ಕಾರ್ಕಳದಲ್ಲಿ ಕನ್ನಡ ಗೀತ ಗಾಯನ ಕಾರ್ಯಕ್ರಮ

ಕಾರ್ಕಳ:ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆದೇಶದಂತೆ ಕನ್ನಡ ಅಭಿಮಾನವನ್ನು ವೃದ್ಧಿಸುವ ನಿಟ್ಟಿನಲ್ಲಿ ಕನ್ನಡ ಗೀತ ಗಾಯನವು ಕಾರ್ಕಳದಲ್ಲಿ ನಡೆಯಿತು. ಕಾರ್ಕಳದ ಬಾಹುಬಲಿ ಬೆಟ್ಟದ ತಪ್ಪಲಲ್ಲಿರುವ ಚತುರ್ಮುಖ ಬಸದಿಯ ಆವರಣದಲ್ಲಿ ನೂರಾರು ಶಾಲಾ ಮಕ್ಕಳು ಕನ್ನಡ ನಾಡಗೀತೆ ಹಾಡಿದರು.

ಈ ಸಂದರ್ಭದಲ್ಲಿ ಪುರಸಭಾ ಮುಖ್ಯಾಧಿಕಾರಿ ರೂಪ ಶೆಟ್ಟಿ, ಮುಖ್ಯ ಕ್ಷೇತ್ರ ಶಿಕ್ಷಣಾಧಿಕಾರಿ, ಸಂಗೀತ ಶಿಕ್ಷಕರಾದ ಶ್ರೀ ಕೃಷ್ಣ, ಅನಂತ ಪದ್ಮನಾಭ ಭಟ್, ಮುನಿರಾಜ ರೆಂಜಾಳ, ಶಾಲಾ, ಮುಖ್ಯ ಉಪಾಧ್ಯಾಯರು, ಹಾಗೂ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದು ಸಂಗೀತ ಶಿಕ್ಷಕ ಕೃಷ್ಣರವರು ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು.

 

Related Posts

Leave a Reply

Your email address will not be published.