಆಯೋಜಿಸಲಾಯಿತು ಮತ್ತು ಪಾದದ ರಕ್ತನಾಳ ಹಾಗೂ ನರ ತಪಾಸಣೆ ಮಾಡುವ ವಿಶೇಷ ಯಂತ್ರವನ್ನು ಶ್ರೀನಿವಾಸ್ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಡಾ. ಸಿಎ ಎ ರಾಘವೇಂದ್ರ ರಾವ್, ಸಹ ಕುಲಾಧಿಪತಿಗಳಾದ ಡಾ. ಎ ಶ್ರೀನಿವಾಸ್ ರಾವ್, ಡೀನ್ ಡಾ. ಉದಯ ಕುಮಾರ್ ರಾವ್, ವೈದ್ಯಕೀಯ ಮೇಲ್ವಿಚಾರಕರಾದ ಡಾ. ಡೇವಿಡ್ ಡಿ ಎಮ್ ರೊಸಾರಿಯೋ ಇವರು ಉದ್ಘಾಟಿಸಿದರು.
ಕಾರ್ಯಕ್ರಮಕ್ಕೆ ಡಾ. ಟಿ ಆರ್ ಉಡುಪ, ಫ್ಯಾಮಿಲಿ ಫಿಸಿಶಿಯನ್, ಬಿ.ಎ.ಎಸ್.ಎಫ್; ಡಾ. ಜೀವಿತ, ಸ್ರೀರೋಗ ತಜ್ಞೆ, ಕಂಸೆಟ್ಟಾ ಆಸ್ಪತ್ರೆ, ಕಿನ್ನಿಗೋಳಿ ಇವರು ಮುಖ್ಯ ಅತಿಥಿಗಳಾಗಿ ಆಗಮಿಸಿದರು.
ಡಾ. ಅನಿತಾ ಸೀಕ್ವೇರ, ಪ್ರೊಫೆಸರ್ ಮತ್ತು ಹೆಡ್, ಜನರಲ್ ಮೆಡಿಸಿನ್ ವಿಭಾಗ; ಡಾ. ಸುನಿಲ್ ಕುಮಾರ್, ಪ್ರೊಫೆಸರ್, ಜನರಲ್ ಮೆಡಿಸಿನ್ ವಿಭಾಗ; ಡಾ. ಜಯಪ್ರಕಾಶ್, ಪ್ರೊಫೆಸರ್, ಜನರಲ್ ಮೆಡಿಸಿನ್ ವಿಭಾಗ; ಡಾ. ಅಮರ್ ಡಿ ಎನ್, ಪ್ರೊಫೆಸರ್, ಜನರಲ್ ಸರ್ಜರಿ ವಿಭಾಗ; ಡಾ. ಅರವಿಂದ್ ನಾಯ್ಕ್, ಅಸೋಸಿಯೇಟ್ ಪ್ರೊಫೆಸರ್, ಜನರಲ್ ಸರ್ಜರಿ ವಿಭಾಗ; ಡಾ. ಶಶಿರಾಜ್ ಶೆಟ್ಟಿ, ಪೊಫೆಸರ್ ಮತ್ತು ಹೆಡ್, ಎಲುಬು ಮತ್ತು ಕೀಲು ವಿಭಾಗ; ಡಾ. ದಿನೇಶ್ ಕೆ ವಿ ಎನ್, ಪೊಫೆಸರ್, ಎಲುಬು ಮತ್ತು ಕೀಲು ವಿಭಾಗ; ಡಾ. ಕಾರ್ತಿಕ್ ಐತಾಳ್, ಪ್ಲಾಸ್ಟಿಕ್ ಸರ್ಜನ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.