ಉಚ್ಚಿಲ ಬಡಾ ಗ್ರಾ.ಪಂ. ವಾಚನಾಲಯಕ್ಕೆ ಶಾಲಾ ಪಠ್ಯ ಪುಸ್ತಕ ವಿತರಣೆ

ಉಡುಪಿ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎನ್.ಎಚ್.ನಾಗೂರರವರು ಪಠ್ಯಪುಸ್ತಕ ಸಮಿತಿ ಬೆಂಗಳೂರು ಇದರ ಆದೇಶದಂತೆ ಹಾಗೂ ಉಡುಪಿ ಜಿಲ್ಲಾ ಪಂಚಾಯತ್ ಕಾರ್ಯ ನಿರ್ವಹಣಾ ಅಧಿಕಾರಿಯವರ ನಿರ್ದೇಶನದ ಮೇರೆಗೆ ಉಚ್ಚಿಲ ಬಡಾ ಗ್ರಾಮ ಪಂಚಾಯತಿಯ ವಾಚನಾಲಯಕ್ಕೆ 5ರಿಂದ 10 ನೇ ತರಗತಿಯ ಹಿಂದಿನ ವರ್ಷದ 2 ಜೊತೆ ಪುಸ್ತಕಗಳನ್ನು ಅಧ್ಯಕ್ಷೆ ಜ್ಯೋತಿ ಗಣೇಶ್ ರವರಿಗೆ ಹಸ್ತಾಂತರಿಸಿದರು.

ಈ ಸಂದರ್ಭ ಡಿಡಿಪಿಐ ಎನ್.ಎಚ್.ನಾಗೂರರವರು ಮಾತನಾಡಿ, ರಜಾ ಅವಧಿಯಲ್ಲಿ 1-10ನೇ ತರಗತಿಗಳಲ್ಲಿ ಕಲಿಯುವ ಮಕ್ಕಳಲ್ಲಿ ಶಾಲಾ ಅವಧಿಯ ನಂತರವೂ ಓದುವ ಹವ್ಯಾಸ ಬೆಳೆಸುವ ಉದ್ದೇಶವಾಗಿದೆ.ಮಕ್ಕಳು, ಯುವಕರು ಇತರ ಪೂರಕ ಓದುವುದರ ಜೊತೆಗೆ ಪಠ್ಯ ಪುಸ್ತಕಗಳು ಓದಲು ಲಭ್ಯವಿದ್ದರೆ ಮಕ್ಕಳು ತಮ್ಮ ತರಗತಿಗೆ ಅನುಗುಣವಾಗಿ ಓದಬಹುದಾಗಿದೆ.

ಗ್ರಾಮದ ಯುವಕರು ಈ ಗ್ರಂಥಾಲಯಗಳನ್ನು ಬಹಳ ಉತ್ತಮವಾಗಿ ಬಳುಸುತ್ತಿರುವುದು ಕಂಡು ಬಂದಿದೆ. ಯುವಕರು ಇತರೆ ಪುಸ್ತಕ ಪತ್ರಿಕೆ ದಿನಪತ್ರಿಕೆ ಓದುವುದರ ಜೊತೆಗೆ ಈಗಿನ ಪಠ್ಯಕ್ಕೆ ಹಚ್ಚಿರುವ ಪುಸ್ತಕಗಳನ್ನು ಓದಿ ತಮ್ಮ ಭವಿಷ್ಯದ ವೃತ್ತಿ ಬದುಕಿಗೊಂದು ನೆಲೆ ಕಾಣಲು ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸಿದ್ದತೆ ಮಾಡಿಕೊಂಡು ಯಶಸ್ಸು ಸಾಧಿಸಲು ಈ ನಮ್ಮ ಪಠ್ಯಪುಸ್ತಕಗಳು ಸಹಾಯಕವಾಗಲಿ ಎನ್ನುವುದು ಶಿಕ್ಷಣ ಇಲಾಖೆಯ ಆಶಯವಾಗಿದೆ.

ಶಿಕ್ಷಣ ಇಲಾಖೆಯು ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಗ್ರಾಮ ಪಂಚಾಯತಿಯ ಗ್ರಾಮೀಣ ಗ್ರಂಥಾಲಯಗಳಿಗೂ ಪಠ್ಯಪುಸ್ತಕಗಳನ್ನು ನೀಡಲು ತಿಳಿಸಿದೆ. ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ನವೀನ್ ಭಟ್‍ರವರ ನಿರ್ದೇಶನದ ಪ್ರಕಾರ ಇಂದು ನಾಲ್ಕು ಗ್ರಾಮ ಪಂಚಾಯತ್ ಗ್ರಂಥಾಲಯಗಳಿಗೆ ಪಠ್ಯಪುಸ್ತಕಗಳಕನ್ನು ವಿತರಣೆ ಮಾಡಿದ್ದೇವೆ ಎಂದರು.

ಈ ಸಂದರ್ಭ ಕ್ಷೇತ್ರ ಶಿಕ್ಷಣ ಸಯೋಜಕ ಶಂಕರ ಸುವರ್ಣ, ಉಚ್ಚಿಲ ಬಡಾ ಗ್ರಾಪಂ ಅಧ್ಯಕ್ಷೆ ಜ್ಯೋತಿ ಗಣೇಶ್, ಸರಸ್ವತಿ ಮಂದಿರ ಶಾಲಾ ಮುಖ್ಯೋಪಾಧ್ಯಾ ಬಾಬುರಾಯ ಆಚಾರ್ಯ, ಶಿಕ್ಷಕ ಸದಾಶಿವ, ಪಂಚಾಯತ್ ಸಿಬ್ಬಂದಿಗಳಾದ ಶಶಿಕಾಂತ್ ಪೂಜಾರಿ, ರಮೇಶ್ ಮತ್ತಿತರರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.