ಅ.4. ಬಂಟ್ವಾಳದ ಭಂಟರ ಭವನದಲ್ಲಿ “ಅಂತ್ಯೋದಯ” ಮಾಹಿತಿ ಕಾರ್ಯಗಾರ

ದ.ಕ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆ, ಸಂಯುಕ್ತ ಆಶ್ರಯದಲ್ಲಿ ಗ್ರಾಮ ಪಂಚಾಯತ್ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾಯಿತ ಸದಸ್ಯರು ಗಳಿಗೆ ಇಲಾಖಾ ಯೋಜನೆಗಳ ಬಗ್ಗೆ ಒಂದು ದಿನದ “ಅಂತ್ಯೋದಯ” ಮಾಹಿತಿ ಕಾರ್ಯಗಾರ ಅಕ್ಟೋಬರ್ 4 ರಂದು ಬಂಟ್ವಾಳದ ಭಂಟರ ಭವನ ಸಭಾಂಗಣದಲ್ಲಿ ನಡೆಯಲಿದೆ. ಎಂದು ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖಾ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಹೇಳಿದರು.

ಅವರು ಮಂಗಳೂರಿನಲ್ಲಿ ಸುದ್ದಿಗೊಷ್ಟಿ ನಡೆಸಿ ಮಾತನಾಡಿ ಅಕ್ಟೋಬರ್ 4 ರಂದು ನಡೆಯಲಿರುವ ‘ಅಂತ್ಯೋದಯ’ ಕಾರ್ಯಗಾರಕ್ಕೆ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆಯ ಸಚಿವ ಎ ನಾರಾಯಣ ಸ್ವಾಮಿ ಚಾಲನೆ ನೀಡಲಿದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶುಭಹಾರೈಸಲಿದ್ದರೆ “ಅಂತ್ಯೋದಯ” ಕಾರ್ಯಾಗಾರವನ್ನು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಆಯೋಜಿಸುವ ಯೋಜನೆ ಹಾಕಿದ್ದು ಈಗಾಗಲೇ ಉಡುಪಿ ಜಿಲ್ಲೆಯಲ್ಲಿ ಈ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿದೆ ಇನ್ನೂ ಈ ಕಾರ್ಯಾಗಾರದಲ್ಲಿ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್ ಹಾಗೂ ನಗರ ಸ್ಥಳೀಯ ಸಂಸ್ಥೆ ಚುನಾಯಿತ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು ಭಾಗವಹಿಸಲಿದ್ದಾರೆ ಮಾತ್ರವಲ್ಲದೆ ಈ ಕಾರ್ಯಾಗಾರದಲ್ಲಿ ನಮ್ಮ ಇಲಾಖೆಯ ಕಾರ್ಯ, ಇಲಾಖೆಯ ಯೋಜನೆ, ಆನ್ ಲೈನ್ ಅರ್ಜಿ ಮತ್ತು ಇತರ ಕಾರ್ಯಕ್ರಮಗಳ ಬಗ್ಗೆ ಸಂಪೂರ್ಣ ಮಾಹಿತಿ ಮತ್ತು ಸಂವಾದ ಕಾರ್ಯಾಗಾರ ನಡೆಯಲಿದೆ…ಕಾರ್ಯಾಗಾರಕ್ಕೆ ಸಾಗರಿಗೆ ಮತ್ತು ಪರಿಶಿಷ್ಟ ವರ್ಷಗಳ ಕಲ್ಯಾಣ ಇಲಾಖಾ ಸಚಿವ ಬಿ ಶ್ರೀರಾಮುಲು, ಮೀನುಗಾರಿಕಾ ಬಂದರು,ಒಳನಾಡು ಜಲಸಾರಿಗೆ ಸಚಿವ ಎಸ್ ಅಂಗಾರ, ಜಿಲ್ಲೆಯ ಎಲ್ಲಾ ಶಾಸಕರು ಭಾಗಿಯಾಗಿಯಾಗಲಿದ್ದಾರೆ ಎಂದು ಅವರು ಹೇಳಿದರು.

ಈ ಸಂದರ್ಭ ಬಿಜೆಪಿ ಜಿಲ್ಲಾ ವಕ್ತಾರ ಜಗದೀಶ್ ಶೇನವಾ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸತೀಶ್ ಕುಂಪಲ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.