ಕಾಪು ಮಾರಿಗುಡಿ ದೇವಸ್ಥಾನದಲ್ಲಿ ಮಹಾಚಂಡಿಕಾಯಾಗ

ಇತಿಹಾಸ ಪ್ರಸಿದ್ಧ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಶರನ್ನವರಾತ್ರಿಯ ಪ್ರಯುಕ್ತ ಮಹಾಚಂಡಿಕಾಯಾಗ, ಪೂರ್ಣಾಹುತಿ ಮತ್ತು ಭೂರಿ ಭೋಜನ ಸಂಪನ್ನಗೊಂಡಿತು.

ಹೊಸ ಮಾರಿಗುಡಿಯ ಪಧಾನ ತಂತ್ರಿಗಳಾದ ರಾಘವೇಂದ್ರ ತಂತ್ರಿ ಕೊರಂಗ್ರಪಾಡಿ ಇವರ ಮಾರ್ಗದರ್ಶನದಲ್ಲಿ ಪಧಾನ ಅರ್ಚಕ ಶ್ರೀನಿವಾಸ ತಂತ್ರಿಯವರ ನೇತೃತ್ವದಲ್ಲಿ ಮಹಾ ಚಂಡಿಕಾಯಾಗದ ಧಾರ್ಮಿಕ ವಿಧಿ ವಿಧಾನಗಳು ಜರಗಿದವು.

ಚಂಡಿಕಾಯಾಗ, ಪೂರ್ಣಾಹುತಿಯೊಂದಿಗೆ ಸುವಾಸಿನಿ ಪೂಜೆ, ನವಗ್ರಹ ಪೂಜೆ ಹಾಗೂ ವಿಷ್ಣು ಪೂಜೆ ನೆರವೇರಿತು. ಈ ಸಂದರ್ಭ ಕಾಪು ಶಾಸಕ ಲಾಲಾಜಿ ಮೆಂಡನ್, ಮಾಜಿ ಶಾಸಕ ವಿನಯ್ ಕುಮಾರ್ ಸೊರಕೆ, ಹೊಸ ಮಾರಿಗುಡಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ರಮೇಶ್ ಹೆಗ್ಡೆ, ಕಾರ್ಯ ನಿರ್ವಹಣಾಧಿಕಾರಿ ಪ್ರಶಾಂತ್ ಕುಮಾರ್ ಶೆಟ್ಟಿ, ಅಭಿವೃದ್ಧಿ ಸಮಿತಿಯ ಗೌರವಾಧ್ಯಕ್ಷ ಪ್ರಕಾಶ್ ಶೆಟ್ಟಿ ಬಂಜಾರ, ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ, ಕಾರ್ಯಾಧ್ಯಕ್ಷ ಸುರೇಶ್ ಪಿ. ಶೆಟ್ಟಿ ಗುರ್ಮೆ, ಯೋಗೀಶ್ ಶೆಟ್ಟಿ, ಮನೋಹರ್ ಶೆಟ್ಟಿ, ಮತ್ತಿತರರು ಉಪಸ್ಥಿತರಿದ್ದರು

 

Related Posts

Leave a Reply

Your email address will not be published.