ಆಹಾರ ಪೊಟ್ಟಣ ಕಿರಾಣಿ ಅಗಂಡಿಯೊಂದರಲ್ಲಿ ಮಾರಾಟಕ್ಕೆ ಇಡಲಾಗಿದೆ- ಹರೀಶ್ ಕುಮಾರ್ ಆರೋಪ

ಕಾರ್ಮಿಕ ಇಲಾಖೆಯ ಕಲ್ಯಾಣ ನಿಧಿಯಡಿ ರಾಜ್ಯದಲ್ಲಿ 8೦೦೦ ಕೋಟಿ ರೂ. ಸಂಗ್ರಹವಿದೆ. ಅದರಡಿ ಕಾರ್ಮಿಕರಿಗೆ ಆಹಾರ ಪೊಟ್ಟಣ ವಿತರಿಸಲಾಗುತ್ತಿದೆ. ಬಂಟ್ವಾಳದ ನರಿಕೊಂಬು ಗ್ರಾಮದಲ್ಲಿ ವಿತರಣೆಗೆ ಬಂದ ಆಹಾರ ಪೊಟ್ಟಣ ಅಲ್ಲಿನ ಕಿರಾಣಿ ಅಗಂಡಿಯೊಂದರಲ್ಲಿ ಮಾರಾಟಕ್ಕೆ ಇಡಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಆರೋಪಿಸಿದ್ದರು.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಲವು ಕಡೆಗಳಲ್ಲಿ ಇಂತಹ ಆಹಾರ ಪೊಟ್ಟಣಗಳನ್ನು ಬಿಜೆಪಿ ಪಕ್ಷದ ಮನೆಗಳಲ್ಲಿ ದಾಸ್ತಾನು ಇಡುವ ಬಗ್ಗೆ ತಮಗೆ ಮಾಹಿತಿ ದೊರಕಿರುವುದಾಗಿ ಹೇಳಿದರು. ಬಿಜೆಪಿ ಆಡಳಿತ ಇರುವಲ್ಲಿ ಗ್ರಾ.ಪಂ.ಗಳಲ್ಲಿ ಪೊಟ್ಟಣ ವಿತರಿಸಲಾದರೆ, ಕಾಂಗ್ರೆಸ್ ಆಡಳಿತ ಇರುವ ಗ್ರಾಮಗಳಲ್ಲಿ ಬಿಜೆಪಿ ಕಾರ್ಯಕರ್ತರ ಮನೆಗಳಲ್ಲಿ ದಾಸ್ತಾನು ಇರಿಸಿರುವುದು ಯಾರ ಒತ್ತಡದಿಂದ ಎಂದು ಅವರು ಪ್ರಶ್ನಿಸಿದರು.ಕೆಎಸ್‌ಆರ್‌ಟಿಸಿ ಬಸ್ಸನ್ನು ಐಸಿಯು ಆಗಿ ಪರಿವರ್ತಿಸಿ ಗ್ರಾಮೀಣ ಭಾಗದಲ್ಲಿ ಜನರ ಆರೋಗ್ಯ ತಪಾಸಣೆ ಕಾರ್ಯದಲ್ಲೂ ಇದೇ ರೀತಿ ರಾಜಕೀಯ ನಡೆಯುತ್ತಿದೆ. ಈ ಬಗ್ಗೆ ಕ್ರಮ ವಹಿಸಬೇಕಾದ ಅಧಿಕಾರಿಗಳು ಕೂಡಾ ಬಿಜೆಪಿಯ ಕೈಗೊಂಬೆಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಹರೀಶ್ ಕುಮಾರ್ ಆಪಾದಿಸಿದರು.

Related Posts

Leave a Reply

Your email address will not be published.