ಎಸ್.ಡಿ.ಎಂ.ನವಿದ್ಯಾರ್ಥಿಗಳಿಗೆ ಅಮೆರಿಕಾ ವಿ.ವಿ ಪಿ.ಎಚ್.ಡಿ ಫೆಲೋಷಿಪ್

ಉಜಿರೆ, ಆ.12: ಉಜಿರೆಯಎಸ್.ಡಿ.ಎಂ ಸ್ನಾತಕೋತ್ತರಕೇಂದ್ರದರಸಾಯನಶಾಸ್ತ್ರ ವಿಭಾಗದಇಬ್ಬರು ವಿದ್ಯಾರ್ಥಿಗಳು ಅಮೆರಿಕಾದಎರಡು ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳಲ್ಲಿ ಪಿ.ಎಚ್.ಡಿ ಸಂಶೋಧನಾಅಧ್ಯಯನ ಕೈಗೊಳ್ಳಲು ಫೆಲೋಷಿಪ್ ಪಡೆದಿದ್ದಾರೆ.

ವಿಭಾಗದ 2017-19ನೇ ಸಾಲಿನಲ್ಲಿಆರ್ಗ್ಯಾನಿಕ್ ಕೆಮಿಸ್ಟ್ರಿ  ವಿಭಾಗದಲ್ಲಿಸ್ನಾತಕೋತ್ತರ ವ್ಯಾಸಂಗ ಪೂರೈಸಿದ್ದ ಗಿರೀಶ್‍ಗೌಡಆರ್ ಮತ್ತುಕೆಮಿಸ್ಟ್ರಿ ವಿಭಾಗದಲ್ಲಿಅಧ್ಯಯನನಿರತರಾಗಿದ್ದಸಾಧನಾ ಭಟ್‍ಫೆಲೋಷಿಪ್ ಆಯ್ಕೆ ಪ್ರಕ್ರಿಯೆಯ ಭಾಗವಾಗಿ ನಡೆಯುವಜಿ.ಆರ್.ಇ ಮತ್ತುಟಫೆಲ್ ಪರೀಕ್ಷೆಗಳಲ್ಲಿಉತ್ತಮ ಅಂಕಗಳನ್ನು ಗಳಿಸಿಉತ್ತೀರ್ಣರಾಗಿದ್ದರು. ಆ ಮೂಲಕಅಮೆರಿಕಾದ ವಿವಿಧ ವಿಶ್ವವಿದ್ಯಾನಿಲಯಗಳಲ್ಲಿ ಸಂಶೋಧನೆ ಕೈಗೊಳ್ಳುವ ಶೈಕ್ಷಣಿಕಅರ್ಹತೆಯನ್ನು ಗಳಿಸಿಕೊಂಡಿದ್ದರು. ಉನ್ನತ ಶಿಕ್ಷಣದ ಹಂತದಲ್ಲಿಇವರಿಬ್ಬರೂಪಡೆದ ಅಂಕಗಳು ಮತ್ತು ಸಂಶೋಧನಾಜ್ಞಾನಕೌಶಲ್ಯವನ್ನು ಪರಿಗಣಿಸಿ ಅಮೆರಿಕಾದಹ್ಯೂಸ್ಟನ್ ಮತ್ತುಟೆನ್ನೆಸೆವಿಶ್ವವಿದ್ಯಾನಿಲಯಗಳು ಸಂಶೋಧನಾ ಫೆಲೋಷಿಪ್‍ಗೆಆಯ್ಕೆ ಮಾಡಿವೆ.


ಗಿರೀಶ್‍ಗೌಡಆರ್‍ಅವರುಅಮೆರಿಕಾದ ಹ್ಯೂಸ್ಟನ್ ವಿಶ್ವವಿದ್ಯಾನಿಲಯದನ್ಯಾಚ್ಯುರಲ್ ಸೈನ್ಸಸ್ ಮತ್ತು ಮ್ಯಾಥಮೆಟಿಕ್ಸ್‍ಕಾಲೇಜಿನಲ್ಲಿಆರ್ಗೆನೋ ಮೆಟ್ಯಾಲಿಕ್ ಕೆಮಿಸ್ಟ್ರಿಗೆ ಸಂಬಂಧಿಸಿದಂತೆ ಪಿ.ಎಚ್.ಡಿ ಸಂಶೋಧನಾಅಧ್ಯಯನ ಕೈಗೊಳ್ಳಲಿದ್ದಾರೆ. ಅಮೆರಿಕಾದಲ್ಲಿ ಪ್ರತಿಷ್ಠಿತವೆನ್ನಿಸಿದ ಮತ್ತೊಂದು ವಿಶ್ವವಿದ್ಯಾನಿಲಯವಾದಯುನಿವರ್ಸಿಟಿ ಆಫ್‍ಟೆನೆಸೆಯಲ್ಲಿ ಸಾಧನಾ ಭಟ್ ಸಂಶೋಧನಾಅಧ್ಯಯನ ಕೈಗೊಳ್ಳಲಿದ್ದಾರೆ.

ಈ ಫೆಲೋಷಿಪ್ ಅವಧಿಐದು ವರ್ಷಗಳದ್ದು. ರಸಾಯನಶಾಸ್ತ್ರಅಕ್ಯಾಡೆಮಿಕ್ ವಲಯದಲ್ಲಿ ನಡೆಯುವ ಸಂಶೋಧನೆಗೆಜಾಗತಿಕ ಮನ್ನಣೆಇದೆ. ಸಂಶೋಧನಾ ಫಲಿತಾಂಶಗಳನ್ನು ಆಧರಿಸಿಕೊಂಡು ಮಹತ್ವದ ಆವಿಷ್ಕಾರಗಳು ನಡೆಯುತ್ತವೆ. ಅಂಥ ಆವಿಷ್ಕಾರಕ್ಕೆ ಬೇಕಾದ ವಿನೂತನ ಹೊಳಹುಗಳನ್ನು ರೂಪಿಸುವಲ್ಲಿ ಈ ಪಿ.ಎಚ್.ಡಿ ಸಂಶೋಧನೆ ಮಹತ್ವದ ಪಾತ್ರವಹಿಸುತ್ತದೆ. ಈ ಸಂಶೋಧನಾ ಫೆಲೋಶಿಪ್‍ಗೆ ಆಯ್ಕೆಯಾಗುವ ಮೂಲಕ ಎಸ್.ಡಿ.ಎಂ ಸ್ನಾತಕೋತ್ತರಕೇಂದ್ರದಅರ್ಗ್ಯಾನಿಕ್ ಕೆಮಿಸ್ಟ್ರಿ ಮತ್ತು ಕೆಮಿಸ್ಟ್ರಿ ವಿಭಾಗದಈ ಇಬ್ಬರೂವಿದ್ಯಾರ್ಥಿಗಳು ಮಹತ್ವದ ಶೈಕ್ಷಣಿಕ ಮುನ್ನಡೆ ಸಾಧಿಸಿದಂತಾಗಿದೆ.

 

Related Posts

Leave a Reply

Your email address will not be published.