ಸರಕಾರ ಸಹಾಯ ಮಾಡದಿದ್ರೆ ಸುಗಮ ಸಂಚಾರ ಕಷ್ಟ : ಕುಯಿಲಾಡಿ ಸುರೇಶ್ ನಾಯಕ್
ಕೊವಿಡ್ ಲಾಕ್ ಡೌನ್ ನಿಂದ ಖಾಸಗಿ ಬಸ್ ಉದ್ಯಮ ಸಂಕಷ್ಟದಲ್ಲಿದೆ.ಸರಕಾರ ಡಿಸೇಲ್ ದರ ಏರಿಕೆಯನುಸಾರ ದರ ಪರಿಷ್ಕರಿಸಿ ಒಂದಷ್ಟು ತೆರಿಗೆ ವಿನಾಯಿತಿಗಳನ್ನು ಮಾಡಿದ್ರೆ ಖಾಸಗಿ ಬಸ್ಸುಗಳು ಸುಗಮ ಸಂಚಾರ ಮಾಡಲು ಅನುಕೂಲವಾಗುವುದು ಎಂದು ಉಡುಪಿ ಸಿಟಿ ಬಸ್ ಮಾಲಕರ ಸಂಘದ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಅಗ್ರಹಿಸಿದ್ದಾರೆ.
ಕಳೆದ ವರುಷ ಕೆ ಎಸ್ ಅರ್ ಟಿಸಿ ದರ ಕಡಿತ ಹಾಗೂ ವಿದ್ಯಾರ್ಥಿಗಳಿಗೆ ವಿನಾಯಿತಿ ಮಾಡಿರುವ ಕಾರಣಗಳನ್ನು ನೀಡಿದ ಹಿನ್ನಲೆಯಲ್ಲಿ, ಸರಕಾರ ಸುಮಾರು ಎರಡು ಸಾವಿರ ನಾಲ್ಕೂರು ಕೋಟಿ ಅನುದಾನ ಮಾಡಿತ್ತು.ಕಳೆದ ನೂರಾ ಅರು ವರುಷಗಳಿಂದ ಖಾಸಗಿ ಬಸ್ ಗಳು ದರ ಕಡಿತ ಹಾಗೂ ವಿದ್ಯಾರ್ಥಿಗಳಿಗೆ ವಿನಾಯಿತಿಗಳನ್ನು ನೀಡುತ್ತಾ ಬಂದಿದೆ.ಈವರೆಗೂ ವಿನಾಯಿತಿ ಹಣವನ್ನು ನಾವು ಸರಕಾರದಿಂದ ಕೇಳಿಲ್ಲ.
ಖಾಸಗಿ ಬಸ್ ಓಕ್ಕೂಟ ಕ್ಕೆ ಸಾರಿಗೆ ಸಚಿವರ ಜೊತೆ ಚರ್ಚಿಸಲು ಅವಕಾಶ ಲಭಿಸಿದ್ದು,ಮುಂದಿನ ವಾರ ಸಾರಿಗೆ ಸಚಿವರಿಗೆ ನಮ್ಮ ಸಂಕಷ್ಟಗಳ ಬಗ್ಗೆ ಮನವರಿಕೆ ಮಾಡಿ ಕೊಡಲಾಗುವುದು ಎಂದು ಸುರೇಶ್ ಕುಯಿಲಾಡಿ ತಿಳಿಸಿದರು.