ಉಡುಪಿ ಜಿಲ್ಲೆಗೆ ಮುಖ್ಯಮಂತ್ರಿ ಭೇಟಿ: ಹೆಜಮಾಡಿಯಲ್ಲಿ ಅದ್ಧೂರಿಯ ಸ್ವಾಗತ

ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಪ್ರಥಮ ಬಾರಿಗೆ ಉಡುಪಿ ಜಿಲ್ಲೆಗೆ ಆಗಮಿಸಿದ ಬಸವರಾಜ್ ಬೊಮ್ಮಾಯಿ ಅವರನ್ನು ಜಿಲ್ಲೆಯ ಗಡಿಭಾಗದ ಹೆಜಮಾಡಿಯಲ್ಲಿ ಸಾಂಪ್ರದಾಯಿಕವಾಗಿ ಮಹಿಳೆಯರು ಆರತಿ ಎತ್ತಿ ಅದ್ಧೂರಿಯಾಗಿ ಸ್ವಾಗತಿಸಲಾಯಿತು.

ಭದ್ರತೆಯ ದೃಷ್ಠಿಯಿಂದ ಉಡುಪಿ ಜಿಲ್ಲಾ ಗಡಿಭಾಗ ಹೆಜಮಾಡಿ ಟೋಲ್ ಗೇಟ್ ಬಳಿಯ ಎಲ್ಲಾ ಅಂಗಡಿ ಮುಗ್ಗಟ್ಟುಗಳನ್ನು ಪೆÇಲೀಸರು ಮುಚ್ಚಿಸಿದ್ದರು. ಮುಖ್ಯಮಂತ್ರಿಗಳಿಗೆ ಜಿಲ್ಲಾ ಎಸ್ಪಿ ವಿಷ್ಣುವರ್ಧನ್ ಸಹಿತ ಉನ್ನತ ಪೆÇಲೀಸ್ ಅಧಿಕಾರಿಗಳು ಭದ್ರತೆ ಒದಗಿಸಿದ್ದರು. ಬಿಜೆಪಿಯ ಸಾಮಾನ್ಯ ಕಾರ್ಯಕರ್ತರನ್ನು ಬ್ಯಾರೀಕೆಡ್ ಹಾಕಿ ಸಿಎಂ ಬಳಿ ಬಾರದಂತೆ ತಡೆಯಲಾಗಿದೆಯಾದರೂ, ಸ್ಥಳೀಯ ಸಹಿತ ಜಿಲ್ಲಾ ಮಟ್ಟದ ಪಕ್ಷದ ಪದಾಧಿಕಾರಿಗಳು ಸಿಎಂಗೆ ಹಾರ ತುರಾಯಿ ಹಾಕುವ ತರಾತುರಿಯಲ್ಲಿ ಸಾಮಾಜಿಕ ಅಂತರವನ್ನು ಮರೆಯುವ ಮೂಲಕ ಕೊರೋನಾ ನಿಯಮಗಳನ್ನು ಗಾಳಿಗೆ ತೂರಿದ್ದಾರೆ. ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ,ಇಂದನ ಮತ್ತು ಕನ್ನಡ ಸಂಸ್ಕೃತಿ ಇಲಾಖಾ ಸಚಿವ ವಿ ಸುನಿಲ್ ಕುಮಾರ್,ಸಮಾಜ ಕಲ್ಯಾಣ ಹಾಗು ಹಿಂದುಳಿದ ವರ್ಗಗಳ ಸಚಿವ ಕೋಟಾ ಶ್ರೀನಿವಾಸ ಪೂಜಾರಿ,ಶಾಸಕರಾದ ಲಾಲಾಜಿ ಆರ್ ಮೆಂಡನ್,ರಘುಪತಿ ಭಟ್, ಬಿಜೆಪಿ ಮುಂಖಂಡರುಗಳಾದ ಮಿಥುನ್ ಆರ್. ಹೆಗ್ಡೆ, ಸುರೇಶ್ ಶೆಟ್ಟಿ ಗುರ್ಮೆ, ಶಿವ ಪ್ರಸಾದ್ ಶೆಟ್ಟಿ ಎಲ್ಲದಡಿ, ಅರುಣ್ ಶೆಟ್ಟಿ ಪಾದೂರು, ಗೀತಾಂಜಲಿ ಸುವರ್ಣ, ಮುಂತಾದವರಿದ್ದರು.

 

Related Posts

Leave a Reply

Your email address will not be published.