ಕಾರ್ಕಳದಲ್ಲಿ 75ನೇ ಸ್ವಾತಂತ್ರ್ಯೋತ್ಸವ ಆಚರಣೆ

ಕಾರ್ಕಳ: 75ನೇ ಅಮೃತ ಮಹೋತ್ಸವ ವರ್ಷದ ಸ್ವಾತಂತ್ರ್ಯ ದಿನಾಚರಣೆಯನ್ನು ಕೋವಿಡ್ ನಿಯಮಾನುಸಾರವಾಗಿ ಬಹಳ ಸರಳವಾಗಿ ಕಾರ್ಕಳದ ಗಾಂಧಿ ಮೈದಾನದಲ್ಲಿ ಆಚರಿಸಲಾಯಿತು. 

ಕಾರ್ಕಳ ತಾಲೂಕು ತಹಶೀಲ್ದಾರರಾದ ಪ್ರಕಾಶ್ ಮರಬಳ್ಳಿ ಧ್ವಜಾರೋಹಣ ಮಾಡಿ ಮಾತನಾಡಿದರು. ಬ್ರಿಟಿಷರ ದಾಸ್ಯ ಸಂಕೋಲೆಯಿಂದ ಮುಕ್ತಿ ಗೊಂಡ ಭವ್ಯ ಭಾರತವು ನಡೆದು ಬಂದ ದಾರಿ ಹಾಗೂ ಸಾಧನೆ ತುಂಬಾ ಮಹತ್ವವಾದದ್ದು. ಭಾರತವು ಕೃಷಿ ಪ್ರಧಾನ ದೇಶವಾಗಿದೆ. ರಾಷ್ಟ್ರದ ಬೆನ್ನೆಲುಬಾದ ಕೃಷಿಕನ ಕೈ ಬಲಪಡಿಸುವುದು ನಮ್ಮ ಮುಂದಿನ ಕರ್ತವ್ಯವಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಪ್ರೇಡ್ ಕಮಾಂಡರ್ ಆಗಿ ಕಾರ್ಕಳ ನಗರ ಠಾಣಾಧಿಕಾರಿ ಮಧು ಕಾರ್ಯನಿರ್ವಹಿಸಿದರು. ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಸುಮ ಕೇಶವ್, ಉಪಾಧ್ಯಕ್ಷೆ ಪಲ್ಲವಿ, ಪುರಸಭೆ ಅಧಿಕಾರಿ ರೂಪ ಶೆಟ್ಟಿ, ಗುರುದತ್ ಹಾಗೂ ಪೋಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.

 

 

Related Posts

Leave a Reply

Your email address will not be published.