ಎ. ಜೆ ಆಸ್ಪತ್ರೆಯಲ್ಲಿ ರೋಗಿಗಳ ವಿಶ್ವ ಸುರಕ್ಷತಾ ದಿನ ಆಚರಣೆ

ಈ ವರ್ಷದ ರೋಗಿಗಳ ವಿಶ್ವ ಸುರಕ್ಷತಾ ದಿನದ ಥೀಮ್ “ತಾಯಿ ಮತ್ತು ನವಜಾತ ಶಿಶುಗಳ ಆರೈಕೆ”. ರೋಗಿಗಳ ಸುರಕ್ಷತೆಯ ಬಗ್ಗೆ ಜಾಗ್ರತಿ ಮೂಡಿಸಲು ರೋಗಿಗಳ ವಿಶ್ವ ಸುರಕ್ಷತಾ ದಿನವನ್ನು ವಿಶ್ವದಾದ್ಯಂತ ಆಚರಿಸಲಾಗುತ್ತದೆ.ಎ. ಜೆ ಆಸ್ಪತ್ರೆಯಲ್ಲಿ ರೋಗಿಗಳ ವಿಶ್ವ ಸುರಕ್ಷತಾ ದಿನವನ್ನುಆಚರಿಸಲಾಯಿತು. ಈ ಸಂಧರ್ಭ ಆಸ್ಪತ್ರೆಯಲ್ಲಿ ರೋಗಿಗಳ ಸುರಕ್ಷತೆಗಾಗಿಡಬ್ಲ್ಯೂ.ಹೆಚ್.ಓ ಮಾರ್ಗಸೂಚಿಗಳ ಅನುಷ್ಠಾನ ಮತ್ತು ಪಾಲನೆ ಬಗ್ಗೆ ವಿಶ್ಲೇಷಿಸಲಾಯಿತು.

ಡಾ. ಮಂಜುನಾಥ್‍ಕಾಮತ್, ಕನ್ಸಲ್ಟೆಂಟ್ ಸ್ತ್ರೀ ರೋಗತಜ್ಞ, ಡಾ. ಮಂಜುನಾಥ್ ಬಿ.ವಿ, ಕನ್ಸಲ್ಟೆಂಟ್ ಹ್ರದ್ರೋಗತಜ್ಞ, ಡಾ. ಪ್ರೇಮ್ ಆಳ್ವ, ಕನ್ಸಲ್ಟೆಂಟ್ ಮಕ್ಕಳ ಹ್ರದ್ರೋಗತಜ್ಞ, ಡಾ. ನವೀನ್‍ರುಡೋಲ್ಫ್‍ರೋಡ್ರಿಗಸ್, ಕನ್ಸಲ್ಟೆಂಟ್ ಪೈನ್‍ಆಂಡ್ ಪೇಲಿಯೇಟಿವ್ ಕೇರ್, ಡಾ. ಸುದೇಶ್‍ರಾವ್, ಇಂಟೆನ್ಸಿವ್‍ಕೇರ್ ಮುಖ್ಯಸ್ಥ ಮತ್ತು ಡಾ. ರೋಹಿತ್, ತುರ್ತು ನಿಗಾ ಘಟಕದ ಮುಖ್ಯಸ್ಥ ಇವರುಗಳು ಮಾತನಾಡಿ ರೋಗಿಯ ಸುರಕ್ಷತಾ ಮಾರ್ಗಸೂಚಿಗಳ ಪಾಲನೆಯ ಪ್ರಾಮುಖ್ಯತೆ ಬಗ್ಗೆ ಮಾಹಿತಿ ನೀಡಿದರು.

ಈ ಸಂಧರ್ಭ ಮಾತನಾಡಿದಡಾ. ಅಮಿತ ಪಿ. ಮಾರ್ಲ, ಆಡಳಿತ ವೈದ್ಯಕೀಯ ನಿರ್ದೇಶಕರು ರೋಗಿಗಳ ಸುರಕ್ಷತಾ ಮಾರ್ಗಸೂಚಿಗಳನ್ನು ಅನುಷ್ಠಾನಗೊಳಿಸುವ ಮತ್ತುಅನುಸರಿಸುವ ಪ್ರಾಮುಖ್ಯತೆಯನ್ನು ಪುನರುಚ್ಚರಿಸಿದರು.ವಿವಿಧ ವಿಭಾಗಗಳ ಸಿಬ್ಬಂದಿ ಸುರಕ್ಷತಾ ಗುರಿಗಳನ್ನು ಸಾಧಿಸಲು ಸುರಕ್ಷತಾ ಮಾರ್ಗಸೂಚಿಗಳ ಅನುಷ್ಠಾನವು ಹೇಗೆ ಸಹಾಯ ಮಾಡಿದೆಎಂದುತಮ್ಮಅನುಭವವನ್ನು ಹಂಚಿಕೊಂಡರು.

ಈ ಸಂಧರ್ಭ ಆಯೋಜಿಸಿದ ಇ-ಪೆÇೀಸ್ಟರ್ ಸ್ಪರ್ಧೆಯಲ್ಲಿ ಸಿಬ್ಬಂದಿ ಮತ್ತು ಎಂ.ಹೆಚ್.ಎ ವಿಧ್ಯಾರ್ಥಿಗಳು ಭಾಗವಹಿಸಿದರು.ರೋಗಿಗಳ ಸುರಕ್ಷತಾ ಪ್ರಮಾಣ ವಚನ ಸ್ವೀಕರಿಸುವುದರೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು. ವೈದ್ಯರು, ಸಿಬ್ಬಂದಿ ಮತ್ತು ವಿಧ್ಯಾರ್ಥಿಗಳು ಹಾಜರಿದ್ದರು.

Related Posts

Leave a Reply

Your email address will not be published.