ಆಕಾಶ ಅದ್ಭುತಗಳ ಆಗರ -ಪ್ರೊಫೆಸರ್ ರಮೇಶ್ ಭಟ್

ವಿವಿಧ ವಿಸ್ಮಯಗಳಿಗೆಆಕಾಶ ಸಾಕ್ಷಿಯಾಗುತ್ತದೆ. ಆಕಾಶದ ಬಗ್ಗೆ ಆಳವಾಗಿ ತಿಳಿಯುತ್ತಾ ಹೋದಂತೆ ಅವು ಸೃಷ್ಟಿಸುವ ಅದ್ಭುತಗಳನ್ನು ತಿಳಿದುಕೊಳ್ಳಬಹುದುಎಂದು ತಜ್ಞರಾದಪ್ರೊಫೆಸರ್‍ರಮೇಶ್ ಭಟ್ ಹೇಳಿದರು.ಅವರುಉಜಿರೆಯಎಸ್‍ಡಿಎಂಕಾಲೇಜಿನ ಭೌತಶಾಸ್ತ್ರ ವಿಭಾಗ ಆಯೋಜಿಸಿದ ವಂಡರ್‍ಆಫ್ ಸ್ಕೈಎಂಬ ವಿಷಯದವೆಬಿನಾರ್‍ಕಾರ್ಯಕ್ರಮದಲ್ಲಿ ಮಾತನಾಡಿದರು.
ಆಕಾಶವು ನಮ್ಮದೃಷ್ಟಿಕೋನದಲ್ಲಿ ಭೂಮಿಯ ಮೇಲ್ಮೈಯ ಮೇಲೆ ಕಾಣುವ ವಾತಾವರಣ.ಸೂರ್ಯ, ಚಂದ್ರ ಮತ್ತು ನಕ್ಷತ್ರ ಮೊದಲಾದವುಗಳನ್ನು ಆಕಾಶದಲ್ಲಿಕಾಣಬಹುದು.ದಿನದ ಸಮಯಕ್ಕೆಅನುಗುಣವಾಗಿ ಆಕಾಶವು ವಿವಿಧ ಬಣ್ಣಗಳಲ್ಲಿ ಗೋಚರಿಸುತ್ತದೆ.ಮುಂಜಾನೆಅಥವಾ ಮುಸ್ಸಂಜೆಯಲ್ಲಿ ಆಕಾಶವು ಕೆಂಪು, ಕಿತ್ತಳೆ, ಹಸಿರು ಮತ್ತು ನೇರಳೆ ಬಣ್ಣದಲ್ಲಿ ಕಾಣಿಸಿಕೊಳ್ಳುತ್ತದೆ.ಇದು ಸೂರ್ಯಎಷ್ಟು ಮಂದವಾಗಿ ಮತ್ತುರಾತ್ರಿಗೆಎಷ್ಟು ಹತ್ತಿರದಲ್ಲಿದ್ದಾನೆಎಂಬುವುದÀನ್ನು ಸೂಚಿಸುತ್ತದೆ.ನೈಸರ್ಗಿಕ ವಿದ್ಯಮಾನಗಳಾದ ಮೋಡ, ಮಳೆಬಿಲ್ಲು, ಮುಂಬೆಳಕು,ಮಿಂಚು ಮತ್ತು ಮಳೆಯನ್ನು ಆಕಾಶದಲ್ಲಿಕಾಣಬಹುದು. ಇರುಳಿನ ಹೊತ್ತಿನಲ್ಲಿಆಕಾಶದ ಸ್ವರೂಪವೇಬದಲಾಗಿರುತ್ತದೆಎಂದರು.ಈ ಸಂದರ್ಭದಲ್ಲಿಕಾಲೇಜಿನ ಪ್ರಾಂಶುಪಾಲ ಡಾ.ಸತೀಶ್ಚಂದ್ರಎಸ್. ಉಪಸ್ಥಿತರಿದ್ದರು.ಭೌತಶಾಸ್ತ್ರ ವಿಭಾಗಮುಖ್ಯಸ್ಥ ಶ್ರೀ.ಎಸ್.ಎನ್.ಕಾಕತ್ಕರ್, ವಿಭಾಗದಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪ್ರಾಧ್ಯಾಪಕಿ ನಮ್ರತಾ ಸ್ವಾಗತಿಸಿದರು.ಪ್ರಾಧ್ಯಾಪಕಿ ರಶ್ಮಿ ವಂದಿಸಿದರು.

Related Posts

Leave a Reply

Your email address will not be published.