ಕಾಪುವಿನಲ್ಲಿ ಕಾಂಗ್ರೆಸ್, ಜೆಡಿಎಸ್, ದಲಿತ ಸಂಘಟನೆಗಳಿಂದ ಜನಾಗ್ರಹ ಆಂದೋಲನ

ಕೇಂದ್ರ ಮತ್ತು ರಾಜ್ಯ ಸರ್ಕಾರದ ಜನವಿರೋಧಿ ನೀತಿ ವಿರುದ್ಧ ಕಾಂಗ್ರೆಸ್, ಜೆಡಿಎಸ್, ದಲಿತ ಸಂಘಟನೆಗಳಿಂದ ಜನಾಗ್ರಹ ಆಂದೋಲನ ಕಾಪುವಿನಲ್ಲಿ ನಡೆಯಿತು.

ಕಾಪುವಿನಲ್ಲಿ ಶಾಸಕ ಲಾಲಾಜಿ ಮೆಂಡನ್ ಕಛೇರಿಗೆ ಮುತ್ತಿಗೆ ಹಾಕಿ ರಾಜ್ಯ, ಕೇಂದ್ರ ಸರ್ಕಾರಗಳ ಹಾಗೂ ಕಾಪು ಶಾಸಕರ ವಿರುದ್ಧ ಘೋಷಣೆಯನ್ನು ಕೂಗುವ ಮೂಲಕ ಪ್ರತಿಭಟಿಸಿದ್ದಾರೆ.

ನೂರಾರು ಕಾರ್ಯಕರ್ತರು ಕಾಪು ರಾಜೀವ ಭವನದಿಂದ ಜಾಥದ ಮೂಲಕ ಶಾಸಕರ ಕಛೇರಿಯ ಮುಂಭಾಗದಲ್ಲಿ ಸಾಮಾಜಿಕ ಅಂತರದಲ್ಲಿ ನಿಂತು ಪ್ರತಿಭಟನೆಗೆ ಸಾತ್ ನೀಡಿದ್ದಾರೆ. ಶಾಸಕರ ಕಛೇರಿ ಮುಂಭಾಗ ಬಡವರ ಆಹಾರ ಧಾನ್ಯಗಳ ಖಾಲಿ ಚೀಲಕ್ಕೆ ಬೆಂಕಿ ಹಾಕಿ ಪ್ರತಿಭಟಿಸಿಲಾಯಿತು. ಬಳಿಕ ಮಾತನಾಡಿದ ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಸರಿಯಾದ ಸಮಯದಲ್ಲಿ ವ್ಯಾಕ್ಸಿನ್ ಆಗಿರಬಹುದು, ವೆಂಟಿಲೇಶನ್ ಆಗಿರಬಹುದು, ಆಕ್ಸಿಜನ್ ಆಗಿರ ಬಹುದು, ಬೆಡ್ ಆಗಿರಬಹುದು ಸಿಕ್ಕಿದ್ದರೆ ಇಷ್ಟು ಪ್ರಮಾಣದಲ್ಲಿ ಮಾರಾಣ ಹೋಮ ನಡೆಸುವ ತಾಕತ್ತು ಕೊರೋನಾ ಇಲ್ಲ. ಇದೀಗ ಕೇಂದ್ರ ರಾಜ್ಯ ಸರ್ಕಾರಗಳ ನಿರ್ಲಕ್ಷ್ಯಕ್ಕೆ ಅದೆಷ್ಟೋ ಅಮಾಯಕರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರತಿಭಟನೆಯಲ್ಲಿ ಪ್ರಮುಖರಾದ ನವೀನ್ ಚಂದ್ರ ಸುವರ್ಣ, ನವೀನ್ ಜೆ. ಶೆಟ್ಟಿ, ಸುದೀರ್ ಕರ್ಕೇರ,, ವಿನಯ ಬಲ್ಲಾಳ್, ನವೀನ್ ಶೆಟ್ಟಿ, ರಮೀಜ್ ಹುಸೇನ್, ಕೇಶವ ಸಾಲ್ಯಾನ್, ಕರುಣಾಕರ್ ಪೂಜಾರಿ ಇದ್ದು ಪ್ರತಿಭಟನೆಯ ವೇಳೆ ಯಾವುದೇ ಅಹಿತಕರ ನಡೆಯದಂತೆ ಕಾಪು ಪೊಲೀಸರು  ಬಿಗಿ ಬಂದೋಬಸ್ತ್   ವಹಿಸಿದ್ದಾರೆ.

Related Posts

Leave a Reply

Your email address will not be published.