ಶ್ರೀನಿವಾಸ್ ವಿವಿಯಲ್ಲಿ ಜೂನ್ 26ರಂದು ವರ್ಚುವಲ್ ಸಮ್ಮೇಳನ
ಮಂಗಳೂರು: ಶ್ರೀನಿವಾಸ್ ವಿಶ್ವವಿದ್ಯಾಲಯದ ಕಾಲೇಜ್ ಆಫ್ ಸೋಶಿಯಲ್ ಸೈನ್ಸ್ ಆಂಡ್ ಹ್ಯೂಮಾನಿಟಿಯು ವಿಜ್ಞಾನ, ಸಾಮಾಜಿಕ ವಿಜ್ಞಾನ, ನಿರ್ವಹಣೆ, ಮಾಹಿತಿ ವಿಜ್ಞಾನ, ಕಾನೂನು ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ‘ಸುಧಾರಣೆ, ಪ್ರದರ್ಶನ ಮತ್ತು ಪರಿವರ್ತನೆ: ಸವಾಲುಗಳು ಮತ್ತು ಅವಕಾಶಗಳು’ ಎಂಬ ವಿಷಯದ ಕುರಿತು ಆನ್ಲೈನ್ ವೇದಿಕೆ ಮೂಲಕ ಜೂನ್ 26 ರ ಶನಿವಾರದಂದು ವರ್ಚುವಲ್ ಸಮ್ಮೇಳನವನ್ನು ಆಯೋಜಿಸುತ್ತಿದೆ.ಶೆರಾಟನ್ ಗ್ರ್ಯಾಂಡ್ ಬೆಂಗಳೂರು- ಮ್ಯಾರಿಯಟ್ ಇಂಟರ್ನ್ಯಾಷನಲ್ ನ ಮಾನವ ಸಂಪನ್ಮೂಲ ನಿರ್ದೇಶಕ ಪ್ರದೀಪ್ ಘೋರ್ಫೇಡ್ ಸಮ್ಮೇಳನವನ್ನು ಉದ್ಘಾಟಿಸಲಿರುವರು.
ಅಧಿವೇಶನದ ಅಧ್ಯಕ್ಷತೆಯನ್ನು ಶ್ರೀನಿವಾಸ್ ವಿಶ್ವವಿದ್ಯಾಲಯ ಕುಲಾಧಿಪತಿ ಡಾ. ಸಿಎ. ಎ. ರಾಘವೇಂದ್ರ ರಾವ್ ವಹಿಸಲಿದ್ದಾರೆ.ಉದ್ಘಾಟನೆಯ ನಂತರ, ಮುಲ್ಕಿಯ ಪೌಲಿನ್ ಹೋಮ್ ಕೌನ್ಸೆಲಿಂಗ್ ನಿರ್ದೇಶಕಿ ಡಾ. ಸಿಸ್ಟರ್ ಸೆವೆರಿನ್ ಮೆನೆಜೆಸ್ ಮತ್ತು ಡೆಹ್ರಾಡೂನ್ನ ಗ್ರಾಫಿಕ್ ಎರಾ ಹಿಲ್ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಲಾ ವಿಭಾಗದ ಮುಖ್ಯಸ್ಥ ಡಾ. ಬ್ರಿಜೇಶ್ ಸಿಂಗ್ ಯಾದವ್ ಅವರು ಸಮ್ಮೇಳನ ವಿಷಯದ ಕುರಿತು ತಾಂತ್ರಿಕ ಅಧಿವೇಶನಗಳನ್ನು ನೀಡಲಿದ್ದಾರೆ.ಶಿಕ್ಷಣ ತಜ್ಞರು ಹಾಗು ಸಂಶೋಧನಾ ವಿದ್ಯಾರ್ಥಿಗಳು ಸಲ್ಲಿಸಿದ 39 ಸಂಶೋಧನಾ ಲೇಖನಗಳನ್ನು ಸಮ್ಮೇಳನದಲ್ಲಿ ಪ್ರಸ್ತುತ ಪಡಿಸಿ ಚರ್ಚಿಸಲಾಗುತ್ತದೆ.ಸಮ್ಮೇಳನದ ಅಧ್ಯಕ್ಷತೆಯನ್ನು ಶ್ರೀನಿವಾಸ್ ವಿಶ್ವವಿದ್ಯಾಲಯದ ಕುಲಪತಿ ಡಾ.ಪಿ.ಎಸ್. ಐತಾಳ್ ವಹಿಸಲಿದ್ದಾರೆ ಎಂದು ಸಮ್ಮೇಳನದ ಸಂಯೋಜಕ ಸಹಾಯಕ ಪ್ರಾಧ್ಯಾಪಕ ಡಾ.ಪ್ರದೀಪ್ ಎಂ.ಡಿ. ಪ್ರಕಟಣೆಯಲ್ಲಿ ತಿಳಿಸಿದರು.