ಉಡುಪಿಯಲ್ಲಿ ಅಸಾಯಕರಿಗೆ ನೀಡುತ್ತಿದ್ದ ಅನ್ನದಾನದ ಸಮಾರೋಪ

ಉಡುಪಿ: ಕೊರೊನ 2ನೇ ಲಾಕ್‌ಡೌನ್ ಪ್ರಾರಂಭದಿಂದ ಅಸಹಾಯಕ ವೃದ್ಧರು ಅಂಗವಿಕಲರು ಮಾನಸಿಕ ರೋಗಿಗಳಿಗೆ ಹಸಿದವರ ಹಸಿವು ನೀಗಿಸಿದ ವಿಶು ಶೆಟ್ಟಿಯವರ ಕಾರ್ಯ ಶ್ಲಾಘನೀಯ ಎಂದು ಹಿರಿಯ ಸಾಮಾಜಿಕ ಕಾರ್ಯಕರ್ತ ಕೃಷ್ಣ ಅಮೀನ್ ಮಧ್ವ ನಗರ ಹೇಳಿದರು.

ಇದೀಗ ಸೆಪ್ಟೆಂಬರ್ 23ತಾರೀಕಿನಿಂದ ಕೃಷ್ಣ ಮಠದಲ್ಲಿ ಅನ್ನ ಪ್ರಸಾದ ಪ್ರಾರಂಭವಾದ ಹಿನ್ನೆಲೆಯಲ್ಲಿ ಅನ್ನದಾನ ಕಾರ್ಯಕ್ರಮ ಸಮಾರೋಪಗೊಳಿಸಲಾಯಿತು.

ಏಪ್ರಿಲ್ 24ರಂದು ಲಾಕ್ ಡೌನ್ ಪ್ರಾರಂಭವಾದ ದಿನದಿಂದ ಪ್ರತಿದಿನ 500ಕ್ಕೂ ಹೆಚ್ಚು ಜನರಿಗೆ ಬೆಳಗಿನ ಉಪಾಹಾರ ಮಧ್ಯಾಹ್ನ ಹಾಗೂ ರಾತ್ರಿಯ ಊಟದ ವ್ಯವಸ್ಥೆಯನ್ನು ಶೆಟ್ಟಿಯವರು ಕಲ್ಪಿಸಿದ್ದರು. ಲಾಕ್ ಡೌನ್ ಮುಗಿದ ನಂತರ ಧಾರ್ಮಿಕ ಕೇಂದ್ರದಲ್ಲಿ ಅನ್ನ ಪ್ರಸಾದ ವಿತರಣೆಯು, ಕೊರೋನ ನಿಯಮಾವಳಿಯ ಹಿನ್ನಲೆಯಲ್ಲಿ ಆಗದ ಕಾರಣ ತೀರಾ ವೃದ್ದರು, ರೋಗಿಗಳು, ಅಂಗವಿಕಲರು, ಮಾನಸಿಕ ಅಸ್ವಸ್ಥರು ಊಟವಿಲ್ಲದೆ ಕಂಗಾಲಾಗಿ ಉಪವಾಸವಿರುವ ಪರಿಸ್ಥಿತಿ ಅರಿತು ಪ್ರತಿದಿನ ರಾಜಾಂಗಣ ಪಾರ್ಕಿಂಗ್ ಪರಿಸರ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ರಾತ್ರಿಯ ಊಟ ನೀಡುವುದನ್ನು ನಿರಂತರವಾಗಿ ವಿಶು ಶೆಟ್ಟಿ ಮುಂದುವರೆಸಿದ್ದರು. ಇದೀಗ ಅನ್ನ ಪ್ರಸಾದ ವಿತರಣೆ ಪ್ರಾರಂಭವಾಗಿರುವುದರಿಂದ ಸೆ. ೨೩ರಂದು ಊಟ ನೀಡಿ ಊಟ ಪಡೆದವರಿಗೆ ಉತ್ತಮ ರೀತಿಯಲ್ಲಿ ಸಮಾಜದಲ್ಲಿ ಬದುಕಿ ಆರೋಗ್ಯವಾಗಿರಲು ಶ್ರಮಿಸೋಣ ಎಂದು ಕಿವಿಮಾತು ಹೇಳಿದರು.


ರಾತ್ರಿಯ ಊಟ ವಿತರಣೆಗೆ ಕೃಷ್ಣ ಅಮೀನ್ ಮಧ್ವನಗರ ಹಾಗೂ ಗೋವಾ ಬೇಕರಿಯ ಹೆರಾಲ್ಡ್ ನಿರಂತರ ಸಹಕರಿಸಿದರು. ಹಾಗೂ ಸುಂದರ್ ಪೂಜಾರಿ ಮಧ್ವ ನಗರ ಉಪಸ್ಥಿತರಿದ್ದರು.

 

Related Posts

Leave a Reply

Your email address will not be published.